ಬೆಂಗಳೂರು : ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ಹರಿದು ಯುವತಿ ಬಲಿಯಾಗಿರುವ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ನಡೆದಿದೆ. BMTC
ಸುಮ ಮೃತಪಟ್ಟ ಯುವತಿ. ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ನುಗ್ಗಿ ಕ್ಯಾಂಟಿನ್ ಗೆ ಅಪ್ಪಳಿಸಿದೆ. ಈ ವೇಳೆ ಬಸ್ ಕಾಯುತ್ತ ನಿಂತಿದ್ದ ಯುವತಿ ಸುಮಾ ಮೇಲೆ ಬಸ್ ಹರಿದಿದೆ. ಕೆಲಸಕ್ಕೆ ಹೋಗಲು ಪೀಣ್ಯ 2ನೇ ಹಂತದ ಬಳಿ ಬೆಳಿಗ್ಗೆ ಪುಟ್ ಪಾತ್ ಮೇಲೆ ಸುಮಾ ನಿಂತಿದ್ದರು.
ಇದನ್ನೂ ಓದಿ : ಆರ್‌ಎಸ್‌ಎಸ್ ಮತ್ತು ಎಡ ಪಕ್ಷಗಳನ್ನು ಸಮೀಕರಿಸುವ ರಾಹುಲ್ ಗಾಂಧಿ ಹೇಳಿಕೆಗೆ ಎಂ. ಎ. ಬೇಬಿ ಆಕ್ರೋಶ BMTC
ಈ ವೇಳೆ ಮೆಜೆಸ್ಟಿಕ್‌ನಿಂದ ಪೀಣ್ಯ 2ನೇ ಹಂತದ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ನುಗ್ಗಿ ಹೊಟೇಲ್ ಗೆ ಅಪ್ಪಳಿಸಿದೆ. ಬಸ್ ಗೆ ಸಿಲುಕಿದ ಸುಮಾ ಗಂಭೀರವಾಗಿ ಗಾಯಗೊಂಡಿದ್ದು,ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸುಮಾ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ. ಇತರ ಐವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜಾಗ್ರತೆಯಿಂದ ಬಸ್ ಚಲಾಯಿಸಿದ್ದಕ್ಕಾಗಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕ ರಮೇಶನನ್ನು ಶೇ. 50 ರಷ್ಟು ಜೀವನಾದಾರ ಭತ್ಯೆನೀಡಿ ಅಮಾನತ್ತಯಗೊಳಿಸಿದೆ.
ಪೀಣ್ಯ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ FIR ದಾಖಲಾದ ಬಳಿಕ ರಮೇಶನನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಕುಟುಂಸ್ಥರಿಗೆ 1 ಲಕ್ಷ ರೂಪಾಯಿ ಘೋಷಣೆ ಮಾಡಿದೆ. ಅಂತ್ಯಕ್ರಿಯೆ ವೇಳೆ ಬಿಎಂಟಿಸಿ ಅಧಿಕಾರಿಗಳು 50000 ನೀಡಿದರು.ಮೂರು ದಿನದ ಬಳಿಕ 50000 ನೀಡುವ ಭರವಸೆ ನೀಡಿದೆ. ಅಲ್ಲದೆ ಮೃತ ಸುಮಾ ಕುಟುಂಬದವರಿಗೆ ವಿಮೆ ಹಣ ಕ್ಲೈಂ ಮಾಡಿಕೊಳಿ ಎಂದು ಹೆಳಿ ಕೈ ತೊಳೆದುಕೊಂಡಿದೆ.
ಇದನ್ನೂ ನೋಡಿ : ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣಪ್ರಭಾವ ಲೆಕ್ಕಿಸದೆ ಬಂಧಿಸಬೇಕು | Janashakthi Media
