ರಾಂಚಿ: ಮೂವರು ಮಾಜಿ ಶಾಸಕರೂ ಸೇರಿದಂತೆ ಹಲವು ಬಿಜೆಪಿ ನಾಯಕರು ಜಾರ್ಖಂಡ್ ಚುನಾವಣೆಗೆ ವಾರಗಳು ಇರುವಂತೆಯೇ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಲೂಯಿಸ್ ಮರಾಂಡಿ, ಕುನಾಲ್ ಸಾರಂಗಿ ಹಾಗೂ ಲಕ್ಷ್ಮಣ್ ಟುಡು ಜೆಎಂಎಂ ಸೇರ್ಪಡೆಯಾಗಿದ್ದಾರೆ.
ಇದನ್ನು ಓದಿ : ವಯನಾಡು ಲೋಕಸಭೆ ಉಪ ಚುನಾವಣೆ: ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿರುವ ಪ್ರಿಯಾಂಕ ಗಾಂಧಿ
“ನಾವು ಸೋಮವಾರ ಜೆಎಂಎಂಗೆ ಸೇರಿದ್ದೇವೆ’ ಎಂದು ಕುನಾಲ್ ಸಾರಂಗಿ ಹೇಳಿದ್ದಾರೆ.
ಬೆಳವಣಿಗೆ ಬಗ್ಗೆ ಲೇವಡಿ ಮಾಡಿರುವ ಬಿಜೆಪಿ ಚುನಾವಣಾ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ “ಆ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಬೇಕಿದ್ದರೆ ನಮ್ಮ ಪಕ್ಷ ನ್ನೂ 8-10 ಅಭ್ಯರ್ಥಿಗಳನ್ನು ಜೆಎಂಎಂಗೆ ಕಳುಹಿಸಿಕೊಡುತ್ತದೆ’ ಎಂದರು.
ಇದನ್ನು ನೋಡಿ : ಪಿಎಂಎಲ್ಎ ಮತ್ತು ಯುಎಪಿಎ – ಎರಡು ಕರಾಳು ಶಾಸನಗಳ ಆಳ ಅಗಲ Janashakthi Media