ಬೆಂಗಳೂರು : BMRCL (ಬೆಂಗಳೂರು ಮೆಟ್ರೋ ರೈಲು ನಿಗಮ) ಕನ್ನಡೇತರರಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದ ಹಿನ್ನೆಲೆ ಕನ್ನಡ ಪರ ಹೋರಾಟಗಾರರು ಧರಣಿ ಆರಂಭಿಸಿದ್ದರು. ಈ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ BMRCL ಅಧಿಸೂಚನೆ ವಾಪಸ್ ಪಡೆಯಲು ನಿರ್ಧರಿಸಿದೆ.
ಇದನ್ನೂ ಓದಿ:-ಹಾಸನ ವಿವಿ ಉಳಿಸೋಣ – ಸಂಸದ ಶ್ರೇಯಸ್. ಎಂ. ಪಟೇಲ್
ಈ ಅಧಿಸೂಚನೆಯಲ್ಲಿ, 50 ಟ್ರೈನ್ ಆಪರೇಟರ್ ಹುದ್ದೆಗಳ ನೇಮಕಾತಿ ಗುತ್ತಿಗೆ ಆಧಾರದ ಮೇಲೆ ಮಾಡಬೇಕಾಗಿತ್ತು. ಆದರೆ ಈ ಜಾಹೀರಾತು ಹೊರಬಂದ ತಕ್ಷಣ ಕನ್ನಡ ಪರ ಹೋರಾಟಗಾರರು ಬಿಎಂಆರ್‌ಸಿಎಲ್ ಕಚೇರಿಗೆ ನುಗ್ಗಿ ಧರಣಿ ಪ್ರಾರಂಭಿಸಿದ್ದರು. ಮಾರ್ಚ್ 12 ರಂದು ಪ್ರಕಟಿತ ಅಧಿಸೂಚನೆಯಲ್ಲಿ, ಅರ್ಹ ಅಭ್ಯರ್ಥಿಗಳಿಗೆ ಕನ್ನಡದ ಎಲ್ಲಾ ನಾಲ್ಕು ಕೌಶಲ್ಯಗಳೂ (ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು) ತಿಳಿದಿರಬೇಕು ಎಂದು ತಿಳಿಸಿತ್ತು. ಹಾಗಾದರೆ, ಕನ್ನಡ ಹೊರತಾಗಿ ಬೇರೆ ಭಾಷೆ ಬರುವ ಅಭ್ಯರ್ಥಿಗಳಿಗೆ, ಒಂದು ವರ್ಷದಲ್ಲಿ ಪ್ರಾವೀಣ್ಯತೆ ಪಡೆಯಲು ತರಗತಿಗಳ ಸಂಯೋಜನೆ ಮಾಡಲಾಗುವುದು ಎಂದು ಹೇಳಲಾಗಿತ್ತು.
ಇದನ್ನೂ ಓದಿ:-ಖೋಟಾನೋಟು ದಂಧೆಯ ಅಡ್ಡೆ ಮೇಲೆ ಪೊಲೀಸರು ದಾಳಿ; ನಾಲ್ವರ ಬಂಧನ
ಇದಕ್ಕೆ ಪ್ರತಿಕ್ರಿಯೆ ಸೂಚಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದರು. ಹಾಗೆಯೇ, ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಕ ಮಾಡುವಂತೆ ಮನವಿ ಮಾಡಿದರು. ಹೋರಾಟದ ಬಳಿಕ, ಬಿಎಂಆರ್‌ಸಿಎಲ್ ಈ ನೇಮಕಾತಿ ಅಧಿಸೂಚನೆಯನ್ನು ವಾಪಸ್ ಪಡೆದಿದೆ.