ನವದೆಹಲಿ: ಮಹಿಳೆಯರನ್ನು ಅವಮಾನಿಸುವ ಬಿಜೆಪಿ ಚುನಾವಣಾ ಜಾಹೀರಾತನ್ನು ಹಿಂಪಡೆಯುವಂತೆ ರಾಷ್ಟ್ರೀಯ ಮಹಿಳಾ ಸಂಘಟನೆಗಳು ಆಕ್ರೋಶವ್ಯಕ್ತಪಡಿಸಿವೆ.
ಭಾರತೀಯ ಜನತಾ ಪಕ್ಷವು ಇತ್ತೀಚೆಗೆ ಬಿಡುಗಡೆ ಮಾಡಿದ ಚುನಾವಣಾ ಜಾಹೀರಾತು ನಮ್ಮ ಈ ಭಾರತ ದೇಶದ ಮಹಿಳೆಯರನ್ನು ಅವಮಾನಿಸುವಂತಿದೆ ಎಂದು ರಾಷ್ಟ್ರೀಯ ಮಹಿಳಾ ಸಂಘಟನೆಗಳಾದ “ ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ (AIDWA)”, “ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯೂ) ಹಾಗೂ
“ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ (ಎಐಪಿಡಬ್ಲ್ಯೂಎ)” ಅಖಿಲ ಭಾರತ ಮಹಿಳಾ ಸಮನ್ವಯ ಸಮಿತಿ ತೀವ್ರವಾಗಿ ಖಂಡಿಸಿವೆ.
ಈ ಜಾಹೀರಾತುಗಳು ಊಳಿಗಮಾನ್ಯ, ಪಿತೃಪ್ರಭುತ್ವದ ದೃಷ್ಟಿಕೋನದಿಂದ ಚಿತ್ರಿಸುತ್ತದೆ. ವಿರೋಧ ಪಕ್ಷದ ನಾಯಕರಿಗೆ “ವಧು”ವಿನ ಬಗ್ಗೆ ಭಿನ್ನಾಭಿಪ್ರಾಯವನ್ನು ತೋರಿಸುವುದು ಹಾಗೂ ವರರ ಕಡೆಯವರು ಪಡೆಯಲು ಬಯಸುವ ‘ವಸ್ತುವಿನ’ ಬಗ್ಗೆ ಜಗಳವಾಡುವುದು ಕಳಪೆ ಅಭಿರುಚಿಯನ್ನು ತೋರಿಸುತ್ತದೆ. ಅಲ್ಲದೇ ಈ ಜಾಹೀರಾತಿನ ಚಿತ್ರಣದಿಂದ ಮಹಿಳೆಯರಿಗೆ ಅಪಮಾನವಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಪ್ರತಿಪಾದಿಸಿದ “ನಾರಿ ಶಕ್ತಿ”ಯ ಮನುವಾದಿ ಪರಿಕಲ್ಪನೆಯನ್ನು ಅದರ ನಿಜವಾದ ಬಣ್ಣದಲ್ಲಿ ಈ ಜಾಹೀರಾತಿನ ಚಿತ್ರೀಕರಣದ ಮೂಲಕ ಬಿಜೆಪಿಯವರು ಎತ್ತಿ ತೋರಿಸಿದ್ದಾರೆ.
ಮಹಿಳೆಯರನ್ನು ಅವಮಾನಗೊಳಿಸುವ ಬಿಜೆಪಿಯ ಈ ಜಾಹೀರಾತನ್ನು ಕೂಡಲೇ ಹಿಂಪಡೆಯಬೇಕು. ಅಷ್ಟೇ ಅಲ್ಲದೇ ತಮ್ಮ ಕಳಪೆ ಅಭಿರುಚಿಯ ಈ ಜಾಹೀರಾತಿಗಾಗಿ ದೇಶದ ಮಹಿಳೆಯರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಮಹಿಳಾ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೇ ಇಂತಹ ಮಹಿಳಾ ವಿರೋಧಿ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸಿರುವ ಬಿಜೆಪಿ ವಿರುದ್ಧ ಮಹಿಳೆಯರು ಒಗ್ಗಟ್ಟಿನಿಂದ ಮುಂದೆ ಬರಬೇಕು ಮತ್ತು ಈ ದೇಶದಲ್ಲಿ ತಮ್ಮ ಘನತೆ ಮತ್ತು ಸಮಾನತೆಯ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ (AIDWA)-ಮರಿಯಮ್ ಧವಳೆ, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (NFIW) – ಅನ್ನಿ ರಾಜ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ (AIPWA) – ಮೀನಾ ತಿವಾರಿ, ಅಖಿಲ ಭಾರತ ಮಹಿಳಾ ಸಮನ್ವಯದ ಜಿ. ಝಾನ್ಸಿ, ಪೂನಂ ಕೌಶಿಕ್ ಸೇರಿದಂತೆ ಹಲವು ನಾಯಕರು ಒತ್ತಾಯಿಸಿದ್ದಾರೆ.