ಎಚ್.ಆರ್. ನವೀನ್ ಕುಮಾರ್, ಹಾಸನ
ಬೆಂಗಳೂರಿನ ಮೆಟ್ರೋದಲ್ಲಿ ಪ್ರಯಾಣ ಮಾಡಬೇಕಾದರೆ ನಮ್ಮನ್ನು ಪರಿಶೀಲಿಸುವ ತಪಾಸಣೆಗೊಳಪಡಿಸುವ ರೀತಿ ನೋಡಿದರೆ ಆಶ್ಚರ್ಯವಾಗುತ್ತದೆ. ಅಂತದರಲ್ಲಿ ದೇಶದ ಶಕ್ತಿಕೇಂದ್ರ, ಮಾನ್ಯ ಮೋದಿಯವ ಕಲ್ಪನೆಯ ಹೊಸ ಸಂಸತ್ ಕಟ್ಟಡ, ಯಾವುದೇ ವಿಘ್ನಗಳು ಸಂಭವಿಸದಂತೆ ಹೋಮ ಹವನಗಳೊಂದಿಗೆ ಸಿಂಗೋಲ್ ಪ್ರತಿಷ್ಠಾಪಿಸಲಾಗಿದೆ, ಆದರೂ ಇಲ್ಲಿ ದಾಳಿ ನಡೆಯುತ್ತದೆ. ಮುಖ್ಯ ಪ್ರಶ್ನೆ ಇರುವುದು ಟಿಯರ್ ಗ್ಯಾಸ್ (ಬಣ್ಣದ ಹೊಗೆ ಬಾಂಬ್) ತೆಗೆದುಕೊಂಡು ಹೋಗುವಷ್ಟು ಭ್ರದ್ರತಾ ವೈಫಲ್ಯ.. ತಾವು ಕುಳಿತುಕೊಳ್ಳುವ ಸಂಸತ್ ಭವನವನ್ನೇ ಸರಿಯಾಗಿ ರಕ್ಷಣೆ ಮಾಡಿಕೊಳ್ಳಲಾಗದ ಮೋದಿ ಸಾಹೇಬರು ಇನ್ನೂ ದೇಶವನ್ನ ಹೇಗೆ ರಕ್ಷಣೆ ಮಾಡುತ್ತಾರೆ ಎಂಬ ಪ್ರಶ್ನೆ ಈಗ ಎದ್ದಿದೆ.
ಇನ್ನೊಂದು ವಿಷಯ ಗಮನಿಸುವುದಾದರೆ, ಈಗಿನ ಹೊಸ ಸಂಸತ್ ಭವನದ ಕಟ್ಟಡದ ಒಳಭಾಗದಲ್ಲಿ ಅಂದರೆ ಅಧಿವೇಶನ ನಡೆಯುವ ಸಭಾಂಗಣದಲ್ಲಿ ಸಂಸದರು ಕುಳಿತುಕೊಳ್ಳುವ ಜಾಗ ಮತ್ತು ವೀಕ್ಷಕರು ಕುಳಿತುಕೊಳ್ಳುವ ಜಾಗ ತುಂಬ ಎತ್ತರದಲ್ಲಿ ಇದೆ. ವೀಕ್ಷಕರ ಗ್ಯಾಲರಿಯಿಂದ ಸಂಸದರು ಕೂರುವ ಜಾಗಕ್ಕೆ ಇವನು ಬಂದಿದ್ದಾದರೂ ಹೇಗೆ.? ಇವನಿಗೆ ಪಾಸ್ ಕೊಟ್ಟಿರುವುದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ. ಆದರೆ ಸಂಸದರು ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ್ದರಾ ಅಥವಾ ಇದೆಲ್ಲಾ ಮೊದಲೇ ಗೊತ್ತಿದ್ದು ತಪ್ಪಿಸಿಕೊಂಡರಾ..? ಇದುವರೆಗು ಯಾವ ಪ್ರತಿಕ್ರಿಯೆಯನ್ನೂ ಪ್ರಥಾಪ್ ಸಿಂಹ ನೀಡಿದ್ದು ಕಾಣಿಸಲಿಲ್ಲ.
ಹೀಗೆ ಅನುಮಾನಗಳು, ಪ್ರಶ್ನೆಗಳು ಒಂದಕ್ಕೊಂದು ಹೆಣೆದುಕೊಳ್ಳುತ್ತಾ ಹೋಗುತ್ತವೆ. ಇದೊಂದು ವ್ಯವಸ್ಥಿತ ಕೆಲಸವಾ… ಚುನಾವಣೆಯನ್ನು ಮುಂದಿಟ್ಟುಕೊಂಡು ಜನರ ಭಾವನೆಗಳನ್ನು ಕೆರಳಿಸಲು ಬಿಜೆಪಿಯೇ ಇಂತದೊಂದು ಷಡ್ಯಂತ್ರ ರೂಪಿಸಿತಾ… ಇದೆಲ್ಲಾ ದೇಶದ ಜನತೆಗೆ ಗೊತ್ತಾಗಬೇಕಿದೆ.. ಈ ಪ್ರಶ್ನೆಗಳಿಗೆ ಉತ್ತರಿಸುವವರಾರು?
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ | ಯಾರು ಈ 6 ಆರೋಪಿಗಳು?
ಈ ಘಟನೆ ನಡೆದ ನಂತರ ಎರಡು ಬೆಳವಣಿಗೆಗಳನ್ನ ಗಮನಿಸಿದೆ ಮೊದಲನೆಯದು ಸಂಸತ್ ಭವನಕ್ಕೆ ನುಗ್ಗಿದ್ದ ಮನೋರಂಜನ್ ಬಳಸಿದ ಬಣ್ಣದ ಹೊಗೆ ಬಿಡುವ ಶೆಲ್ (ಟಿಯರ್ ಗ್ಯಾಸ್) ನ ಒಂದು ತುಂಡು ಪತ್ರಕರ್ತರಿಗೆ (ಟಿವಿ ಮಾಧ್ಯಮದವರಿಗೆ) ಸಿಕ್ಕಿದೆ ಅದನ್ನು ತಮ್ಮ ಚಾನಲ್ ಗಳಲ್ಲಿ ಮೊದಲು ಸುದ್ದಿ ಮಾಡಬೇಕೆನ್ನುವ ಬರದಲ್ಲಿ ಅವರುಗಳು ನಡೆದುಕೊಂಡ ರೀತಿ, ಘನತೆಯ ವೃತ್ತಿಗಿರುವ ಮರ್ಯಾದೆಯನ್ನೆಲ್ಲಾ ಬೀದಿಪಾಲು ಮಾಡಿದಂತಿತ್ತು. ಇಂತಹ ಪತ್ರಕರ್ತರಿಂದ ಇನ್ನೆಂತಹ ವಿಶ್ಲೇಷಣೆ ಮತ್ತು ನಿಖರ, ಸತ್ಯ ಸುದ್ದಿಗಳನ್ನು ನಿರೀಕ್ಷಿಸಲು ಸಾಧ್ಯ. ಕನಿಷ್ಟ ತಾಲ್ಲೂಕು ಮಟ್ಟಗಳಲ್ಲಿ ಕೆಲಸ ಮಾಡುವ ಸ್ಥಳೀಯ ಪತ್ರಿಕೆ, ಲೋಕಲ್ ಚಾನಲ್‌ಗಳ ಪತ್ರಕರ್ತರಿಗಿರುವ ಗಂಭೀರತೆಯೂ ಸಂಸತ್ ನಲ್ಲಿ ಸುದ್ದಿ ಮಾಡುವ ಮಹಾನ್ ಪತ್ರಕರ್ತರಿಗೆ ಇಲ್ಲದಾಯಿತಲ್ಲ…ಈ ದೇಶ ಇನ್ನೂ ಏನೇನನ್ನ ನೋಡಬೇಕೋ…
ಎರಡನೇ ಬೆಳವಣಿಗೆ ದಾಳಿಕೋರ ಮನೋರಂಜನ್ ಮೈಸೂರಿನವನು ಎಂದು ಗೊತ್ತಾದ ಕೂಡಲೇ ಬಿಜೆಪಿಯ ಮತ್ತು ಸಂಘಪರಿವಾರದ ಐಟಿ ಸೆಲ್ ಅತ್ಯಂತ ಕ್ರಿಯಾಶೀಲವಾಗಿ ಚಡ್ಡಿಯಲ್ಲಿ ಚೇಳು ಬಿಟ್ಟುಕೊಂಡು ಹೊಸಹೊಸ ಸುಳ್ಳುಗಳನ್ನು ಹೆಣೆಯಲು ಪ್ರಾರಂಬಿಸಿತು. ಮೈಸೂರಿನ SFI ಜಿಲ್ಲಾಧ್ಯಕ್ಷ ವಿಜಯ್ ಅವರ ಫೋಟೋ ಬಳಸಿ ಇವನೇ ಮನೋರಂಜನ್, ಇವನೇ ಸಂಸತ್ ಭವನಕ್ಕೆ ನುಗ್ಗಿದ್ದು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ವ್ಯಕ್ತಿಗಳ ಮುಖ ಚಹರೆಯನ್ನು ಗುರುತಿಸಲಾಗದ, ಅವರುಗಳ ಹಿನ್ನೆಲೆಯನ್ನು ತಿದುಕೊಳ್ಳಲಾಗದ ಈ ಐಟಿ ಸೆಲ್ ನ ಬೃಹಸ್ಪತಿಗಳು ತಾವು ತೋಡಿದ ಕೆಡ್ಡಾದಲ್ಲಿ ತಾವೇ ಬಿದ್ದಿದ್ದಾರೆ. ಮನೋರಂಜನ್ ನ ತಂದೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ನಾವು ಪ್ರತಾಪ್ ಸಿಂಹರೊಂದಿಗೆ ತುಂಬಾ ಚನ್ನಾಗಿದ್ದೇವೆ, ಅವರಿಗೆ ನಾವು ಓಟ್ ಹಾಕಿರೋದು, ನನ್ನ ಮಗ ಮೋದಿ ಅಭಿಮಾನಿ ಎಂದಿದ್ದಾರೆ. ಇದನ್ನು ಯಾವ ರೀತಿ ನೋಡಬೇಕು. ಮೋದಿ ಅಭಿಮಾನಿಗಳೆಲ್ಲಾ ಇದೇ ರೀತಿ ಮನಸ್ಥಿತಿಯವರಾ.. ಬಿಜೆಪಿಗೆ ಮತಹಾಕುವವರೆಲ್ಲಾ ಇಂತಹವರೆನಾ… ಯೋಚಿಸಿ.. ಆಲೋಚಿಸಿ.. ನಿರ್ಧರಿಸಿ……!?
ಈ ವಿಡಿಯೋ ನೋಡಿ : SFI ನಾಯಕನ ಫೋಟೋ ಹಾಕಿ ಈತನೇ ಮನೋರಂಜನ್ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿ Janashakthi Media