ನಾನು ಮಾತನಾಡಿದರೆ ನನ್ನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬಹುದು: ಬಿಜೆಪಿ ಶಾಸಕ ಅಸಮಾಧಾನ

ಲಕ್ನೋ: “ನಾನು ಹಲವಾರು ಕಾರ್ಯಗಳನ್ನು ಕೈಗೊಂಡಿದ್ದೇನೆ. ಆದರೆ ಶಾಸಕರ ಕುರಿತು ಇಲ್ಲಿ ಯಾವ ನಿಲುವಿದೆ? ನಾನೇದಾರೂ ಹೆಚ್ಚು ಮಾತನಾಡಿದರೆ ದೇಶದ್ರೋಹ ಪ್ರಕರಣ ದಾಖಲಿಸಬಹುದು” ಬಿಜೆಪಿ ಶಾಸಕ ರಾಕೇಶ್‌ ರಾಥೋಡ್‌ ಆಕ್ರೋಶಗೊಂಡಿದ್ದಾರೆ.

ಉತ್ತರಪ್ರದೇಶದ ಬಿಜೆಪಿ ಸರಕಾರದ ವಿರುದ್ಧ ರಾಕೇಶ್‌ ರಾಥೋಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಮಾಧ್ಯಮಗಳೊಂದಿಗೆ ಮಾತನಾಡಿದ್ದಲ್ಲಿ ನನ್ನ ವಿರುದ್ಧವೇ ಸರಕಾರ ದೇಶದ್ರೋಹ ಪ್ರಕರಣ ದಾಖಲಿಸಬಹುದು ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಸಾಮಾಜಿಕ ಕೊಲೆಯೂ ಮತ್ತು ಕಾಣೆಯಾದ ಪ್ರಭುತ್ವವೂ

ಸೀತಾಫುರ ಪಟ್ಟಣದಲ್ಲಿ ಸರಕಾರಿ ಆರೋಗ್ಯ ಕೇಂದ್ರವನ್ನು ಮರು ಕಾರ್ಯಗತಗೊಳಿಸುವ ಕುರಿತು ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಅವರು ಹೀಗೆ ಉತ್ತರ ನೀಡಿದರು.

ರಾಜ್ಯದಲ್ಲಿ ನಿಮ್ಮದೆ ಸರಕಾರ ಇರುವಾಗ, ನೀವು ಆ ಪಕ್ಷದಿಂದ ಜನಪ್ರತಿನಿಧಿಯಾಗಿದ್ದೀರಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದಾಗ, “ಇಲ್ಲಿ ಶಾಸಕರು ತಮ್ಮ ಮನದಲ್ಲಿದುದನ್ನು ಬಹಿರಂಗವಾಗಿ ಹೇಳಬಹುದು ಎಂದು ನಿಮಗನಿಸುತ್ತಿದೆಯೇ? ನಾನು ಈ ಕುರಿತು ಈ ಹಿಂದೆಯೂ ಪ್ರಶ್ನಿಸಿದ್ದೆ ಎಂಬುವುದು ನಿಮಗೆ ತಿಳಿದಿದೆಯಲ್ಲವೇ” ಎಂದು ಅವರು ಉತ್ತರಿಸಿದ್ದಾರೆ.

ಮೊದಲ ಬಾರಿ ಶಾಸಕರಾಗಿರುವ ರಾಥೋಡ್‌ 2017ರ ಚುನಾವಣೆಗೂ ಮುಂಚೆ ಬಿಜೆಪಿ ಸೇರಿದ್ದರು. ಈ ಹಿಂದೆ ಸ್ವತಂತ್ರರಾಗಿ ಅವರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದರು. ಮಾಯಾವತಿ ಯವರ ಬಹುಜನ ಸಮಾಜ ಪಕ್ಷದಲ್ಲೂ ಅವರು ನಂಟು ಹೊಂದಿದ್ದರು ಎಂದು ತಿಳಿದು ಬಂದಿದೆ. ಈ ಹಿಂದೆ ಪ್ರಧಾನಿ ಮೋದಿಯ ಕುರಿತು ಟೀಕಿಸಿದ್ದಕ್ಕೆ ಬಿಜೆಪಿ ಅವರಿಗೆ ಎಚ್ಚರಿಕೆ ನೀಡಿತ್ತು.

Donate Janashakthi Media

Leave a Reply

Your email address will not be published. Required fields are marked *