ಕಸಬಾ ಬೆಂಗ್ರೆ: DYFI 11ನೇ ವಾರ್ಡ್ ಬೆಂಗ್ರೆ ಘಟಕ ವತಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆ ಸಹಯೋಗದೊಂದಿಗೆ ಕಸಬಾ ಬೆಂಗ್ರೆಯ SSF ಮದರಸದಲ್ಲಿ ಫೆಬ್ರವರಿ 8 ಭಾನುವಾರ ರಕ್ತದಾನ ಶಿಬಿರ ನಡೆಯಿತು. ಕಸಬಾ
ಕಾರ್ಯಕ್ರಮದ ಉದ್ಘಾಟನೆಯನ್ನು ದ. ಕ. ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಉದ್ಘಾಟಿಸಿ ರಕ್ತದಾನದ ಮಹತ್ವದ ಕುರಿತು ಮಾತನಾಡುತ್ತಾ, ಜಿಲ್ಲೆಯಲ್ಲಿ ಮತಾಂಧ ಶಕ್ತಿಗಳು ಕೋಮು ಪ್ರಚೋದನೆ ಕಾರ್ಯಕ್ರಮ ನಡೆಸಿದರೆ ನಾವುಗಳು ಹೆಚ್ಚು ರಕ್ತದಾನದಂತ ಒಳ್ಳೆಯ ಕಾರ್ಯಕ್ರಮ ನಡೆಸಬೇಕು ಮತ್ತು ನಾವು ನೀಡುವ ರಕ್ತ ನಾಳೆ ಅದು ಹಿಂದು, ಮುಸ್ಲಿಂ, ಕ್ರಿಸ್ತ ಯಾವುದೇ ಧರ್ಮದವನಿಗೂ ಸಹಾಯಾಗಬಹುದು. ಸೌಹಾರ್ದ ನೆಲೆಯಲ್ಲಿ ನಮ್ಮ ಕಾರ್ಯಕ್ರಮಗಳು ನಡೆಯಬೇಕು ಎಂದು ಮಾತನಾಡುತ್ತಾ ಎಲ್ಲರಿಗೂ ಶುಭ ಹಾರೈಸಿದರು.
DYFI ಮಾಜಿ ರಾಜ್ಯ ಅಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರಕ್ತದಾನ ಕಾರ್ಯಕ್ರಮದ ಕುರಿತು ಮಾತನಾಡಿದರು. ನಮ್ಮಲಿಲ್ಲ ಹಿಂದು ರಕ್ತ, ನಮ್ಮಲಿಲ್ಲ ಮುಸ್ಲಿಂ ರಕ್ತ,ನಮ್ಮಲಿಲ್ಲ ಕ್ರೈಸ್ತ ರಕ್ತ ನಮ್ಮಲ್ಲಿರುವುದು ಮಾನವ ಕೆಂಪು ರಕ್ತ DYFI ಘೋಷಣೆಯನ್ನು ನೆನಪಿಸಿ ಮಾತಾನಾಡಿದರು ಯುವಜನರು ಇಂದಿನ ಅವಶ್ಯಕತೆಗೆ ಹೆಚ್ಚು ರಕ್ತದಾನ ಮಾಡಬೇಕಿದೆ ಮತ್ತು DYFI ಇಂತಹ ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಅಂತ ತಿಳಿಸಿದರು.
ಇದನ್ನೂ ಓದಿ: ರಸ್ತೆ ಅಪಘಾತ: ಕಲ್ಯಾಣ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಶರಣಪ್ಪ ಸೈದಾಪುರ ನಿಧನ
ಬೆಂಗ್ರೆ AMD ಮಾಜಿ ಅಧ್ಯಕ್ಷರಾದ ಹಮೀದ್ ಹಾಜಿ,DYFI ಮಂಗಳೂರು ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ, ಮುಖಂಡರಾದ ಶ್ರೀನಾಥ್ ಕಾಟಿಪಳ್ಳ ಕಾರ್ಯಕ್ರಮದ ಕುರಿತು ಮಾತಾಡಿದರು.
DYFI ಮುಖಂಡರಾದ ಶಿನಾಥ್ ಕಾಟಿಪಳ್ಳ ಅವರು 70ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದವರು ಇವತ್ತು ಬೆಂಗ್ರೆಯಲ್ಲಿ ರಕ್ತದಾನ ಮಾಡಿದರು ಕಾರ್ಯಕ್ರಮದ ವೇದಿಕೆಯಲ್ಲಿ SSF ಮರ್ಕಝುನ್ನುರು ಮದ್ರಸ ಅಧ್ಯಕ್ಷರಾದ ಕುಞಿಮೋನು,ಫಾದರ್ ಮುಲ್ಲರ್ ವೈದ್ಯರಾದ ಡಾ. ರೀನಾ ಕಾರ್ಲಿನ್, DYFI ಮುಖಂಡರಾದ ಪಿ.ಜಿ ರಫೀಕ್, DHS ಮುಖಂಡರಾದ ಕೃಷ್ಣ ತನ್ನಿರುಬಾವಿ, ಕಸ್ಬಾ ಗ್ರಾಜುಯೇಟ್ ಫೊರಮ್ ಅಧ್ಯಕ್ಷರಾದ ಅಬ್ದುಲ್ ರಫೀಕ್, ಮುಖಂಡರಾದ ತೈಯೂಬ್ ಬೆಂಗ್ರೆ,ನೌಶಾದ್ ಬೆಂಗ್ರೆ ವೇದಿಕೆಯಲ್ಲಿ DYFI 11ನೇ ಘಟಕದ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು.

ಬೆಳಿಗ್ಗೆ 9:30 ಸುಮಾರಿಗೆ ರಕ್ತದಾನ ಮಾಡಲು ಪ್ರಾರಂಭವಾಯಿತು ಮಧ್ಯಾಹ್ನ 2:00 ಗಂಟೆಯವರೆಗೆ ಉತ್ತಮ ಯಶಸ್ವಿ ರಕ್ತದಾನ ಶಿಬಿರ ನಡೆಯಿತು ಸುಮಾರು 90 ರಷ್ಟು ಜನ ರಕ್ತದಾನ ಮಾಡಿದರು 90 ಯುನಿಟ್ ರಕ್ತ ಸಂಗ್ರಹವಾಯಿತು ಇತರ ಕಾರ್ಯಕ್ರಮದ ಕಾರಣ ಯುವಕರ ಅಲಭ್ಯತೆಯ ಮಧ್ಯಯು ಒಂದು ಉತ್ತಮ ರಕ್ತ ಸಂಗ್ರಹ ಸಾದ್ಯವಾಗಿದೆ. DYFI ಬೆಂಗ್ರೆ 11ನೇ ಘಟಕ ರಕ್ತದಾನ ಮಾಡಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ವ್ಯಕ್ತಪಡಿಸಿದೆ.
ರಕ್ತದಾನ ಶಿಬಿರದಲ್ಲಿ DYFI 11ನೇ ಘಟಕದ ಪ್ರಮುಖರಾದ ಸಾಹಿಲ್, ತಂಝೀಲ್, ಕಬೀರ್, ನಿಸಾರ್ ಹಾಗೆಯೇ ಮುಹಾಝ್, ತಸ್ರೀಫ್, ಹನೀಫ್, ನಾಸಿರ್ ಬಾಸ್, ರಿಝ್ವಾನ್, ಝಿಮ್, ಶಾರೂಖ್, ಆಸಿಫ್, ಕಬೀರ್, ಶರೀಫ್ ಹಲವರು ಶಿಬಿರದ ಯಶಸ್ವಿಗೆ ಕಾರ್ಯನಿರ್ವಹಿಸಿದರು.
ಇದನ್ನೂ ನೋಡಿ: “ರೈತ–ಕಾರ್ಮಿಕ–ಕೂಲಿಕಾರರ ಮುಷ್ಕರ | ಕೆಲಸ ಸ್ಥಗಿತ, ಬೀದಿಗಿಳಿಯಲಿದ್ದಾರೆ ದುಡಿಯುವ ಜನ” | Janashakthi Media
