ಬಿಜೆಪಿಯಿಂದ ಪ್ರಜಾಪ್ರಭುತ್ವ ಕಗ್ಗೊಲೆ – ಎಂ.ನಾರಾಯಣ ಸ್ವಾಮಿ ಆರೋಪ

ಬೆಂಗಳೂರು ಫೆ 9: ಗೋಹತ್ಯೆ ನಿಷೇಧ ವಿಧೇಯಕ ವಿಚಾರದಲ್ಲಿ ಆಡಳಿತ ಪಕ್ಷದ ವರ್ತನೆಯಿಂದ ಸದನದ ಕಾರ್ಯಕಲಾಪ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ.

ಪರ ವಿರೋಧದ ನಡುವೆ ಜಾರಿಯಾಯ್ತಾ ಗೋಹತ್ಯಾ ನಿಷೇಧ ಕಾನೂನು!!

ಇಂದು (ಮಂಗಳವಾರ) ವಿಧಾನ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆ ನಡೆಯುತ್ತಿತ್ತು. ವಂದನಾ ಚರ್ಚೆಯ ಭಾಷಣ ಮೊಟಕುಗೊಳಿಸಿ ಗೋಹತ್ಯೆ ನಿಷೇಧ ವಿಧೇಯಕ ತೆಗೆದುಕೊಂಡರು. ಇದರ ತುರ್ತು ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ

ಏಕಾಏಕಿ ಉಪಸಭಾಪತಿ ಮಸೂದೆ ಅಂಗೀಕಾರ ಮಾಡುವ ಮೂಲಕ ಸದನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ನಮ್ಮ ವಿರೋಧದ ನಡುವೆಯೂ ಅಂಗೀಕಾರ ಮಾಡಲಾಗಿದೆ. ಇದು ಬಿಜೆಪಿಯ ಗೂಂಡಾಗಿರಿ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಯಾವುದೋ ಜನಾಂಗದ ಓಲೈಕೆಗಾಗಿ ಮಸೂದೆ ಜಾರಿಗೊಳಿಸಿದೆ. ಈ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸುಗ್ರಿವಾಜ್ಞೆಗೆ ರಾಜ್ಯಪಾಲರ ಅಂಕಿತ ; ಗೋಹತ್ಯೆ ನಿಷೇಧ ಕಾನೂನು ಜಾರಿ

ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಿಷತ್ ಸದಸ್ಯ ನಜೀರ್ ಅಹ್ಮದ್, ಸದನದಲ್ಲಿ ಗೋಹತ್ಯೆ ನಿಷೇಧ ಮಸೂದೆ ವಿರೊಧಿಸಿದ ಜೆಡಿಎಸ್ ಕೂಡ ರಾಜ್ಯಪಾಲರಿಗೆ ದೂರು ಕೊಟ್ಟು ಬದ್ಧತೆ ತೋರಲಿ. ಇಲ್ಲದಿದ್ದರೆ ಜೆಡಿಎಸ್-ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಗೋಹತ್ಯೆ ನಿಷೇಧದ ಮೂಲಕ ಆಹಾರ ಹಕ್ಕಿನ ಮೇಲೆ ದಾಳಿ, ಹಲವರ ಆಕ್ರೊಶ

ಸಿಎಂ ಇಬ್ರಾಹಿಂ ಕೂಡ ಸರಕಾರದ ನಡೆಯನ್ನು ವಿರೋಧಿಸಿದ್ದು, ಕರ್ನಾಟಕ ಇತಿಹಾಸದಲ್ಲಿ ಇಂತಹ ಸರ್ಕಾರ ಇರಲಿಲ್ಲ. ಪರಿಷತ್‌ನಲ್ಲಿ ಸದನದ ನಿಯಮ ಮೀರಿ ನಡೆಯಲಾಗಿದೆ. ಉಪಸಭಾಪತಿ ಏಕಾಏಕಿ ಬಿಲ್ ಪಾಸ್ ಮಾಡ್ತಾರೆ ಎಂದು ಆರೋಪಿಸಿದ್ದಾರೆ. ಕೆಲವರ ಸ್ವಾರ್ಥ, ದುರುದ್ದೇಶ ಈಡೇರಿಕೆಗೆ ಮಸೂದೆ ಅಂಗೀಕರಿಸಲಾಗಿದೆ. ಮಸೂದೆಯ ಹಿಂದೆ ಯಾವ ಒಳ್ಳೆಯ ಉದ್ದೇಶಗಳೂ ಇಲ್ಲ ಎಂದು ಆರ್.ಬಿ.‌ತಿಮ್ಮಾಪೂರ ಹೇಳಿದರು.

ಬಿ.ಕೆ. ಹರಿಪ್ರಸಾದ್, ಅಲ್ಲಂ ವೀರಭದ್ರಪ್ಪ, ಪಿ.ಆರ್. ರಮೇಶ್ ಸೇರಿದಂತೆ ಹಲವು ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪರ ವಿರೋಧದ ನಡುವೆ ಜಾರಿಯಾಯ್ತಾ ಗೋಹತ್ಯಾ ನಿಷೇಧ ಕಾನೂನು!!

Donate Janashakthi Media

Leave a Reply

Your email address will not be published. Required fields are marked *