ಗೋವಾ: ಮುಂಬೈ: ಸಂಸತ್ತಿನಲ್ಲಿ ‘ಹಿಂದೂ ರಾಷ್ಟ್ರ’ವನ್ನು ನಿರ್ಭೀತಿಯಿಂದ ಒತ್ತಾಯಿಸುವ 50 ಕಟ್ಟಾ ಹಿಂದೂ ಸಂಸದರನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಫೈರ್‌ಬ್ರಾಂಡ್ ಮತ್ತು ವಿವಾದಾತ್ಮಕ ರಾಜಕಾರಣಿ ಟಿ ರಾಜಾ ಸಿಂಗ್ ಲೋಧ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗೋವಾದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಉತ್ಸವದಲ್ಲಿ ತೆಲಂಗಾಣದ ಗೋಶಾಮಹಲ್ ಕ್ಷೇತ್ರದ ಶಾಸಕ ಟಿ.ರಾಜಾ ಸಿಂಗ್ ಭಾಗವಹಿಸಿದ್ದರು.
ಟಿ.ರಾಜಾ ಸಿಂಗ್‌ರನ್ನು ಬಿಜೆಪಿಯ ಫೈರ್‌ಬ್ರಾಂಡ್ ಹಿಂದುತ್ವದ ಮುಖ ಎಂದು ಕರೆಯಲಾಗುತ್ತಿದ್ದು, ಗೋವಾದ ಪೋಂಡಾದಲ್ಲಿ ನಡೆದ ಜಾಗತಿಕ ಹಿಂದೂ ರಾಷ್ಟ್ರ ಮಹೋತ್ಸವದ ಸಮಾರೋಪ ದಿನದಂದು ಈ ಹೇಳಿಕೆ ನೀಡಿದ್ದಾರೆ.
ಡೆಕ್ಕನ್ ಹೆರಾಲ್ಡ್ ಪ್ರಕಾರ, ಈ ದಿನಗಳಲ್ಲಿ ಅನೇಕ ರಾಜಕಾರಣಿಗಳು ಕಟ್ಟಾ ಹಿಂದೂ ನಾಯಕರಂತೆ ನಟಿಸುತ್ತಿದ್ದಾರೆ. ಆದರೆ, ಚುನಾವಣೆಯಲ್ಲಿ ಗೆದ್ದ ನಂತರ ಜಾತ್ಯತೀತರಾಗುತ್ತಾರೆ. ಇಂತಹ ಸಂಸದರು ಮತ್ತು ಶಾಸಕರು ‘ಹಿಂದೂ ರಾಷ್ಟ್ರ’ ಸ್ಥಾಪನೆಗೆ ನಿಷ್ಪ್ರಯೋಜಕರು. ಚುನಾವಣಾ ಫಲಿತಾಂಶದ ನಂತರ ಜಾತ್ಯತೀತರಾಗುವ ಇಂತಹ ‘ಹಿಂದುತ್ವ’ ಸಂಸದರು ‘ಹಿಂದೂ ರಾಷ್ಟ್ರ’ ಬೇಡಿಕೆಯನ್ನು ವಿರೋಧಿಸುತ್ತಾರೆ. ಆದ್ದರಿಂದ, ಸಂಸತ್ತಿನಲ್ಲಿ ನಿರ್ಭೀತಿಯಿಂದ ‘ಹಿಂದೂ ರಾಷ್ಟ್ರ’ವನ್ನು ಒತ್ತಾಯಿಸುವ 50 ಕಟ್ಟಾ ಹಿಂದೂ ಸಂಸದರನ್ನು ಆಯ್ಕೆ ಮಾಡುವ ಅಗತ್ಯವಿದೆ ಎಂದಿದ್ದಾರೆ.
ಇದನ್ನು ಓದಿ : ಪ್ರಧಾನಿ ಮೋದಿಯ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ ಎಂದ ರಾಹುಲ್‌ಗಾಂಧಿ
ಟಿ.ರಾಜಾ ಅವರ ವಿವಾದದ ಇತಿಹಾಸ ಹಳೆಯದು ಎಂಬುದು ಗಮನಾರ್ಹ. 2020 ರಲ್ಲಿ, ದ್ವೇಷದ ಭಾಷಣಕ್ಕಾಗಿ ಸೋಶಿಯಲ್ ಮೀಡಿಯಾ ಫೇಸ್‌ಬುಕಗ ಪ್ಲಾಟ್‌ಫಾರ್ಮ್ ಮತ್ತು ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ರಾಜಾ ಸಿಂಗ್‌ರನ್ನು ನಿಷೇಧಿಸಿತ್ತು.
ಹಿಂಸಾಚಾರ ಮತ್ತು ದ್ವೇಷವನ್ನು ಉತ್ತೇಜಿಸುವ ವಿಷಯದ ಕುರಿತು ನಮ್ಮ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಟಿ ರಾಜಾ ಸಿಂಗ್ ಅವರನ್ನು ಫೇಸ್‌ಬುಕ್‌ನಿಂದ ನಿಷೇಧಿಸಿದ್ದೇವೆ ಎಂದು ಫೇಸ್‌ಬುಕ್ ವಕ್ತಾರರು ಇಮೇಲ್ ಮೂಲಕ ಹೇಳಿಕೆಯಲ್ಲಿ ತಿಳಿಸಿದ್ದರು.
2019 ರ ಆರಂಭದಲ್ಲಿ, ಚುನಾವಣೆಯಲ್ಲಿ ಗೆದ್ದ ನಂತರ, ರಾಜಾಸಿಂಗ್, ಹಂಗಾಮಿ ಸ್ಪೀಕರ್ ಮುಮ್ತಾಜ್ ಅಹ್ಮದ್ ಖಾನ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಯಾರ ಪಕ್ಷ ಹಿಂದೂಗಳನ್ನು ನಾಶಮಾಡಲು ಬಯಸುತ್ತದೆಯೋ ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸಲು ಬಯಸುವುದಿಲ್ಲ ಎಂದು ಹೇಳಿದ್ದರು. ಆಗ ಅವರು ಎಐಎಂಐಎಂ ಅನ್ನು ರಾಷ್ಟ್ರವಿರೋಧಿ ಪಕ್ಷ ಎಂದು ಕರೆದಿದ್ದರು.
2018ರಲ್ಲಿಯೂ ಗೋವಿಗೆ ‘ರಾಷ್ಟ್ರ ಮಾತೆ’ ಸ್ಥಾನಮಾನ ಸಿಗುವವರೆಗೆ ಗುಂಪು ಹತ್ಯೆಯಂತಹ ಘಟನೆಗಳು ನಿಲ್ಲುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದನ್ನು ನೋಡಿ : ಮೋದಿ 3.O ಸರ್ಕಾರ ತನ್ನ ಹಿಂದಿನ ಸರ್ವಾಧಿಕಾರಿ ನೀತಿ ಮುಂದುವರೆಸುತ್ತದೆಯೇ? Janashakthi Media