ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧ ಕ್ರಮಕ್ಕೆ ಮಹಿಳಾ ಸಂಘ ಆಗ್ರಹ

ಬೆಂಗಳೂರು: ಬಿಜೆಪಿಯ ಎಂ.ಎಲ್.ಸಿ ಮತ್ತು ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿರುವ ಎನ್ ರವಿಕುಮಾರ ಅವರು ಕಲಬುರಗಿಯಲ್ಲಿ ಅವರ ಪಕ್ಷದವರು ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಆಡಿದ ನಂಜಿನ ನಾಲಿಗೆಯ ಕೋಮುದ್ವೇಷದ ಮಾತುಗಳನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಸಮಿತಿ ಕಲಬುರಗಿಯ ಜಿಲ್ಲಾಧಿಕಾರಿಯವರನ್ನು ಕುರಿತು ಆಡಿದ ಪ್ರಚೋದನಕಾರಿ ಮಾತುಗಳು ಶಿಕ್ಷಾರ್ಹವಾದ ಮಾತುಗಳಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲ ಒತ್ತಾಯಿಸಿದ್ದಾರೆ. ಈ ಡಿಸಿ ಕಚೇರಿ ಕೂಡ ಸ್ವಾತಂತ್ರ ಕಳೆದುಕೊಂಡು ಬಿಟ್ಟಿದೆ, ಇಲ್ಲಿನ ಡಿ ಸಿ ಮೇಡಂ ಪಾಕಿಸ್ತಾನದಿಂದ ಬಂದಂತೆ ತೋರುತ್ತದೆ ಎಂದು ಅತ್ಯಂತ ಬೇಜವಾಬ್ದಾರಿ ಮಾತುಗಳನ್ನಾಡಿದ ಇವರ ಕೋಮುದ್ವೇಷ ಭಾಷಣದಿಂದ ಉದ್ರೇಕಿತರಾಗಿ ಕೆಲವು ಜನರು ಚಪ್ಪಾಳೆ ಹೊಡೆದದ್ದನ್ನೆ ನೆಪಮಾಡಿಕೊಂಡು ಅದರಿಂದ ಮತ್ತಷ್ಟು ಮೈ ಮೇಲಿನ ಖಬರು ಕಳೆದುಕೊಂಡ ಮಹಾನುಭಾವರು, ನೀವು ಚಪ್ಪಾಳೆ ಹೊಡೆಯುವುದು ನೋಡಿದರೆ ಇಲ್ಲಿನ ಡಿ ಸಿ ಮೇಡಂ ನಿಜವಾಗಿಯೂ ಪಾಕಿಸ್ತಾನದಿಂದ ಬಂದಂತೆ ತೋರುತ್ತದೆ ಎಂದು ಮತ್ತೊಮ್ಮೆ ನಾಲಿಗೆ ಹರಿಯ ಬಿಟ್ಟಿದ್ದಾರೆ.

ಇದನ್ನು ಓದಿ :-ಮುಸ್ಲಿಂ ಯುವಕನ ಕೊಲೆ : ಶಾಂತಿ ಕಾಪಾಡಲು ಸಿಪಿಐಎಂ ಮನವಿ.

ಜಿಲ್ಲಾ ದಂಡಾಧಿಕಾರಿಯೂ ಆಗಿ ಕರ್ತವ್ಯ ನಿರ್ವಹಿಸುವ ಜಿಲ್ಲಾಧಿಕಾರಿಗಳ ಜಾತಿ, ಧರ್ಮಗಳನ್ನು ಪರಿಗಣಿಸಿ ಹೀಗಳೆದು ಮಾತನಾಡಿದ ಈ ಮಾತುಗಳ ಬಿಜೆಪಿಯ ಸಂವಿಧಾನ ವಿರೋಧೀ ನಡವಳಿಕೆಗಳಿಗೆ‌ ಮತ್ತೊಂದು ಸಾಕ್ಷಿಯಾಗಿದೆ. ಬಿ.ಜೆ.ಪಿ.ನೇತೃತ್ವದ ಕೇಂದ್ರದ ಸರಕಾರದ ಕೇಂದ್ರದ ಗೃಹ ಸಚಿವಾಲಯದ ನಿರ್ಲಕ್ಷ್ಯದಿಂದ ಪೆಹಲಗಾಮ್ ದುರಂತದಲ್ಲಿ ನಾಗರಿಕರ ಜೀವಬಲಿಯಾಗಿದೆ. ನಾಚಿ ತಲೆತಗ್ಗಿಸುವ ಬದಲು ದೇಶದ ಹೆಮ್ಮೆಯ ಮಗಳು ಕರ್ನಲ್ ಸೋಫಿಯಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಹೇಳಿ ಒಬ್ಬ ಬಿ.ಜೆ.ಪಿ ನಾಯಕ‌ ಈ ಮೊಲದೇ ತನ್ನ ನೀಚತನ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇನ್ನೊಬ್ಬರು ಅಲ್ಲಿ ತಮ್ಮ ಗಂಡಂದಿರು ಭಯೋತ್ಪಾದಕರ ಗುಂಡಿಗೆ ಬಲಿಯಾಗುವಾಗ ವೀರಾವೇಶದಿಂದ ಭಯೋತ್ಪಾದಕರ ಜೊತೆ ಹೋರಾಡಬೇಕಿತ್ತು ಎಂದು ಅಸಂಬದ್ದವಾಗಿ ಮಾತನಾಡಿದ್ದಾರೆ. ಹೀಗೆ ಮಹಿಳೆಯರನ್ನು ಅಪಮಾನಿಸುವುದೇ ಬಿಜೆಪಿಯವರ ಸಾಧನೆಯಾಗಿದೆ. ಆಡಬಾರದ ಮಾತುಗಳನ್ನು ಆಡಿ ಕ್ಷಮೆ ಯಾಚಿಸುವುದು ಇವರು ಕಟ್ಟುವ ಆಟಗಳಲ್ಲದೆ ಮತ್ತೇನೂ ಅಲ್ಲ. ಜನರನ್ನು ಭಾವನಾತ್ಮಕವಾಗಿ‌ ಪ್ರಚೋದಿಸಿ ನಂತರ ಬಾಯ್ತಪ್ಪಿ ಮಾತನಾಡಿದೆ ಎನ್ನುವುದೂ ಕೂಡಾ ಸಂಚಿನ ಭಾಗವೇ‌ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯಪಡುತ್ತದೆ.

ಇದನ್ನು ಓದಿ :-ಕೊಪ್ಪಳದಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿತನ ಬಂಧನ

ಎಂ ಎಲ್ ಸಿ ರವಿಕುಮಾರ ಅವರ ಈ ನೀಚತನವನ್ನು ಜನವಾದಿ ಮಹಿಳಾ ಸಂಘಟನೆ ಖಂಡಿಸುತ್ತದೆ. ಕೂಡಲೇ ಬಿಜೆಪಿಯ ರವಿಕುಮಾರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಾಡಿನ ಮಹಿಳೆಯರನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *