ಬೆಂಗಳೂರು: ಬಿಜೆಪಿಗೆ ದಲಿತರು, ಓಬಿಸಿ ಸಂಸದರ ಅಗತ್ಯವಿಲ್ಲ ಎನ್ನುವ ಭಾವನೆ ಮೊದಲಿನಿಂದಲೂ ಇರುವುದರಿಂದ, ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಈ ಸಮುದಾಯದ ಸಂಸದರಿಗೆ ಸಚಿವ ಸ್ಥಾನವನ್ನು ಕೊಟ್ಟಿಲ್ಲ. ಬಿಜೆಪಿಗೆ ದಲಿತರು ಬೇಡ. ಹಾಗಾಗಿ ಈ ಎರಡೂ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚ್ಯವಾಗಿ ಹೇಳಿದ್ದಾರೆ. ಓಬಿಸಿ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐವರು ಕೇಂದ್ರ ಸಚಿವರ ಮೇಲೆ ನಾವು ವಿಶ್ವಾಸ ಇಟ್ಕೊಂಡಿದ್ದೇವೆ. ರಾಜ್ಯದ ಸಮಸ್ಯೆಗಳನ್ನು ಕೇಂದ್ರದ ಮಟ್ಟದಲ್ಲಿ ಪರಿಹರಿಸ್ತಾರೆ ಅಂತ ವಿಶ್ವಾಸ ಇದೆ. ಇದರಲ್ಲಿ ಅವರು ವಿಫಲರಾದರೆ ಅವರಿಗೂ ಅವರ ಪಕ್ಷಕ್ಕೂ ನಷ್ಟ. ನಾವು ಕಾದು ನೋಡ್ತೇವೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಇಂದು ಮತ್ತೆ ನ್ಯಾಯಾಲಯದ ಮುಂದೆ
ನಮ್ಮ ರಾಜ್ಯದ ಸಮಸ್ಯೆಗಳು ಕೇಂದ್ರದಲ್ಲಿ ಬಗೆಹರಿಸದಿದ್ದರೆ ಸಹಜವಾಗಿ ಅವರಿಗೆ ದೂಷಣೆ ಮಾಡಬೇಕಾಗುತ್ತದೆ. ಇದಕ್ಕೆ ಅವರು ಅವಕಾಶ ಕೊಡುವುದರಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಜಿಎಸ್ಟಿ ಬಾಕಿ ಬರಬೇಕಿದೆ. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ. ಹಲವು ನೀರಾವರಿ ಯೋಜನೆಗಳ ಅನುಮತಿ ಬೇಕಿದೆ. ಅನೇಕ ಸವಾಲುಗಳು ಐದೂ ಜನರ ಮುಂದಿವೆ. ಇದನ್ನೆಲ್ಲ ಆದ್ಯತೆ ಮೇಲೆ ಬಗೆಹರಿಸುವ ಜವಾಬ್ದಾರಿ ಈ ನೂತನ ಸಚಿವರ ಮೇಲಿದೆ. ಅಲ್ಲದೆ ಹೆಚ್.ಡಿ. ಕುಮಾರಸ್ವಾಮಿ ಎರಡು ಸಲ ಸಿಎಂ ಆಗಿದ್ದವರು. ಈಗ ಕೇಂದ್ರದಲ್ಲಿ ಸಚಿವರಾಗಿ ಆಯ್ಕೆ ಆಗಿದ್ದಾರೆ. ಸ್ವಾಭಾವಿಕವಾಗಿ ಅವರಿಗೆ ಕೇಂದ್ರದ ಸಹಕಾರ ಇದ್ದೇ ಇರುತ್ತ. ಇದನ್ನ ಉಪಯೋಗ ಮಾಡಿಕೊಂಡು ಕುಮಾರಸ್ವಾಮಿ ರಾಜ್ಯದ ಹಿತಾಸಕ್ತಿ ಕಾಪಾಡಲಿ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ನೋಡಿ: ಲೋಕಸಭೆ ಚುನಾವಣೆ 2024: ಹಲವು ಕ್ಷೇತ್ರಗಳಲ್ಲಿ NOTA ಮತದಾನ ಪ್ರಮಾಣ ಹೆಚ್ಚು!Janashakthi Media