ಪಾಲಕ್ಕಾಡ್: ಬಿಜೆಪಿ-ಆರೆಸ್ಸೆಸ್ ಸದಸ್ಯನೋರ್ವನನ್ನು ಇಲ್ಲಿಯ ಪುದುಶ್ಶೇರಿಯಲ್ಲಿ ಮಕ್ಕಳನ್ನು ಒಳಗೊಂಡಿದ್ದ ಕ್ರಿಸ್‌ಮಸ್ ಕ್ಯಾರೊಲ್ ಗುಂಪಿನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಪೋಲಿಸರು ಬಂಧಿಸಿದ್ದಾರೆ. ಪುದುಶ್ಶೇರಿಯ ಕಲ್ಲಾಡಿಥರ ನಿವಾಸಿ, ಬಿಜೆಪಿ-ಆರೆಸ್ಸೆಸ್‌ನ ಸಕ್ರಿಯ ಸದಸ್ಯ ಅಶ್ವಿನ ರಾಜ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಪುದುಶ್ಶೇರಿಯ ಸುರಭಿ ನಗರದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಇತರ ಇಬ್ಬರೊಂದಿಗೆ ಸೇರಿಕೊಂಡು ಸುಮಾರು 10 ಜನರಿದ್ದ ಕ್ಯಾರೊಲ್ ಗುಂಪಿನ ಮೇಲೆ ದಾಳಿ ನಡೆಸಿದ್ದ ರಾಜ್, ಪ್ರದೇಶದಲ್ಲಿ ಇಂತಹುದಕ್ಕೆ ಅವಕಾಶವಿಲ್ಲ ಎಂದು ಅಬ್ಬರಿಸಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಇನಾಂವೀರಾಪುರ ಮಾನ್ಯ ಹತ್ಯೆ ಪ್ರಕರಣದಲ್ಲಿ ಗಾಯಗೊಂಡಿದ್ದ ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ₹5 ಲಕ್ಷ ಚೆಕ್ ವಿತರಿಸಿದ ಡಿಸಿ
ಗುಂಪು ಬಳಸಿದ್ದ ಡ್ರಮ್‌ನ ಮೇಲಿದ್ದ ‘ಸಿಪಿಐ(ಎಂ)’ ಪದದ ಕುರಿತು ವಾಗ್ವಾದದ ಬಳಿಕ ದಾಳಿ ನಡೆದಿದ್ದು, ಬ್ಯಾಂಡ್ ಸೆಟ್ ಮತ್ತು ಇತರ ಸಂಗೀತ ಉಪಕರಣಗಳಿಗೆ ಹಾನಿಯುಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಕ್ಯಾರೊಲ್ ಗುಂಪು ಪೋಲಿಸ್ ದೂರನ್ನು ದಾಖಲಿಸಿತ್ತು.
ಕ್ಯಾರೊಲ್ ಗುಂಪಿನಲ್ಲಿ 10ರಿಂದ 15 ವರ್ಷ ಪ್ರಾಯದ ಮಕ್ಕಳಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ಮನವಿಯ ಮೇರೆಗೆ ಬ್ಯಾಂಡ್ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಸ್ಥಳೀಯ ಸಿಪಿಎಂ ಸಮಿತಿಯ ನಾಯಕರು ಹೇಳಿದರು.
ಇದನ್ನೂ ನೋಡಿ: ಕಮ್ಯುನಿಸ್ಟ್ ಪಕ್ಷಗಳು ದುಡಿಯುವ ಜನ, ಭೂ ರಹಿತರ ಪರ ಧ್ವನಿಯಾದವರು Janashakthi Media
