ಬಿಜೆಪಿಯ ‘‘ 400 ಪಾರ್’’ ಮತದಾನದ ದಿನದಂದೇ ಸೂಪರ್ ಫ್ಲಾಪ್; ತೇಜಸ್ವಿ ಯಾದವ್

ಪಾಟ್ನಾ: ಬಿಜೆಪಿಯ ‘‘ 400 ಪಾರ್’’ ಸಿನೆಮಾವು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದೇ ಸೂಪರ್ ಫ್ಲಾಪ್ ಆಗಿದೆ ಎಂದು ರಾಷ್ಟ್ರೀಯ ಜನತಾದಳದ (ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ಶನಿವಾರ ವ್ಯಂಗ್ಯವಾಡಿದ್ದಾರೆ. ಈ ಸಲದ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಘೋಷಣೆಯನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯಾದವ್ ‘‘ಶುಕ್ರವಾರ ಮೊದಲ ಹಂತದ ಮತದಾನ ನಡೆದ ಬಿಹಾರದ ಎಲ್ಲಾ ನಾಲ್ಕು ಕ್ಷೇತ್ರಗಳನ್ನು ಮಹಾಘಟಬಂಧನ್ ಮೈತ್ರಿಕೂಟ ಗೆಲ್ಲಲಿದೆ. ನಾವು ಬ್ಲಾಕ್ ಮಟ್ಟದ ಪಕ್ಷ ಕಾರ್ಯಕರ್ತರ ಸಭೆಗಳನ್ನು ನಡೆಸಿದ್ದು, ಅವುಗಳಿಂದ ದೊರೆತ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ಬಿಜೆಪಿಯ ‘400 ಪಾರ್’ ಚಿತ್ರವು ಮೊದಲ ದಿನದಲ್ಲೇ ಸೂಪರ್ ಪ್ಲಾಫ್ ಆಗಿದೆ. ಬಿಹಾರದ ಜನತೆಗೆ ಜಾಗೃತರಾಗಿದ್ದು, ಅವರಿಗೆ ತಕ್ಕಪಾಠವನ್ನು ಕಲಿಸಲಿದ್ದಾರೆ ’’ ಎಂದು ಹೇಳಿದರು.

ಇದನ್ನು ಓದಿ : ಭಾರತದ “ಎವರೆಸ್ಟ್‌ ಫಿಶ್ ಕರಿ ಮಸಾಲಾʼ” ಆಮದನ್ನು ಹಿಂಪಡೆದ ಸಿಂಗಾಪೂರ

ಮೊದಲ ಹಂತದ ಚುನಾವಣೆಯಲ್ಲಿ ಯಾವುದೇ ಸ್ಪರ್ಧೆ ಇದ್ದಿರಲಿಲ್ಲ. ಈ ಸಲ ಬಿಹಾರವು ಅಚ್ಚರಿಯ ಫಲಿತಾಂಶಗಳನ್ನು ನೀಡಲಿದೆಯೆಂದು ನಾವು ಹಲವು ಬಾರಿ ಹೇಳಿದ್ದೇವೆ. ಕೇಂದ್ರ ಸರಕಾರ ಬಿಹಾರದ ಜನತೆಗೆ ಏನನ್ನೂ ಮಾಡಿಲ್ಲ. 2014 ಹಾಗೂ 2019ರಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆಗಳು ಈಡೇರಿಸಿಲ್ಲ. ಬಿಜೆಪಿಯ ಪೊಳ್ಳು ಹೇಳಿಕೆಗಳು ಹಾಗೂ ಹುಸಿ ಭರವಸೆಗಳಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಆದರೆ ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೇರಿದಲ್ಲಿ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಜೊತೆಗೆ ವಿಶೇಷ ಸ್ಥಾನಮಾನವನ್ನು ನೀಡಲಿದೆ’’ ಎಂದವರು ತಿಳಿಸಿದರು.

ಹಾಲಿ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳು ಹೆಚ್ಚಿನ ಆದ್ಯತೆಯನ್ನು ಪಡೆದಿವೆ ಬಿಹಾರದಲ್ಲಿ ನಿರುದ್ಯೋಗ ಅತಿ ದೊಡ್ಡ ಸಮಸ್ಯೆಯಾಗಿದೆ. ಇದರ ಜೊತೆಗೆ ಹಣದುಬ್ಬರ, ಬಡತನ ಹಾಗೂ ಹೂಡಿಕೆ ಕೊರತೆಯನ್ನು ಎದುರಿಸುತ್ತಿದೆ.ವಲಸೆ ಹಾಗೂ ನೆರೆಹಾವಳಿ ಕೂಡಾ ಸಮಸ್ಯೆಗಳಾಗಿವೆ. ಈ ಸಲದ ಚುನಾವಣೆಯು ಬಿಜೆಪಿಗರಲ್ಲಿ ಆತಂಕ ಸೃಷ್ಟಿಸಿದೆ. ಅವರು ಸಂವಿಧಾನವನ್ನು ಬದಲಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಯಾರು ಸಂವಿಧಾನವನ್ನು ನಾಶಪಡಿಸಲು ಯತ್ನಿಸುತ್ತಾರೋ ಅವರಾಗಿಯೇ ನಾಶಗೊಳ್ಳುತ್ತಾರೆ’’ ಎಂದು ಯಾದವ್ ಹೇಳಿದರು.

ಇದನ್ನು ನೋಡಿ : ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಬಿಜೆಪಿಯನ್ನು ದೇಶದಜನ ಸೋಲಿಸಬೇಕು – ಡಾ. ಜಿ. ರಾಮಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *