ಭುವನೇಶ್ವರ್: ಬಿಜೆಪಿ ಕಾರ್ಯಕರ್ತರು ಭುವನೇಶ್ವರ್ ಮುನ್ಸಿಪಲ್ ಕಾರ್ಪೋರೇಷನ್‌ನ (ಬಿಎಂಸಿ) ಹೆಚ್ಚುವರಿ ಕಮಿಷನರ್ ರತ್ನಾಕರ್ ಸಾಹು ಮೇಲೆ ಕಚೇರಿಯೊಳಗೆ ನುಗ್ಗಿ ಹಲ್ಲೆ ಮಾಡಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಜೂನ್ 30ರಂದು ನಡೆದಿದೆ.
ಬಿಜೆಪಿಯ ಮಾಜಿ ಶಾಸಕ ಜಗನ್ನಾಥ್ ಭಾಯ್ ಎಂಬಾತನ ಚೇಲಾಗಳು ಈ ಕೆಲಸ ಮಾಡಿದ್ದು, ಹಲ್ಲೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ.
ಜಗನ್ನಾಥ್ ಭಾಯ್ ಎಂಬುವವರ ಜೊತೆ ಅನುಚಿತ ವರ್ತನೆ ತೋರಿದ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕರ್ತವ್ಯದಲ್ಲಿದ್ದ ಓರ್ವ ಗೌರವಾನ್ವಿತ ಅಧಿಕಾರಿ ಮೇಲೆ ಬಿಜೆಪಿ ಕಾರ್ಯಕರ್ತರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಪಿಡಿಒಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ: ಕೃಷ್ಣಬೈರೇಗೌಡ
ಹೆಚ್ಚುವರಿ ಕಮಿಷನರ್ ರತ್ನಾಕರ್ ಸಾಹು ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ದೂರು ಮತ್ತು ಅಹವಾಲುಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅವರ ಕಚೇರಿಗೆ ಐದಾರು ಮಂದಿ ನುಗ್ಗಿ ಹೊರಗೆ ಎಳೆದೊಯ್ದಿದ್ದಾರೆ. ಕಾಲಿನಿಂದ ಅವರ ಮುಖಕ್ಕೆ ಒದ್ದು ಹಲ್ಲೆ ನಡೆಸಿದ್ದಾರೆ. ಈ ಗುಂಪಿನಲ್ಲಿ ಬಿಜೆಪಿ ಕಾರ್ಪೋರೇಟರ್ ಜೀವನ್ ರೌತ್ ಸಹ ಇದ್ದರು.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ರತ್ನಾಕರ್ ಸಾಹು ‘ನಾನು ಸುಮಾರು 11.30ರ ಸಮುಯದಲ್ಲಿ ದೂರು ವಿಚಾರಣೆ ನಡೆಸುತ್ತಿದ್ದಾಗ, ಬಿಎಂಸಿ ನಗರಸಭಾಂಗಣ ಜೀವನ್ ರೌತ್ ಅವರೂ ಸೇರಿದಂತೆ ಐದು-ಆರು ಜನರು ನನ್ನ ಕೊಠಡಿಗೆ ಮುತ್ತಿಗೆ ಹಾಕಿದರು.
ಅವರು ಕೊಠಡಿಗೆ ಬಂದ ಕೂಡಲೇ ಜಗ್ ಭಾಯ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದೀಯಾ ಎಂದು ಕೇಳಿದರು. ನಾನು ನಿರಾಕರಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಅವರು ನನ್ನನ್ನು ನನ್ನ ಕಚೇರಿಯಿಂದ ಎಳೆದುಕೊಂಡು ಹೋಗಿ, ನನ್ನನ್ನು ಹೊಡೆದು, ನನ್ನನ್ನು ವಾಹನದಲ್ಲಿ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದರುʼ ಎಂದು ಹೇಳಿಕೊಂಡಿದ್ದಾರೆ
ಇದನ್ನೂ ನೋಡಿ: ದೇವನಹಳ್ಳಿ ಚಲೋ | ಜೈಲಿಗೆ ಹಾಕುವುದಾದರೆ ಹಾಕಿ, ಜಾಮೀನು ಕೂಡ ತೆಗೆದುಕೊಳ್ಳುವುದಿಲ್ಲ : ಪ್ರಕಾಶ್ ರಾಜ್
