ಬಿಜೆಪಿ ಅವರು ನನ್ನನ್ನು ಖರೀದಿಸುವಷ್ಟು ಶ್ರೀಮಂತರಲ್ಲ; ಪ್ರಕಾಶ್‌ ರಾಜ್‌

ಬೆಂಗಳೂರು :ಈ ನಡುವೆ ಪ್ರಕಾಶ್ ರಾಜ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಷಯವಾಗಿ ಪ್ರಕಾಶ್‌ ರಾಜ್‌ ಪ್ರತಿಕ್ರಿಯಿಸಿದ್ದಾರೆ.

ತಮ್ಮ ವಿಶಿಷ್ಟ ಶೈಲಿ ಮತ್ತು ಬಲವಾದ ನಟನೆಯಿಂದ ಪ್ರಕಾಶ್ ರಾಜ್  ಪ್ರಸಿದ್ದಿಯನ್ನು ಹೊಂದಿದ್ದಾರೆ. ಪ್ರಕಾಶ್ ರಾಜ್ ಯಾವಾಗಲೂ ಬಿಜೆಪಿ ಅಜೆಂಡಾಗಳ ವಿರುದ್ಧವಾಗಿದ್ದು, ಅದರ ನೀತಿಗಳ ಬಗ್ಗೆ ಮತ್ತೆ ಮತ್ತೆ ಪ್ರಶ್ನೆಗಳನ್ನ ಎತ್ತುತ್ತಲೇ ಇರುತ್ತಾರೆ.

ಆದರೆ, ಈ ನಡುವೆ ಪ್ರಕಾಶ್ ರಾಜ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : ಮೈಸೂರು-ಕೊಡಗು ಕ್ಷೇತ್ರದಲ್ಲಿ ದೊಡ್ಡ ಅಂತರದ ಗೆಲುವು : ವಿಜಯೇಂದ್ರ

ವಾಸ್ತವವಾಗಿ, ಟ್ವಿಟರ್ನಲ್ಲಿ ಒಂದು ಟ್ವೀಟ್ ವೈರಲ್ ಆಗುತ್ತಿದೆ. ದಿ ಸ್ಕಿನ್ ಡಾಕ್ಟರ್ ಎಂಬ ಹೆಸರಿನ ಖಾತೆಯಲ್ಲಿ ಪ್ರಕಾಶ್ ರಾಜ್ ಮಧ್ಯಾಹ್ನ 3 ಗಂಟೆಗೆ ಭಾರತೀಯ ಜನತಾ ಪಕ್ಷಕ್ಕೆ ಸೇರಲಿದ್ದಾರೆ ಎಂದು ಪೋಸ್ಟ್ ಬರೆಯಲಾಗಿದೆ. ಸಧ್ಯ ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಪ್ರಕಾಶ್ ರಾಜ್ ಟ್ವೀಟ್ ಮಾಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಅವರು ಪ್ರಯತ್ನಿಸಿದರು ಎಂದು ನಾನು ಭಾವಿಸುತ್ತೇನೆ, ಆದರೆ ಅವರು ನನ್ನನ್ನು ಖರೀದಿಸುವಷ್ಟು ಶ್ರೀಮಂತರಲ್ಲ ಎಂದು ಅವರು ಅರಿತುಕೊಂಡಿರಬೇಕು… ನಿಮ್ಮ ಅಭಿಪ್ರಾಯವೇನು, ಗೆಳೆಯಾ?” ಎಂದು ಪ್ರಶ್ನಿಸಿದ್ದಾರೆ.

ಇದನ್ನು ನೋಡಿ : ಮೋದಿ ಸಾಹೇಬರೆ… ನಮ್ಮ ಪ್ರಶ್ನೆಗಳಿಗೆ ಜವಾಬು ಹೇಳಿ – ಅಂಬಣ್ಣ ಅರೋಳಿಕರ್ ಹಾಡು Janashakthi Media

Donate Janashakthi Media

Leave a Reply

Your email address will not be published. Required fields are marked *