ಭೂಹಗರಣದಲ್ಲಿ ಬಿಜೆಪಿ ಅಧ್ಯಕ್ಷ ಭಾಗಿ; ಕ್ರಮಕ್ಕೆ ಕೇರಳದ ಆಡಳಿತಾರೂಢ ಸಿಪಿಐ (ಎಂ) ಆಗ್ರಹ

ತಿರುವನಂತಪುರ: ಕರ್ನಾಟಕದ ಭೂಹಗರಣದಲ್ಲಿ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಭಾಗಿಯಾಗಿದ್ದಾರೆ ಎಂದು ಕೇರಳದ ಆಡಳಿತಾರೂಢ ಸಿಪಿಐ (ಎಂ) ಅಕ್ಟೋಬರ್‌ 28ರಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ರಾಜೀವ್ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅದು ಆಗ್ರಹಿಸಿದೆ. ಭೂಹಗರಣ

ರಾಜೀವ್ ಚಂದ್ರಶೇಖರ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ಆರೋಪ ‘‘ಆಧಾರ ರಹಿತ’’ ‘‘ಸುಳ್ಳು’’ ಎಂದು ಹೇಳಿದ್ದಾರೆ. ಆದರೆ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಚಂದ್ರಶೇಖರ್ ಅವರು ರಾಜೀವ್ ಚಂದ್ರಶೇಖರ್ ವಿರುದ್ಧ ಸಿಟ್ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ದೆವನಹಳ್ಳಿ |ಪ್ರತಿ ಗ್ರಾಮ ಪಂಚಾಯಿತಿಗೊಂದು ಮಾದರಿ ಅಂಗನವಾಡಿ ನಿರ್ಮಾಣ ಗುರಿ

ರಾಜೀವ್ ಚಂದ್ರಶೇಖರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಅಲ್ಲದೆ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.

ಕಾಂಗ್ರೆಸ್ ಪಾಲೆಕ್ಕಾಡ್‌ನಲ್ಲಿ ಬಿಜೆಪಿ ಆಡಳಿತದ ನಗರ ಸಭೆಯ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದೆ. ಅದು ಚಂದ್ರಶೇಖರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದೆ ಹಾಗೂ ಅವರ ಪ್ರತಿಕೃತಿ ದಹಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಭಟನಕಾರರು ರಾಜೀವ್ ಚಂದ್ರಶೇಖರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಅಲ್ಲದೆ ಭೂ ಹಗರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.

ಇದನ್ನೂ ನೋಡಿ: ಆರೆಸ್ಸೆಸ್ ನೂರು: ಅಹ್ಮದಾಬಾದ್ ಗಲಭೆಯಿಂದ ನವ ನಾಜೀವಾದದವರೆಗೆJanashakthi Media

Donate Janashakthi Media

Leave a Reply

Your email address will not be published. Required fields are marked *