ಕೇರಳ: ಬಿಜೆಪಿ ಮುಖಂಡ ಬಿ.ಗೋಪಾಲಕೃಷ್ಣನ್ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯಸ್ಯೆ ಮತ್ತು ಎಲ್‍ಡಿಎಫ್ ಸರಕಾರದಲ್ಲಿ ಸಚಿವೆಯಾಗಿದ್ದ ಪಿ.ಕೆ.ಶ್ರೀಮತಿಯವರ ವಿರುದ್ಧ ತಾನು ಮಾಡಿರುವ ಮಾನಹಾನಿಕರ ಟಿಪ್ಪಣಿಯ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಈ ಕುರಿತ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತ ಕೇರಳ ಹೈಕೋರ್ಟಿನಲ್ಲಿ ಹಾಜರಾದ ನಂತರ ಅವರು ಮಾಧ್ಯಮಗಳ ಮುಂದೆ ಬಂದು, ಶ್ರೀಮತಿ ಟೀಚರ್ ವಿರುದ್ಧ ಮಾಡಿರುವ ಆಪಾದನೆಗಳಿಗೆ ಸಾಕ್ಷ್ಯ ಒದಗಿಸಲು ತನಗೆ ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಸಿಪಿಐ(ಎಂ)
ಒಂದು ಟಿವಿ ಚರ್ಚೆಯ ಸಂದರ್ಭದಲ್ಲಿ ಗೋಪಾಲಕೃಷ್ಣನ್, ಆರೋಗ್ಯ ಇಲಾಖೆಯಲ್ಲಿ ಶ್ರೀಮತಿ ಟೀಚರ್ ಸಚಿವೆಯಾಗಿದ್ದಾಗ ತನ್ನ ಮಗನ ಕಂಪನಿಯಿಂದ ಔಷಧಿಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು.
ಶ್ರೀಮತಿ ಟೀಚರ್ ತಮ್ಮ ಮಗನಿಗೆ ಯಾವುದೇ ಔಷಧ ಕಂಪನಿ ಅಥವಾ ವ್ಯವಹಾರದಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಗೋಪಾಲಕೃಷ್ಣನ್, ತರುವಾಯ ಇದು ಆಧಾರರಹಿತ ಆರೋಪ ಮತ್ತು ತಮ್ಮ ಹೇಳಿಕೆಗಳನ್ನು ದೃಢೀಕರಿಸಲು ತಮ್ಮ ಬಳಿ ಯಾವುದೇ ಪುರಾವೆಗಳು ಅಥವಾ ದಾಖಲೆಗಳು ಇಲ್ಲ ಎಂದು ಒಪ್ಪಿಕೊಳ್ಳಲೇ ಬೇಕಾಯಿತು.
ಇದನ್ನೂ ಓದಿ: ಬಡವರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಆಸ್ಪತ್ರೆ ಏಮ್ಸ್ ವಶಕ್ಕೆ: ಸುಪ್ರೀಂ ಕೋರ್ಟ್
ಈ ಮಾನನಷ್ಟ ಪ್ರಕರಣ ಆರು ವರ್ಷಗಳಿಂದ ನಡೆಯುತ್ತಿದೆ ಎಂದು ನೆನಪಿಸಿರುವ ಶ್ರೀಮತಿ ಟೀಚರ್, ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರನ್ನು, ವಿಶೇಷವಾಗಿ ಎಡಪಂಥೀಯ ಚಳುವಳಿಗಳೊಂದಿಗೆ ಸಂಬಂಧ ಹೊಂದಿರುವವರನ್ನು ಸುಳ್ಳು ಕಥೆಗಳು ಮತ್ತು ಆಧಾರರಹಿತ ಆರೋಪಗಳ ಮೂಲಕ ನಿರಂತರವಾಗಿ ದುರುದ್ದೇಶಪೂರಿತ ದಾಳಿಗಳಿಗೆ ಗುರಿಪಡಿಸಲಾಗುತ್ತಿದೆ ಎಂದು ಹೇಳಿದರು.
ಈ ದಾಳಿಗಳು ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಕೊಡುಗೆಗಳನ್ನು ನೀಡದಂತೆ ತಡೆಯುವ ಉದ್ದೇಶಪೂರ್ವಕ ಪ್ರಯತ್ನಗಳ ಒಂದು ಭಾಗವಾಗಿದ್ದು, ಈ ರೀತಿಯ ದುರ್ನಡತೆಗಳನ್ನು ಸಹಿಸಬಾರದು ಎಂದು ಶ್ರೀಮತಿ ಟೀಚರ್ ಹೇಳಿದ್ದಾರೆ.
ಇದನ್ನೂ ನೋಡಿ: ಒಳಮೀಸಲಾತಿ: ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ ನ್ಯಾ. ನಾಗಮೋಹನ್ ದಾಸ್ ಆಯೋಗ Janashakthi Media