ಮತ ಸೆಳೆಯಲು ಉಡುಗೊರೆ ನೀಡಿದ ಬಿಜೆಪಿ ಶಾಸಕ; ಕುಕ್ಕರ್‌ ಹಂಚಿದ ಉದಯ್‌ ಗರುಡಾಚಾರ್‌

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಮತದಾರರನ್ನು ಸೆಳೆಯಲು ಮುಂದಾಗಿರುವ ರಾಜಕೀಯ ಪಕ್ಷದ ನಾಯಕರು ಮತದಾರರಿಗೆ ವಿವಿಧ ಉಡುಗೊರೆಗಳನ್ನು ನೀಡಲು ಮುಂದಾಗಿದ್ದಾರೆ. ಚಿಕ್ಕಪೇಟರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌, ಕಾರ್ಯಕ್ರಮ ಆಯೋಜಿಸಿ ಮತದಾರರಿಗೆ ಕುಕ್ಕರ್‌ ನೀಡಿದ ಘಟನೆ ನಡೆದಿದೆ.

ಇದನ್ನು ಓದಿ: ಮತದಾರರಿಗೆ ಹಣದ ಅಮಿಷ: ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು

ರಾಜಕಾರಣಿಗಳು ಮತದಾರರ ಓಲೈಕೆಗೆ ನಡೆಸುತ್ತಿರುವ ಕಸರತ್ತು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಹೆಬ್ಬಾಳ ಶಾಸಕ ಭೈರತಿ ಸುರೇಶ್ ಮತದಾರರಿಗೆ ಟಿವಿ ಭಾಗ್ಯ ನೀಡಿರುವ ಬೆನ್ನಲ್ಲೆ, ಇದೀಗ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮತದಾರರಿಗೆ ಕುಕ್ಕರ್‌ ನೀಡಿರುವ ಘಟನೆ ನಡೆದಿದೆ. ಈ ಹಿಂದೆ ಸಂಕ್ರಾತಿ ಹೆಸರಿನಲ್ಲಿ ತಮಿಳು ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡಿದ್ದ ಶಾಸಕರು ಇದೀಗ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ.

ಕಳೆದ ಐದು ವರ್ಷಗಳಿಂದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಉದಯ್‌ ಗರುಡಾಚಾರ್‌, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರೂ ಹೆಚ್ಚಾಗಿದ್ದು, ಅವರ ಓಲೈಕೆಗಾಗಿ ಕುಕ್ಕರ್ ನೀಡಿ ಬಿಜೆಪಿ ಪರವಾಗಿ ಮತ ಸೆಳೆಯಲು ಮುಂದಾಗಿದ್ದಾರೆ.

ಈ ಕ್ಷೇತ್ರದಲ್ಲಿ ಶಾಸಕರಾಗಿ ಯಾರೇ ಆಯ್ಕೆಬೇಕಿದ್ದರೂ, ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕ. ಅಲ್ಪಸಂಖ್ಯಾತರ ಓಲೈಕೆ ಮಾಡುವುದು ಎಲ್ಲಾ ರಾಜಕೀಯ ಪಕ್ಷಗಳ ತಂತ್ರವಾಗಿದೆ. ಈ ಅಂಶ ಅರಿತಿರುವ ಉದಯ್ ಗರುಡಾಚಾರ್ ಅವರು ಇದೀಗ ಕ್ಷೇತ್ರದಲ್ಲಿರುವ 30 ಸಾವಿರಕ್ಕೂ ಹೆಚ್ಚು ಅಲ್ಪ ಸಂಖ್ಯಾತರಿಗೆ ಕುಕ್ಕರ್ ವಿತರಣೆ ಮಾಡುವ ಮೂಲಕ ಅವರ ಮತಬ್ಯಾಂಕ್‍ಗೆ ಕೈ ಹಾಕಲು ಮುಂದಾಗಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *