ಬೆಳಗಾವಿ: ಬೆಳಗಾವಿಯಲ್ಲಿ ಕನ್ವಿಕಾ ಎಂಬ ಮಹಿಳೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈಕೆ ಹಿಂದೆ ಪತಿ ವಿರುದ್ಧ ಕೆಲವು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಈಗ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ತನಗೆ ಬ್ಲಾಕ್ ಮೇಲ್ ಮಾಡಿ ಈ ರೀತಿ ಹೇಳಿಕೆ ಕೊಡಿಸಿದ್ದ ಎಂದು ಅವಲತ್ತುಕೊಂಡಿದ್ದಾಳೆ.
ಮೊದಲಿನಿಂದಲೂ ನಾನು ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಫೌಂಡೇಶನ್ ನಲ್ಲಿ ಕೆಲಸ ಮಾಡುತ್ತಿದ್ದೆ. ಕೆಲವು ನಕಲಿ ಪ್ರಭಾವಿ ವ್ಯಕ್ತಿಗಳನ್ನು ಬಳಸಿಕೊಂಡು ನನಗೆ ಹಿಂಸೆ ಕೊಟ್ಟಿದ್ದ. ಬಳಿಕ ನನ್ನನ್ನು ಅವನ ಮನೆಯಲ್ಲಿ ನನ್ನನ್ನು ಟ್ರಾಪ್ ಮಾಡಿ , ಹೇಳಿದ ಹಾಗೆ ನಾನು ಕೇಳದೆ ಇದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದಿದ್ದಾರೆ.
ಇದನ್ನು ಓದಿ : ಕಾವೇರಿ ಜಲವಿವಾದ ಬಗೆಹರಿಯಲಿದೆ: ಎಚ್.ಡಿ.ದೇವೇಗೌಡ ವಿಶ್ವಾಸ
ನನ್ನ ಗಂಡನ ಮನೆಯವರು ಬಿಜೆಪಿ ಮುಖಂಡನಿಗೆ ಬುದ್ದಿವಾದ ಹೇಳಿದರೂ ನನ್ನನ್ನು ಬಿಡುತ್ತಿರಲಿಲ್ಲ. ಆತ ನನ್ನ ಸಂಸಾರ ಹಾಳು ಮಾಡಿ ನನ್ನ ಗಂಡನ ಮೇಲೆ ಸುಳ್ಳು ಪ್ರಕರಣ ದಾಖಲಿಸುವಂತೆ ಮಾಡಿದ ಎಂದು ಕನ್ವಿಕಾ ಹೇಳಿಕೊಂಡಿದ್ದಾರೆ.
ಆತ ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದ. ನನ್ನ ಗೆಳೆಯನೊಂದಿಗೆ ನನಗೆ ಮದುವೆ ಮಾಡಿಸಿ ಹಳೆಯ ಪೋಟೊ ಗಂಡನ ತಂದೆ ತಾಯಿಗೆ ತೋರಿಸಿ ನನ್ನ ದುರುಪಯೋಗಪಡಿಸಿಕೊಂಡಿದ್ದಾನೆ. ರಕ್ಷಾ ಬಂಧನದ ದಿನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಮ್ಮ ಮನೆಯವರ ಮೇಲೆ ದೂರು ಕೊಡಿಸಿ ಆತನೇ ಸಂಧಾನ ಮಾಡಿ ಹಣ ಮಾಡುವ ದುರುದ್ದೇಶ ಹೊಂದಿದ್ದ ಎಂದು ದೂರಿದ್ದಾರೆ.
ಇದನ್ನು ನೋಡಿ : “ಸಂಜೆ ಹೆಣ್ಣುಮಕ್ಕಳು ನೆಮ್ಮದಿಯಾಗಿ ಓಡಾಡಬೇಕಾದರೆ ಗಂಡಸು ಮನೆಯೊಳಗಿರಬೇಕು” ವಿಕಿಪೀಡಿಯಾ ಜಾಗೃತಿ