ಬೆಂಗಳೂರು : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿಯವರ ಹನಿಮೂನ್ ಮುಗಿದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ನಾಯಕರ ಸಭೆಯ ಬಳಿಸಿ ಪ್ರಸ್ತಾಪಿಸಿದ ಈಶ್ವರ್ ಖಂಡ್ರೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಮಗೆ ಸಂಪೂರ್ಣ ಭರವಸೆಯಿದೆ. ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ನುಡಿದರು.
ಉಪಚುನಾವಣೆ ಗೆಲುವಿಗಾಗಿ ಸರ್ವರೀತಿಯ ತಂತ್ರಗಳನ್ನು ರೂಪಿಸಲು ಇಂದು ಸುಧೀರ್ಘವಾಗಿ ಸಭೆಯನ್ನು ನಡೆಸಲಾಯಿತು. ಭ್ರಷ್ಟ ಸರಕಾರವನ್ನು ಬುಡಸಮೇತ ಕೀಳಬೇಕು. ಆಡಳಿತ ಯಂತ್ರ ಸಂಪೂರ್ಣ ಕುದಿಸಿದೆ. ರೈತ,ಕಾರ್ಮಿಕ ವಿರೋಧಿ ಕಾಯ್ದೆ ತಂದಿದ್ದಾರೆ. ಹೀಗಾಗಿ ಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಮಸ್ಕಿಯಲ್ಲಿ ಬಸನಗೌಡ ತುರುವೀಹಾಳ, ಬಸವಕಲ್ಯಾಣದಲ್ಲಿ ಮಲ್ಲಮ್ಮ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಬೆಳಗಾವಿ ಲೋಕಸಭೆಗೂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ನಮ್ಮ ಪಕ್ಷದಲ್ಲಿ ಗೆಲ್ಲುವವರು ಬಹಳಷ್ಟು ಜನರಿದ್ದಾರೆ. ಒಮ್ಮತದಿಂದ ಸೂಚಿಸುವವರ ಆಯ್ಕೆಯೂ ಆಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.