ರೂರ್ಕೆಲಾ: ಓಡಿಸ್ಸಾ ರಾಜ್ಯದ ಸುಂದರ್‌ಗಢ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಜುಯಲ್ ಓರಮ್ ತಮ್ಮೊಂದಿಗೆ ದೂರವಾಣಿ ಮೂಲಕ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಯುವ ಬಿಜೆಪಿ ಕಾರ್ಯಕರ್ತೆಯೊಬ್ಬರು ಪಕ್ಷದ ಕಚೇರಿಗೆ ನುಗ್ಗಿದ ಘಟನೆ ನಡೆದಿದೆ.
ರೂರ್ಕೆಲಾ ಸ್ಟೀಲ್ ಪ್ಲಾಂಟ್ ನ ಸೆಕ್ಟರ್ -3 ನಲ್ಲಿರುವ ಬಿ-33 ಕ್ವಾರ್ಟರ್ಸ್ ನಲ್ಲಿ ಬಿಜೆಪಿ ಪಕ್ಷದ ಕಛೇರಿ ಇದ್ದು ಇಲ್ಲಿಗೆ ಗೌರಿ ಮುಂಡರಿ ಹಾಗೂ ಪ್ರಶಾಂತ್ ಮಜ್ಹಿ ಸೇರಿದಂತೆ ತನ್ನ ಬೆಂಬಲಿಗರೊಂದಿಗೆ ಕಚೇರಿಗೆ ಆಗಮಿಸಿ ಕಿಟಕಿ ಗಾಜುಗಳನ್ನು ಒಡೆದರು.
ಗೌರಿ ಅವರು ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚಿಸಲು ಜುಯಲ್ ಓರಾಮ್ ಅವರೊಂದಿಗೆ ಫೋನ್ ಮಾಡಿ ಸಂಪರ್ಕಿಸಿದ್ದಾರೆ. ಆದರೆ, ಸಂಸದರು ತನ್ನನ್ನು ನಿಂದಿಸಿದಾಗ ಆಘಾತಕ್ಕೊಳಗಾಗಿದ್ದಾರೆ. ಜೊತೆಯಲ್ಲಿದ್ದ ಇನ್ನೊಬ್ಬ ಮಹಿಳೆ ಫೋನ್ ತೆಗೆದುಕೊಂಡು ಜುಯಲ್ ಓರಾಮ್ ಕುಡಿದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿ ಸಮಾಧಾನಪಡಿಸಲು ಪ್ರಯತ್ನಿಸಿದಳು.
ಬಿಜೆಪಿ ಸಂಸದರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂದು ನಾನು ಭಾವಿಸುತ್ತೇನೆ. ಸಹೋದರಿಯರು ಮತ್ತು ತಾಯಂದಿರನ್ನು ಗೌರವಿಸುವುದನ್ನು ಕಲಿಯಬೇಕು. ನಾನು ಇತರ ಮಹಿಳೆಯರಿಂದ ಇದೇ ರೀತಿಯ ದೂರುಗಳನ್ನು ಕೇಳಿದ್ದೇನೆ ಆದರೆ ಅದು ನನ್ನೊಂದಿಗೆ ಸಂಭವಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಅವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಗೌರಿ ಹೇಳಿದ್ದಾರೆ.