ಪಕ್ಕದಲ್ಲೆ ಮಗನ ಶವ ಇದ್ದರೂ ಅರಿಯದ ಅಂಧ ಪೋಷಕರು

ತೆಲಂಗಾಣ: ಹೈದರಾಬಾದ್‌ನ ನಾಗೋಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಮಗ ಮೃತಪಟ್ಟು ತಮ್ಮ ಪಕ್ಕದಲ್ಲಿಯೇ ಮಗನ ಶವ ಇದ್ದರು ಅಂಧ ಪೋಷಕರಿಗೆ ಗೊತ್ತಾಗಿಲ್ಲ. ಮಗನಿಗಾಗಿಯೇ ಕಾಯುತ್ತಾ ಹಸಿವಿನಿಂದ ನರಳುತ್ತಿರುವ ಹೃದಯವಿದ್ರಾವಕ ಘಟನೆ  ಬೆಳಕಿಗೆ ಬಂದಿದೆ. ಶವ

ತೆಲಂಗಾಣದ ನಾಗೋಲು ಜೈಪುರ ಕಾಲೋನಿ ಬಳಿಯ ಕಾಲೋನಿಯಲ್ಲಿ ಕಳುವ ರಮಣ (59) ಮತ್ತು ಶಾಂತಿಕುಮಾರಿ (64) ಕಳೆದ ನಲವತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರ. ಇಬ್ಬರಿಗೂ ದೃಷ್ಟಿ ಇಲ್ಲ. ರಮಣ ಗಿರಿಜನ ಕಲ್ಯಾಣ ಇಲಾಖೆಯ ಉದ್ಯೋಗಿ.

ರಮಣ ಅಂಧನಾಗಿದ್ದರಿಂದ ಆತನಿಗೆ ಸಹಾಯಕನಾಗಿ ಮತ್ತೊಬ್ಬನನ್ನು ನೇಮಿಸಲಾಗಿತ್ತು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಪುದೀಪ್, ಪತ್ನಿಯೊಂದಿಗೆ ವರ್ಕಪುರಂನಲ್ಲಿ ವಾಸವಾಗಿದ್ದಾರೆ. ಕಿರಿಯ ಮಗ ಪುಮೋದ್ (32) ತನ್ನ ಹಂಡತಿಯೊಂದಿಗೆ ತನ್ನ ಹೆತ್ತವರೊಂದಿಗೆ ವಾಸಿಸುತ್ತಾನೆ.

ಇದನ್ನೂ ಓದಿ: 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ: ಐಎಂಡಿ

ಪುಮೋದ್ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು ಕುಟುಂಬವನ್ನು ಪೋಷಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಪುಮೋದ್ ಕುಡಿತದ ಚಟಕ್ಕೆ ಬಿದ್ದಿದ್ದು, ನಾಲ್ಕು ದಿನಗಳ ಹಿಂದೆ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋಗಿದ್ದಳು. ಅಂದಿನಿಂದ ಪುಮೋದ್ ತಂದೆ ತಾಯಿಯೊಂದಿಗೆ ವಾಸವಾಗಿದ್ದನು. ಮದ್ಯ ಸೇವಿಸಿದ್ದ ಪ್ರಮೋದ್ ಕುಮಾರ್ ಮನೆಯಲ್ಲಿ ಸಾವನ್ನಪ್ಪಿದ್ದರು.

ಕುರುಡರಾದ ರಮಣ ಮತ್ತು ಶಾಂತಕುಮಾರಿ ತಮ್ಮ ಮಗ ಕಣ್ಣೆದುರೇ ಸತ್ತು ಬಿದ್ದಿರುವುದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ತಮ್ಮ ಮಗ ಬರುತ್ತಾನೆ ಅವರಿಗೆ ಆಹಾರವನ್ನು ನೀಡುತ್ತಾನೆಂದು ಕಾಯುತ್ತಲೆ ಇದ್ದರು. ಈ ವೃದ್ಧ ದಂಪತಿಗೆ ಹೊರಗೆ ಬರುವ ಶಕ್ತಿ ಇಲ್ಲದೇ ಮೂರು ದಿನಕ್ಕೂ ಹೆಚ್ಚು ಕಾಲ ಒಂದೇ ಮನೆಯಲ್ಲಿ ಮೃತದೇಹದೊಂದಿಗೆ ಇದ್ದರು. ಮನೆಯಲ್ಲಿ ದುರ್ವಾಸನೆ ಬಂದರ ಇಲಿ ಸತ್ತಿರಬೇಕು ಎಂದುಕೊಂಡರು.

ಸಹಾಯಕ್ಕಾಗಿ ಅಳಲು ತುಂಬಾ ನಿಶ್ಲೇಷಿತರಾಗಿದ್ದರು. ಈ ವಿಚಾರ ಸ್ಥಳೀಯರಿಗೂ ಗೊತ್ತಿರಲಿಲ್ಲ. ಸೋಮವಾರ ಮಧ್ಯಾಹ್ನ ಇವರ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರು ನಾಗೋಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಂದು ಗಂಟೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲು ತೆರೆದು ಒಳಗಿದ್ದ ದೃಶ್ಯ ಕಂಡು ಬೆಚ್ಚಿಬಿದ್ದರು.

ಕೊಳೆತ ಸ್ಥಿತಿಯಲ್ಲಿ ಶವ.. ಪಕ್ಕದ ಬೆಡ್ ಮೇಲೆ ತಾಯಿ, ಸ್ವಲ್ಪ ದೂರದಲ್ಲಿ ತಂದ ಇದ್ದರು. ಮೂರು ದಿನಗಳಿಂದ ಊಟ ಮಾಡದ ಕಾರಣ ಇಬ್ಬರಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಊಟ ಕೊಟ್ಟು ಹಿರಿಯ ಮಗನಿಗೆ ಮಾಹಿತಿ ನೀಡಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ನೋಡಿ: ಮರಕುಂಬಿ ಪ್ರಕರಣ| ಚಾರಿತ್ರಿಕ ತೀರ್ಪು – ದಲಿತರಿಗೆ ದಕ್ಕಿದ ನ್ಯಾಯ Janashakthi Media

Donate Janashakthi Media

Leave a Reply

Your email address will not be published. Required fields are marked *