ಬಾಗಲಕೋಟೆ :ಫೆ.05 : 18 ವರ್ಷ ಪಕ್ಷಕ್ಕಾಗಿ ದುಡಿದಿದ್ದೇನೆ, ಪಕ್ಷ ಈಗ ನನಗೆ ಉಚ್ಛಾಟನೆಯ ಬಹುಮಾನ ನೀಡಿದೆ ಎಂದು ಬಿಜೆಪಿ ವಿರುದ್ಧ ಬಿಜೆಪಿ ಮುಖಂಡ ಸಂತೋಷ್ ಹೊಕ್ರಾಣಿ ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ ಬಿಜೆಪಿ ನಾಯಕ ಸಂತೋಷ್ ಹೊಕ್ರಾಣಿ ಮನೆಗೆ ಭೇಟಿ ನೀಡಿದ ಬೆನ್ನಲೇ ಸಂತೋಷ್ಹೊ ಕ್ರಾಣಿಯವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಲು ಆದೇಶ ನೀಡಲಾಗಿದೆ. ಪಕ್ಷ ತೆಗೆದುಕೊಂಡಿರುವ ಈ ನಿರ್ಧಾರದಿಂದ ಶಾಕ್ ಗೆ ಒಳಗಾಗಿರುವ ಸಂತೋಷ್ ಹೊಕ್ರಾಣಿ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕುಮಾರಸ್ವಾಮಿ ಅವರು ಮನೆಗೆ ಬಂದಿದ್ದಾರೆ ನಿಜ, ಆದರೆ ನಾನು ಪಕ್ಷಕ್ಕೆ ಮುಜುಗರ ಆಗುವಂತೆ ಆಗಲಿ, ಪಕ್ಷಕ್ಕೆ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ. ಅವರು ಭೇಟಿ ನೀಡಿದರೆಂದು ಕೂಡಲೇ ಪಕ್ಷದಿಂದಲ್ಲೇ ಉಚ್ಚಾಟನೆ ಮಾಡುವುದು ಸರಿಯಲ್ಲ, ಕಳೆದ 18 ವರ್ಷದಿಂದ ಪ್ರಮಾಣಿಕವಾಗಿ ಕೆಲಸ ಮಾಡಿದ ಪಕ್ಷದ ಮುಖಂಡರಿಗೆ ಕೊಡುವ ಉಡುಗೊರೆ ಇದೆಯೇ? ನಿಮಗಾಗಿ ಕೆಲಸ ಮಾಡಿದ್ದೇವೆ ಇದಕ್ಕೆ ನೀವು ನೀಡುವ ಬಹುಮಾನ ಇದೆಯೇ? ಕುಮಾರ ಸ್ವಾಮಿಯವರು ನಮ್ಮ ಮನೆಗೆ ಬಂದಿರುವುದು ಪಕ್ಷದ ವಿರೋಧಿ ಚಟುವಟಿಕೆಯಾ? ಬೇರೆ ಪಕ್ಷದವರು ನಿಮ್ಮ ಮನೆಗೆ ಬರುವುದಿಲ್ಲವೇ? ನೀವು ಅವರ ಮನೆಗೆ ಹೋಗುವುದಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.