ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ನೀಡಿದರೆ ಹೆಚ್ಚು ಜನ ಪ್ರಯಾಣಿಸಿ ಆದಾಯ ಹೆಚ್ಚುತ್ತದೆ ಎಂದು ಬಿ.ಎಂ.ಆರ್.ಸಿ. ಎಲ್ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆಯೆಂದು ಸಂಚಾಲಕರಾದ ಗೌರಮ್ಮ ಹಾಗೂ ರವಿಚಂದ್ರನ್ ತಿಳಿಸದ್ದಾರೆ. ನಮ್ಮ
ವಾಸ್ತವದಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆಯನ್ನು ಹೆಚ್ಚಿಸಲು ದರ ಏರಿಕೆಯನ್ನು ಹಿಂತೆಗೆದುಕೊಂಡು, ಅಗತ್ಯಕ್ಕನುಗುಣವಾಗಿ ಬೋಗಿಗಳು ಮತ್ತು ಟ್ರಿಪ್ ಗಳನ್ನು ಹೆಚ್ಚು ಮಾಡುವುದು. ಮೆಟ್ರೋ ನಿಲ್ದಾಣಗಳಲ್ಲಿ ಉಚಿತ.
ಅಥವಾ ರಿಯಾಯಿತಿ ದರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು. ಮೆಟ್ರೋ ನಿಲ್ದಾಣಗಳಿಂದ ಮೆಟ್ರೋ ಫೀಡರ್ ಬಿ.ಎಂ.ಟಿ.ಸಿ. ಬಸ್ ಗಳನ್ನು ನಿಗದಿತವಾಗಿ ಒದಗಿಸುವುದು.
ಇದನ್ನೂ ಓದಿ: ಪಶು-ಪಕ್ಷಿ ಲೋಕದ ವಿಸ್ಮಯಗಳು: ಸಂಚಿಕೆ-5
ಹೊಸ ಮಾರ್ಗಗಳನ್ನು ತ್ವರಿತವಾಗಿ ಚಾಲನೆಗೆ ಬಿಡುವುದು ಮುಂತಾದ ಜನಸಾಮಾನ್ಯರ ಸ್ನೇಹೀ ಕ್ರಮಗಳು ಖಂಡಿತವಾಗಿಯೂ ಆದಾಯವನ್ನು ಹಲವು ಪಟ್ಟು ಹೆಚ್ಚಿಸುತ್ತದೆ.
ಇದಲ್ಲದೇ ಮೆಟ್ರೋ ದಲ್ಲಿ ಹೆಚ್ಚು ಜನ ಪ್ರಯಾಣದ ಆಯ್ಕೆ ಮಾಡಿಕೊಂಡಾಗ ತಾನೇ ತಾನಾಗಿ ಬೆಂಗಳೂರಿನ ನರಕ ಸದೃಶವಾದ ಟ್ರಾಫಿಕ್ ಸಮಸ್ಯೆಗೂ ಮುಕ್ತಿ ಸಿಗುತ್ತದೆ.
ಈ ಎಲ್ಲ ಕಾರಣಗಳಿಂದ ಬಿ.ಎಂ.ಆರ್.ಸಿ.ಎಲ್.ತನ್ನ ಆದಾಯವನ್ನು ಜನಸಾಮಾನ್ಯರ ದೈನಂದಿನ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ಏರಿಸಿದ ದರ ಇಳಿಸಿ, ಹೆಚ್ಚು ಬೋಗಿಗಳ ಮೆಟ್ರೋ ವ್ಯವಸ್ಥೆ ಕಲ್ಪಿಸಲು ಗಮನ ನೀಡಿ ಕೇವಲ ಆದಾಯವಲ್ಲ ಲಾಭವನ್ನೂ ಹೆಚ್ಚಿಸಿಕೊಳ್ಳಲು ಅವಕಾಶವಿದೆ.
ಆದ್ದರಿಂದ ಬಿ.ಎಂ.ಆರ್.ಸಿ.ಎಲ್ ಹೆಚ್ಚು ಜನರಿಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಆಗ್ರಹಿಸುತ್ತದೆ.
ಇದನ್ನೂ ನೋಡಿ: ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media
