ಬಿಜೆಪಿ 5900 ಕೋಟಿ ರೂ. ಸಾಲ ಬಿಟ್ಟು ಹೋಗದೆ ಇದ್ದಿದ್ದರೆ, ಟಿಕೆಟ್ ದರ ಹೆಚ್ಚಿಸುವ ಅಗತ್ಯತೆ ಇರಲಿಲ್ಲ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ ಪ್ರಯಾಣದ ಟಿಕೆಟ್ ದರ ಶೇಕಡ 15ರಷ್ಟು ಏರಿಕೆ ಮಾಡಿ ಅನುಮೋದನೆ ನೀಡಲಾಯಿತು. ಈ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದೂ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಬಿಜೆಪಿಯವರು 5,900 ಕೋಟಿ ಸಾಲ ಬಿಟ್ಟು ಹೋಗಿದ್ದರು ಅವರು ಸಾಲ ಬಿಟ್ಟು ಹೋಗದೆ ಇದ್ದಿದ್ದರೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ ಎಂದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2020 ಜನವರಿ 26 ರಲ್ಲಿ ಅವರು 12 ಪರ್ಸೆಂಟ್ ಟಿಕೆಟ್ ದರ ಏರಿಕೆ ಮಾಡಿದರು.ಆಗ ಜನರಿಗೆ ತೊಂದರೆ ಆಗಲಿಲ್ಲವೇ? ಬಿಜೆಪಿಯವರು 5,900 ಕೋಟಿ ರೂಪಾಯಿ ಸಾಲ ಬಿಟ್ಟು ಹೋಗಿದ್ದಾರೆ.ಬಿಜೆಪಿಯವರು 5,900 ಕೋಟಿ ಸಾಲ ಬಿಟ್ಟು ಹೋಗದೆ ಇದ್ದಿದ್ದರೆ ನಾವು ಟಿಕೆಟ್ ದರ ಏರಿಕೆ ಮಾಡುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ವೇಳೆ ತಿಳಿಸಿದರು.

ಸಂಬಳಕ್ಕೆ ಮೊದಲು 12 ಕೋಟಿ ಆಗುತ್ತಿತ್ತು. ಈಗ 18 ಕೋಟಿ ರೂಪಾಯಿ ಆಗಿದೆ. ಈಗ ಬಿಜೆಪಿಗರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅದು ಮಹಿಳೆಯರಿಗೂ ಆಗುತ್ತೆ ಆ ವೆಚ್ಚ ಸರ್ಕಾರವೇ ಬರಿಸುತ್ತದೆ. ಬಿಜೆಪಿಯವರು ಯಾರು ಬಸ್ ನಲ್ಲಿ ಓಡಾಟ ಮಾಡುತ್ತಾರೆ? ಬೆಂಜ್ ಕಾರಿನಲ್ಲಿ ಓಡಾಡೋರು ಶಕ್ತಿ ಯೋಜನೆಯನ್ನು ಟೀಕೆ ಮಾಡುತ್ತಾರೆ. ಬಿಜೆಪಿಯವರು ಹೊಟ್ಟೆ ತುಂಬಿದವರು ಹಾಗಾಗಿ ಈ ರೀತಿ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಾರ್ವಜನಿಕ ಟೀಕೆಯನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಬಿಜೆಪಿ 5,900 ಕೋಟಿ ಸಾಲ ಇಟ್ಟಿರುವುದರಿಂದ ಸರ್ಕಾರಕ್ಕೆ ಹೊರೆಯಾಗಿದೆ. ಯಾವುದೇ ಗ್ಯಾರಂಟಿ ಯೋಜನೆಯನ್ನು ನಾವು ನಿಲ್ಲಿಸುವುದಿಲ್ಲ. ರೈಲ್ವೆ ಪ್ರಯಾಣದಲ್ಲೂ ಕೂಡ ನೂರಕ್ಕೆ ನೂರು ಬೆಲೆ ಏರಿಕೆ ಮಾಡಿದ್ದಾರೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡುವುದಿಲ್ಲ. ಜನರಿಗೆ ತೊಂದರೆ ಆಗುತ್ತದೆ ಹೊರೆಯಾಗುತ್ತದೆ ಎಂದು ನಮಗೆ ಗೊತ್ತಿದೆ. ಆದರೆ ವಿಧಿ ಇಲ್ಲದೆ ಪ್ರಯಾಣದ ದರ ಏರಿಕೆ ಮಾಡಿದ್ದೇವೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *