ಕೊಪ್ಪಳ: ಬಿಜೆಪಿಯನ್ನು ತುಂಬಾ ನಂಬಿದವರಿಗೆ ಈಗ ಅದರ ನೈಜತೆ ಏನು ಎಂಬುದು ಈಗ ಗೊತ್ತಾಗುತ್ತಿದೆ. ಒಂದು ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ದೆಹಲಿಗೆ ಹೋಗುತ್ತಾರೆ ಎಂದರೆ ಕೇಂದ್ರದ ನಾಯಕರು ಅವರನ್ನು ಸ್ವಾಗತಿಸಲು ಕಾಯುತ್ತಿದ್ದರು. ಈಗ ಅವರೇ ಪಕ್ಷದಿಂದ ಹೊರಬಂದಿದ್ದಾರೆ. ಬಿಜೆಪಿಯವರದು ಬಳಸಿ ಬೀಸಾಡುವುದುಏ ದೊಡ್ಡ ದಾಧನೆ ಎಂದು ಮಾಜಿ ಸಚಿವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ನಗರದಲ್ಲಿ ಜಿಲ್ಲಾ ಚುನಾವಣಾ ಸಮಿತಿ ಸಭೆಗೂ ಮುಂಚಿತವಾಗಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಸ್ಥಾನಮಾನ ಹಾಗೂ ಸಾಮರ್ಥ್ಯ ಇದ್ದಾಗ ಅದನ್ನು ಬಳಸಿ ಬೀಸಾಡುವ ಬಿಜೆಪಿ ಜನಾರ್ದನ ರೆಡ್ಡಿ ವಿಷಯದಲ್ಲಿಯೂ ಇದೇ ಮಾಡಿದೆ ಎಂದರು.
ಇದನ್ನು ಓದಿ: ಬಿಜೆಪಿ ತೊರೆಯಲಿದ್ದಾರೆಯೇ ಹಳ್ಳಿಹಕ್ಕಿ; ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಭೇಟಿ ಮಾಡಿದ ಎಚ್.ವಿಶ್ವನಾಥ್
ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಹಾಗೂ ಈಗಿನ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕೆಲವರನ್ನು ಮೂಲೆಗುಂಪು ಮಾಡಲಾಗಿದೆ. ನನ್ನನ್ನು ಹಿಂದೆ ಅನರ್ಹ ಮಾಡಿ ದೆಹಲಿಗೆ ಕಳುಹಿಸಿದ್ದಾಗಲೇ ಜ್ಞಾನೋದಯವಾಗಿದೆ. ಜನಾರ್ದನ ರೆಡ್ಡಿ ಈಗ ಎಚ್ಚರಗೊಂಡಿದ್ದಾರೆ’ ಎಂದರು.
ಹೊಸ ಪಕ್ಷದ ಅದರ ಅಳಿವು ಉಳಿವು ಹಾಗೂ ಅದರಿಂದಾಗು ಕಷ್ಟನಷ್ಟಗಳು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಬಿಜೆಪಿಯಿಂದ ಜನಾರ್ದನ ರೆಡ್ಡಿಯವರಿಗೆ ಬಹಳಷ್ಟು ಅನ್ಯಾಯವಾಗಿದೆ. ಯಾರೇ ಬಂದರೂ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನು ಓದಿ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯೂ – ಕೋಮುವಾದದ ವಿರುದ್ಧ ಹೋರಾಟವೂ
ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಚುನಾವಣಾ ಸಮಿತಿ ಸಭೆಯಲ್ಲಿ ಚುನಾವಣಾ ಸಮಿತಿ ಉಸ್ತುವಾರಿ ಶರಣಪ್ಪ ಟಿ. ಸುಣಗಾರ ಭಾಗಿಯಾಗಿದ್ದು, ಕೊಪ್ಪಳ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ವಿಧಾನಸಭಾ ಕ್ಷೇತ್ರಗಳ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ