ಅ್ಯಪ್
ಮಂಗಳೂರು : ಸರಕಾರಿ ಅ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸಬೇಕು ಎಂದು ಯುವ ಹೋರಾಟಗಾರ ಬಿ.ಕೆ.ಇಮ್ತಿಯಾಝ್ ಆಗ್ರಹಿಸಿದ್ದಾರೆ.
ನಗರದ ನಾಸಿಕ್ ಬಂಗೇರ ಸಭಾಭಾವನದಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಚಾಲಕರ ಸಂಘದ ಮಹಾಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ, ಅ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ಕಂಪೆನಿಗಳು ಚಾಲಕರಿಗೆ ಸರಿಯಾದ ಪ್ರಯಾಣ ದರ ನೀಡದೆ ವಂಚಿಸುತ್ತಿದೆ ಬ್ಯಾಂಕ್ ಸಾಲ ಮಾಡಿ ಕಾರು ಖರೀದಿಸಿದ ಚಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ರೇಡಿಯೋ ಟ್ಯಾಕ್ಸಿ ಚಾಲಕರಿದ್ದು ಸಂಕಷ್ಟದಲ್ಲಿರುವ ಚಾಲಕರಿಗಾಗಿ ಮತ್ತು ಉತ್ತಮ ಸಾರ್ವಜನಿಕ ಸಾರಿಗೆ ಸೇವೆಗಾಗಿ ಸರಕರವೇ ಅ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ಸೇವೆ ಆರಂಭಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಸಾರಿಗೆ ರಂಗದ ನೌಕರರ ಹೋರಾಟ ತೀವ್ರಗೊಳ್ಳುತ್ತಿದೆ ಸರಕಾರಕ್ಕೆ ಹೆಚ್ಚಿನ ರೀತಿಯಲ್ಲಿ ತೆರಿಗೆ ಪಾವತಿಸುವ ಸಾರ್ವಜನಿಕ ಸಾರಿಗೆ ರಂಗದ ಚಾಲಕರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕೆಂದು ಅವರು ಒತ್ತಾಯಿಸಿದ ಅವರು ಮಂಗಳೂರು ನಗರದಲ್ಲಿ ಆನ್ ಲೈನ್ ಟ್ಯಾಕ್ಸಿ ಚಾಲಕರು ದಿನದ 24ಗಂಟೆಯೂ ಸೇವೆಯಲ್ಲಿ ನಿರತರಾಗಿದ್ದಾರೆ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಆನ್ ಲೈನ್ ಟ್ಯಾಕ್ಸಿ ಚಾಲಕರಿಗೆ ದೌರ್ಜನ್ಯ ನಡೆಸಲಾಗುತ್ತಿದೆ ಆನ್ ಲೈನ್ ಟ್ಯಾಕ್ಸಿ ಚಾಲಕರು ಒಗ್ಗಟ್ಟಾಗಿ ದಬ್ಬಾಳಿಕೆಯ ವಿರುದ್ಧ ಹೋರಾಟಕ್ಕಿಳಿಯಬೇಕೆಂದು ಇಮ್ತಿಯಾಝ್ ಕರೆ ನೀಡಿದರು.
ಸಂಘದ ಮುಖಂಡರಾದ ಮುನಾವ್ವರ್ ಕುತ್ತಾರ್, ಸಲ್ಮಾನ್, ನೆಲ್ಸನ್ ಮತ್ತಿತರರು ಮಾತನಾಡಿದರು ಸಂಘದ ಅಧ್ಯಕ್ಷರಾದ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಮೇಶ್ ನಾಯ್ಕ್, ಕರುಣಾಕರ, ಅಶ್ರಫ್ ಕಲ್ಲಡ್ಕ, ಜೋಸೆಫ್, ಸಾದಿಕ್ ಕಣ್ಣೂರು, ಶಾಕಿರ್ ಕಂಕನಾಡಿ, ಅಲ್ತಾಫ್ ಉಳ್ಳಾಲ, ಮುಸ್ತಫಾ ಕುತ್ತಾರ್, ಜಲೀಲ್, ಕಲೀಂ ಮದನಿ, ಅಜೀಜ್ ಅಡ್ಡೂರು, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ಕೋಶಾಧಿಕಾರಿ ನೌಶಾದ್ ಕಾವೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಮ್ತಿಯಾಜ್ ಕುತ್ತಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.