ಚಂಡಿಗಡ್:ಬಿಜೆಪಿಯ ಸಂಸದೆ ಕಂಗನಾ ರಾನಾವತ್‌ಗೆ ಮಹಿಳಾ ಪೇದೆಯೊಬ್ಬರಿಂದ ಕಪಾಳಮೋಕ್ಷವಾಗಿದೆ.
ಕಂಗನಾ ರಾನಾವತ್‌ಗೆ ಕಪಾಳಮೋಕ್ಷ ಮಾಡಿದ್ದು ಸಿಐಎಸ್‌ಎಫ್ ಸಿಐಎಸ್‌ಎಫ್ ಪೇದೆ ಕುಲ್ವಿಂದರ್ ಕೌರ್.
ಇದನ್ನು ಓದಿ : ಪ್ರಜ್ವಲ್ ರೇವಣ್ಣ SIT ಕಸ್ಟಡಿ ವಿಸ್ತರಣೆ
ಈ ಹಿಂದೆ ಕೇಂದ್ರ ಸರ್ಕಾರ ತರಲು ಹೊರಟಿದ್ದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡಿದ್ದ ರೈತರನ್ನು ಖಲಿಸ್ತಾನಿಗಳು ಎಂದು ಕಂಗನಾ ನಿಂದಿಸಿದ್ದರು.ಈ ಹೇಳಿಕೆಯ ಬಗ್ಗೆ ಸಿಐಎಸ್‌ಎಫ್ ಸಿಬ್ಬಂದಿ ಆಕೆಯನ್ನು ಕಂಡಾಗ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದರಿಂದ ಆಕ್ರೋಶಗೊಂಡ ಚಂಡೀಗಢ ಏರ್‌ಪೋರ್ಟಿನ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.
ಆನಂತರ ಅವರು, ನಾನು ಏಕೆ ಕಂಗಾನ ಮುಖಕ್ಕೆ ಬಾರಿಸಿದ್ದು ಅಂದರೆ, ಅಂದು ರೈತರ ಆಂದೋಲನದ ಸಂದರ್ಭದಲ್ಲಿ ಆಂದೋಲನದಲ್ಲಿ ಭಾಗವಹಿಸಿದ ರೈತರ ಕುರಿತು 100 ರೂಪಾಯಿ ಆಸೆಗಾಗಿ ಬಂದವರು ಎಂದು ಈಕೆ ಹೇಳಿಕೆ ನೀಡಿದ್ದಳು. ಅಂದು ನನ್ನ ತಾಯಿಯೂ ಆಂದೋಲನದಲ್ಲಿ ಭಾಗವಹಿಸಿದ್ದರು. ಹಾಗಾಗಿ ಬಾರಿಸಿದೆ ಎಂದಿದ್ದಾರೆ.
ಕಪಾಳಮೋಕ್ಷಗೈದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ.
ಇದನ್ನು ನೋಡಿ : ಬಾ ಬಾರೋ ಪ್ರಜ್ವಲ, ನಿನ್ನ ಪಾಪದ ಕೊಡ ತುಂಬೈತೆ – ಜನಪರ ಕಲಾವಿದರಿಂದ ಹಾಡುJanashakthi Media