ತಮಿಳುನಾಡು : ತಮಿಳುನಾಡು ಚುನಾವಣೆಗೆ ಇನ್ನೇನು ಒಂದೇ ತಿಂಗಳು ಬಾಕಿ ಇದ್ದು, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡಿನ ವಿವಿಧ ಜಿಲ್ಲೆಗಳಿಗೆ ತೆರಳಿ ಸಿಪಿಐಎಂ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಸೇಲಂ ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸೀತರಾಮ್ ಯೆಚೂರಿಯವರು “ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆಯನ್ನು ಚುನಾವಣೆ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಮೋದಿಯವರು ಲಸಿಕೆಯನ್ನು ಪಡೆಯುತ್ತಿದ್ದಾಗ, ಆ ಲಸಿಕೆಯನ್ನು ನೀಡುತ್ತಿದ್ದ ನರ್ಸ್ ಗಳಲ್ಲಿ ಒಬ್ಬರು ತಮಿಳುನಾಡಿನವರಾಗಿದರೆ, ಮತ್ತೊಬ್ಬರು ಪುದುಚೇರಿಯವರು ಮತ್ತು ಮೋದಿಯವರು ಹಾಕಿಕೊಂಡಿರುವ ಶಾಲ್ ಕೂಡ ಅಸ್ಸಾಂದಾಗಿದೆ. ಇದರ ಹಿಂದಿನಿ ಉದ್ದೇಶ ಈ ಮೂರು ರಾಜ್ಯಗಳ ಈಗ ಚುನಾವಣೆಗೆ ನಡೆಯುತ್ತಿದ್ದು, ಆ ಪ್ರದೇಶದ ಜನರನ್ನು ಸೆಳೆಯಲು ಮಾಡಿರುವ ಹುನ್ನಾರ” ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಯಾವುದೇ ಭರವಸೆಗಳನ್ನು ಕೊಟ್ಟರೂ ಅವುಗಳನ್ನು ಈಡೇರಿಸುವುದಿಲ್ಲ. ಎಲ್ಲಾ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡುತ್ತಿದೆ. ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ನೀಡಿರುವ ನೆರವಿನ ಭರವಸೆಯಲ್ಲಿ ಶೇ. 50ರಷ್ಟು ಬಿಜೆಪಿ ಎ.ಐ.ಎ.ಡಿ.ಎಂ.ಕೆ,ಗೆ ನೀಡುವುದಿಲ್ಲ. ಈ ಮೈತ್ರಿ ತುಂಬಾ ದಿನಗಳು ಇರುವುದಿಲ್ಲ ಎಂದರು.
ಕೋವಿಡ್ ಕಾರಣದಿಂದಾಗಿ 80 ವರ್ಷ ಮೇಲ್ಪಟ್ಟ ವಯಸ್ಕರಿಗೆ ಬ್ಯಾಲೆಟ್ ಪೇಪರ್ ಮೂಲಕ ಮತ ಹಾಕುವ ಅವಕಾಶ ಕಲ್ಪಿಸಬೇಕು, ವ್ಯಕ್ತಿಯನ್ನು ದೈಹಿಕವಾಗಿ ಪರೀಕ್ಷಿಸಿ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಮಾಡಬೇಕು. ಇದರಲ್ಲಿ ಯಾವುದೇ ಅವ್ಯವಹಾರ ಮಾಡದೆ ಕಾನೂನಿನ ಪ್ರಕಾರ ಈ ಅವಕಾಶವನ್ನು ಚುನಾವಣಾ ಆಯೋಗ ನೇರವೇರಿಸಬೇಕು.
ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದರೆ, ಅಸ್ಸಾಂನಲ್ಲಿ 3 ಹಂತದ ಮತದಾನ ಇದೆ, ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಮತದಾನ ಯಾಕೆ ಎಂದು ಚುನಾವಣೆ ಆಯೋಗಕ್ಕೆ ಪ್ರಶ್ನೆ ಮಾಡಿದರು. ಇದು ಬಿಜೆಪಿ ಪಕ್ಷಕ್ಕೆ ಅನುಕೂಲವಾಗಲಿ ಎಂದು ಚುನಾವಣೆ ಆಯೋಗ ಮಾಡಿದ ತಂತ್ರವಾಗಿದೆ ಎಂದು ಸೀತರಾಮ್ ಯಚೂರಿ ಟೀಕಿಸಿದರು.