ನನ್ನನ್ನು ಕೊಂದು 6 ತಿಂಗಳಲ್ಲಿ ಬೈ ಎಲೆಕ್ಷನ್ ಮಾಡುವ ಕುತಂತ್ರ
ಔರಾದ್ : ಕೇಂದ್ರ ಸಚಿವ ಭಗವಂತ್ ಖೂಬಾ ಅವರು ನನ್ನನ್ನು ಕೊಲೆ ಮಾಡಿ 6 ತಿಂಗಳಲ್ಲಿ ಉಪ ಚುನಾವಣೆ ನಡೆಸಲು ಕುತಂತ್ರ ನಡೆಸುತ್ತಿದ್ದಾರೆ. ಅವರು ಸಾಕಿದ ಗುಂಡಾಗಳಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದಾರೆ.
ನನ್ನನ್ನು ಕೊಲೆ ಮಾಡಿ 6 ತಿಂಗಳಲ್ಲಿ ಬಿಜೆಪಿ ಶಾಸಕ ಪ್ರಭು ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಪಕ್ಷದವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರಿಗಿಂತ ಬೀದರ್ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ನಮ್ಮ ವಿರುದ್ದ ಕೆಲಸ ಮಾಡುವುದರ ಜತೆಗೆ ಹಲವು ಅಭಿವೃದ್ಧಿಯ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದ್ದಾರೆ. ಪದೆಪದೇ ನಾನು ಮುಂಬೈ ಮೂಲದವನು ಎನ್ನುವುದನ್ನು ಸಚಿವ ಖೂಬಾ ಮೊದಲು ನಿಲ್ಲಿಸಲಿ. ನಾನೂ ಔರಾದ್ ತಾಲೂಕಿವನಾಗಿದ್ದು ಹೊಟ್ಟೆ ಪಾಡಿಗಾಗಿ ಮುಂಬೈಗೆ ಹೊಗಿದ್ದೆನೆ. ನನ್ನಂತೆ ತಾಲೂಕಿನ ಸಾವಿರಾರು ಜನರು ಕೆಲಸಕ್ಕಾಗಿ ಹೈದರಾಬಾದ್, ಮುಂಬೈ, ಬೆಂಗಳೂರಿನಲ್ಲೂ ಇದ್ದಾರೆ ಅಂದರೆ ತಾಲೂಕಿನ ನಾಗರಿಕರೇ ಅಲ್ವವೆ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ:ಏಯ್ ಫೋಟೋ ತೆಗಿಬೇಡ್ರಪ್ಪ ಅಂತಾ ಆರತಿ ತಟ್ಟೆಗೆ ಗರಿ ಗರಿ ನೋಟು ಹಾಕಿದ ಸಿಎಂ
ಕೇಂದ್ರ ಸಚಿವ ಭಗವಂತ ಖೂಬಾ ಅವರು ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ . ನನ್ನನ್ನು ಕೊಂದು 6 ತಿಂಗಳಲ್ಲಿ ಉಪ ಚುನಾವಣೆಗೆ ಕುತಂತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ರಸ್ತೆ ಮಧ್ಯೆ ಗುಂಡುಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಭಗವಂತ ಖೂಬಾ ಬೆಂಬಲಿಗರಿಂದಲೇ ನನಗೆ ಗೊತ್ತಾಗಿದೆ ಎಂದರು.
ನಾನು 1998ರಿಂದ ಬಿಜೆಪಿಯಲ್ಲಿದ್ದೇನೆ. ಈಗಿನ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಗೋಪಿನಾಂಥ ಮುಂಡೆ ಅವರ ಜತೆ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಇದನ್ನೆಲ್ಲ ನೋಡಿಯೇ ನನಗೆ 2008ರಲ್ಲಿ ಇಲ್ಲಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದಾರೆ. ನನ್ನ ಸ್ವಭಾವ ಹಾಗೂ ಕೆಲಸ ನೋಡಿ ಜನ ನನಗೆ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಮಾಡಿದ್ದಾರೆ ಎಂದು ಹೇಳಿದರು.
ನಿಮ್ಮಂತೆ ನಾನು ಎಂದೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ನೀವು ಕಾಂಗ್ರೆಸ್‍ನವರ ಜತೆ ಸೇರಿ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದೀರಿ. 2014ರ ಲೋಕಸಭಾ ಚುನಾವಣೆಯಲ್ಲಿ ಅನೇಕರ ವಿರೋಧ ಕಟ್ಟಿಕೊಂಡು ನಿಮಗೆ ಟಿಕೆಟ್ ಕೊಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕಿದೆ. ನಿಮ್ಮ ಗೆಲುವಿಗಾಗಿ ಅವಿರತವಾಗಿ ಪ್ರಯತ್ನಿಸಿದೆ. ಪಕ್ಷದ ಕಾರ್ಯಕರ್ತರು ಹಾಗೂ ಮೋದಿ ಕೃಪೆಯಿಂದ ಗೆದ್ದು ಮಂತ್ರಿಯಾದ ನೀವೇ ನಿಜವಾದ ಲಕ್ಕಿ ಮ್ಯಾನ್ ಎಂದು ಭಗವಂತ್ ಖೂಬಾ ವಿರುದ್ಧ ಕಿಡಿಕಾರಿದರು.
ಖೂಬಾ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಮಾತ್ರ ಚುನಾವಣೆಯಲ್ಲಿ ಕೆಲಸ ಮಾಡುತ್ತೆವೆ ಇಲ್ಲವಾದಲ್ಲಿ ನಾವು ಮನೆಯಲ್ಲೆ ಇರುತ್ತೇವೆ ಎಂದು ಕಾರ್ಯಕಾರಣಿ ಸದಸ್ಯರು ಸಭೆಯಲ್ಲಿ ತಿಳಿಸಿದರು. ತಾಲೂಕು ಜಿಲ್ಲಾ ಮಟ್ಟದ ಪಕ್ಷದ ಮುಖಂಡರು ಸಭೆಯಲ್ಲಿ ಇದ್ದರು.