ಲೇವಡಿ ಮಾಡಿದ್ದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಈಗ ನಕಲು‌ ಮಾಡುತ್ತಿದೆ: ರಾಹುಲ್ ಗಾಂಧಿ

ಮೈಸೂರು: ನಮ್ಮ ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸರ್ಕಾರ ಲೇವಡಿ ಮಾಡಿತು, ಆದರೆ ಈಗ ನಕಲು‌ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದರು. ನಗರದಲ್ಲಿ ನಡೆದ ಗೃಹಲಕ್ಷ್ಮೀ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ ಅವರು, “ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿಗಳು ಮಾತನಾಡುತ್ತಾ ‘ಕಾಂಗ್ರೆಸ್ ಪಕ್ಷ ಸುಳ್ಳು ಹೇಳುತ್ತಿದೆ’ ಎಂದರು, ಆದರೆ ನಿಜ ಇಂದು ನಿಮ್ಮ ಮುಂದೆ ಕಾಣುತ್ತಿದೆ. ಭಾರತ ದೇಶದ ಅತಿದೊಡ್ಡ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ಯೋಜನೆ ಇದಾಗಿದ್ದು, 1.9 ಕೋಟಿ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ” ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿಧಾನಸಭಾ ಚುನಾವಣೆಗು ಮುಂಚಿತವಾಗಿ ನಾವು ನಿಮಗೆ 5 ಗ್ಯಾರಂಟಿಗಳ ಭರವಸೆ ನೀಡಿದ್ದೆವು. ನಮಗೆ ಭರವಸೆ ಇತ್ತು ನಾವು ನುಡಿದಂತೆ ನಡೆಯುತ್ತೇವೆ ಎಂದು ಅದರಂತೆ ನಡೆದುಕೊಂಡಿದ್ದೇವೆ. ರಕ್ಷಾ ಬಂಧನದ ದಿನ ಮಹಿಳೆಯರಿಗೆ, ಅಕ್ಕ- ತಂಗಿಯರಿಗೆ ಮರೆಯಲಾರದ ಕೊಡುಗೆ ‌ನೀಡಿದ್ದೇವೆ. ಕರ್ನಾಟಕ ಮಾದರಿ ಈಗ ಇಡೀ ದೇಶದ ರಾಜಕಾರಣದ ದಿಕ್ಕನ್ನೇ ಬದಲಾಯಿಸಲಿದೆ. ಎಲ್ಲಾ ಗ್ಯಾರಂಟಿ ಯೋಜನೆಗಳು ನಮ್ಮ ಕಾಂಗ್ರೆಸ್ ಸರ್ಕಾರದ್ದಲ್ಲ ಬದಲಾಗಿ ನಿಮ್ಮ ಯೋಜನೆಗಳು ಇವು, ನಿಮಗಾಗಿ ಮಾಡಿದ ಯೋಜನೆಗಳು” ಎಂದು ಹೇಳಿದರು.  ರಾಹುಲ್ ಗಾಂಧಿ

ಇದನ್ನೂ ಓದಿ: ಚೀನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡುವ ಧೈರ್ಯವಿದೆಯೆ: ಪ್ರಧಾನಿಗೆ ಕುಟುಕಿದ ಸಂಜಯ್ ರಾವತ್

“ಇಂದು ಎಲ್ಲಾ ತಾಯಂದಿರ- ಹೆಣ್ಣು ಮಕ್ಕಳ ಖಾತೆಗೆ 2 ಸಾವಿರ ಹಣ ಬಂದಿದೆ. ಇದು ಕೇವಲ ಈ ತಿಂಗಳು ಮಾತ್ರವಲ್ಲ ನಮ್ಮ ಸರ್ಕಾರ ಇರುವ ತನಕವೂ ಬರುತ್ತದೆ. ಒಂದು ಯೋಜನೆಯನ್ನು ಬಿಟ್ಟು ಮಿಕ್ಕ ನಾಲ್ಕು ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಇರುವಂತಹ ಯೋಜನೆಗಳು. ಎಂತಹ ದೊಡ್ಡ ಮರವಿದ್ದರು ಅದಕ್ಕೆ ಬೇರುಗಳು ಗಟ್ಟಿಯಾಗಿರಬೇಕು. ಆಗ ಎಂತಹ ಚಂಡಮಾರುತ ಬಂದರೂ ಗಟ್ಟಿಯಾಗಿ ಅದನ್ನು ಎದುರಿಸಬಹುದು. ಅದಕ್ಕೆ ಈ ದೇಶದ ಬುನಾದಿ ಹೆಣ್ಣು ಮಕ್ಕಳು. ಆದ ಕಾರಣ ಅವರನ್ನು ನಾವು ಆರ್ಥಿಕವಾಗಿ ಗಟ್ಟಿಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ” ಎಂದು  ರಾಹುಲ್ ಗಾಂಧಿ ತಿಳಿಸಿದರು.

ದೇಶದ ಜನರ ಸರಾಸರಿ ಆಯಸ್ಸನ್ನು 34 ರಿಂದ 73 ವರ್ಷಕ್ಕೆ ತಂದಿದ್ದೇವೆ:  ಮಲ್ಲಿಕಾರ್ಜುನ ಖರ್ಗೆ

ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ,”ಬಿಜೆಪಿಯವರೇ ಎಷ್ಟು ದಿನ ಕಾಂಗ್ರೆಸ್‌ಗೆ ಬೈಯುತ್ತೀರಿ. ಕೆಲಸ ಮಾಡಿ ತೋರಿಸಿ ಆನಂತರ ಮಾತನಾಡಿ. ಸ್ವಾತಂತ್ರ್ಯ ನಂತರ ನೆಹರು ಅವರು ಪ್ರಧಾನಿ ಆಗದೇ ಇದ್ದಿದ್ದರೆ ಈ ದೇಶ ಒಗ್ಗಟ್ಟಾಗಿ ಇರುತ್ತಿರಲಿಲ್ಲ. ನೆಹರು ಮತ್ತು ವಲ್ಲಭಭಾಯಿ ಪಟೇಲರು ಸೇರಿ ಈ ದೇಶವನ್ನ ಒಗ್ಗೂಡಿಸಿದ್ದಾರೆ. ಆದರೂ ನೀವು ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಸುಳ್ಳೆ ಹೇಳುತ್ತಾ ಓಡಾಡುತ್ತಿದ್ದೀರಿ” ಎಂದರು.

“ನಾವು ನುಡಿದಂತೆ ನಡೆದಿದ್ದೇವೆ, ಚುನಾವಣೆಗೆ ಮುಂಚಿತವಾಗಿ ಹೇಳಿದ ಮಾತುಗಳಿಗೆ ಬದ್ಧರಾಗಿ ನಡೆದುಕೊಂಡಿದ್ದೇವೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಡೀ ದೇಶದಲ್ಲಿ ಹೆಸರುವಾಸಿಯಾಗಿದೆ. ಚುನಾವಣೆಗೆ ಮುಂಚಿತವಾಗಿ ರಾಜ್ಯಕ್ಕೆ ಬಂದಿದ್ದ ಮೋದಿಯವರು, ಅಮಿತ್ ಶಾ ಅವರು ‘ಕಾಂಗ್ರೆಸ್ ಸುಳ್ಳು ಹೇಳುತ್ತಿದೆ, ಬೋಗಸ್, ದೇಶ ದಿವಾಳಿಯಾಗಲಿದೆ’ ಎಂದು ಭಾಷಣ ಮಾಡುತ್ತಿದ್ದರು. ಇವತ್ತಿನ ಕಾರ್ಯಕ್ರಮದ ವಿಡಿಯೋವನ್ನ ಮೋದಿಯವರು ಏನಾದರೂ ನೋಡಿದರೆ, ‘ನುಡಿದಂತೆ ನಡೆಸಿದ್ದಾರಲ್ಲ ಕಾಂಗ್ರೆಸ್ ಪಕ್ಷದವರು’ ಎಂದು ಅವರ ಕಣ್ಣಿಗೆ ಮುಸುಕಿದ ಪರದೆ ಸರಿಯುತ್ತದೆ, ಅವರು ಇದನ್ನು ಮುಕ್ತ ಮನಸ್ಸಿನಿಂದ ಹೊಗಳಬೇಕು, ನಾನು ಸಾಧ್ಯವಿಲ್ಲ ಎಂದಿದ್ದನ್ನು ಸಾಧ್ಯಮಾಡಿ ತೋರಿಸಿದ್ದಾರಲ್ಲ ಎಂದು ಇತರೇ ರಾಜ್ಯಗಳಿಗೆ ಅವರೇ ಹೇಳಬೇಕಿದೆ” ಎಂದು ಹೇಳಿದರು.  ರಾಹುಲ್ ಗಾಂಧಿ

ಇದನ್ನೂ ಓದಿ: ತ್ರಿಪುರಾ | ಸಿಪಿಐಎಂ ಮತ್ತೆ ತೆಕ್ಕೆಗೆ ಪಡೆಯಲಿದೆಯೆ ‘ಮಾಣಿಕ್ ಸರ್ಕಾರ್’ ಕ್ಷೇತ್ರ?

“ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಲ್ಲಿ ಏನು ಮಾಡಿದೆ ಅದರ ರಿಪೋರ್ಟ್ ಕಾರ್ಡ್ ಕೊಡಿ ಎಂದು ಮೋದಿ ಮತ್ತು ಅಮಿತ್ ಷಾ ಇತ್ತೀಚೆಗೆ ಛತ್ತೀಸ್‌ಗಡದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ನನ್ನ ಬಳಿ ನಮ್ಮ ಪಕ್ಷ ಏನೇನು ಕೆಲಸ ಮಾಡಿದೆ ಎನ್ನುವ ರಿಪೋರ್ಟ್ ಕಾರ್ಡಿದೆ, ನೆಹರು ಅವರ ಕಾಲದಿಂದ ಹಿಡಿದು ಮನಮೋಹನ್ ಸಿಂಗ್ ಅವರ ತನಕ ನಾವೇನು ಕೆಲಸ ಮಾಡಿದ್ದೇವೆ ಎನ್ನುವ ರಿಪೋರ್ಟ್ ಕಾರ್ಡಿದೆ. ಬಿಜೆಪಿಯವರ ಬಳಿ ಏನಿದೆ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.

“ಹೇಳಿಕೊಳ್ಳುವಂತಹ ಕೆಲಸ ಅವರೇನು ಮಾಡಿದ್ದಾರೆ? ಕೇವಲ ಟೀಕೆ ಮಾಡುತ್ತಾರೆ. 1947 ರಿಂದ 2004 ರ ತನಕ ಅಕ್ಷರಸ್ಥರ ಸಂಖ್ಯೆ ಇದ್ದಿದ್ದು ಕೇವಲ 18% ಮಾತ್ರ ಆದರೆ 2013-14 ರ ಹೊತ್ತಿಗೆ 74% ಕ್ಕೆ ಬಂದಿತ್ತು. ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನ ಶಿಕ್ಷಿತರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನಮ್ಮ ದೇಶದ ಜನರ ಸರಾಸರಿ ಆಯಸ್ಸು ಇದ್ದಿದ್ದು ಕೇವಲ 34 ವರ್ಷ ನಮ್ಮ ಕಾಂಗ್ರೆಸ್ ಸರ್ಕಾರದ ಆರೋಗ್ಯ, ಆಹಾರ ಯೋಜನೆಗಳಿಂದ 73 ವರ್ಷಕ್ಕೆ ತಂದಿದ್ದೇವೆ.

1947 ರಲ್ಲಿ ಓದಲು, ಬರೆಯಲು ಬರುತ್ತಿದ್ದ ಹೆಣ್ಣುಮಕ್ಕಳ ಸಂಖ್ಯೆ ಇದ್ದಿದ್ದು ಕೇವಲ 7% ಮಾತ್ರ ಇತ್ತು, 2013-14 ರ ಹೊತ್ತಿಗೆ 64% ಮುಟ್ಟಿತ್ತು. ದಲಿತರ, ಆದಿವಾಸಿಗಳ, ಅಲ್ಪಸಂಖ್ಯಾತರ ಶಿಕ್ಷಣ ಪ್ರಮಾಣ ಕ್ರಮವಾಗಿ 66%, 59%, 59% ಇದೆ. ನಮ್ಮ ದೇಶದಲ್ಲಿ ಒಂದು ಸಾವಿರ ಮಕ್ಕಳು ಜನಿಸಿದರೆ 30 ಜನ ಮಕ್ಕಳು ಸಾಯುತ್ತಿದ್ದಾರೆ. ಮೊದಲು ಇನ್ನು ಹೆಚ್ಚು ಮಕ್ಕಳು ಸಾಯುತ್ತಿದ್ದರು, ಇದನ್ನು ಕಡಿಮೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಗುಜರಾತ್ ಎಷ್ಟಿದೆ ಎಂದು ನೀವೆ ನೋಡಿ, ಸುಳ್ಳು ಹೇಳುವ ಬಿಜೆಪಿಗರಿಗೆ ನಾಚಿಕೆಯಾಗಬೇಕು” ಎಂದು ಖರ್ಗೆ ಹೇಳಿದರು.  ರಾಹುಲ್ ಗಾಂಧಿ

ವಿಡಿಯೊ ನೋಡಿ: ಚಲೋ ಬೆಳ್ತಂಗಡಿ:ಬೀಗ ಹಾಕಿದ್ದ ತಹಶಿಲ್ದಾರ್ ಕಚೇರಿ ಎದುರುಗಡೆ ಬಿಜೆಪಿಯ ಪ್ರತಿಭಟನೆ ಏನನ್ನೂ ಸೂಚಿಸುತ್ತದೆ?ವಸಂತ ಬಂಗೇರ

Donate Janashakthi Media

Leave a Reply

Your email address will not be published. Required fields are marked *