ಬಿಜೆಪಿ-ಕಾಂಗ್ರೆಸ್‌ ನಡುವೆ ಮೈತ್ರಿ ಇದೆ : ಪಿಣರಾಯಿ ವಿಜಯನ್‌

ಕೊಚ್ಚಿ : ಸುಳ್ಳು ಪತ್ತೆ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದೆ ಹತಾಶೆಯಾಗಿರುವ ಕಾಂಗ್ರೆಸ್‌ ಸಿಪಿಐ(ಎಂ)-ಬಿಜೆಪಿ ನಡುವೆ ಮೈತ್ರಿ ಇದೆ ಎಂದು ಹೇಳುತ್ತಿದೆ. ಆದರೆ, ಕೇರಳದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ(ಬಿಜೆಪಿ) ನಡುವೆ ಮೈತ್ರಿ ಇದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರೋಪಿಸಿದರು.

ಕೊಚ್ಚಿಯಲ್ಲಿ ಭಾಗವಹಿಸಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಪೊಲಿಟ್‌ ಬ್ಯೂರೋ ಸದಸ್ಯರು ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಭಾಷಣವನ್ನು ಮಾಡಿದರು.

ಇದನ್ನು ಓದಿ : ಕೇಂದ್ರ ಸರಕಾರದಿಂದ ಅತಿಕ್ರಮಣ ಎಂದ ಸಚಿವ ಮಾಧುಸ್ವಾಮಿ, ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ಈ ಮೈತ್ರಿ ಹಿಂದಿನಿಂದಲೂ ಇದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಮುಂದುವರೆದಿದೆ. ಪ್ರತಿಪಕ್ಷಗಳು ನಿರಂತರ ಆರೋಪಗಳ ಮೂಲಕ ಸರಕಾರದ ಕಾರ್ಯಚಟುವಟಿಕೆಯನ್ನು ತಡೆಯಲು ಪ್ರಯತ್ನಿಸುತ್ತಿವೆ ಎಂದರು.

ಪ್ರತಿಪಕ್ಷಗಳ ಎಲ್ಲಾ ಆರೋಪಗಳೂ ಶೋಚನೀಯವಾಗಿ ಕುಸಿದಿರುವುದರಿಂದ ಹತಾಶರಾಗಿದ್ದಾರೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಮೊಟ್ಟಮೊದಲಿಗೆ ಕಾಂಗ್ರೆಸ್ಸೇಯೇತರ ರಾಜ್ಯ ಸರಕಾರವಾಗಿ ಕೇರಳದಲ್ಲಿ ಅಧಿಕಾರ ನಡೆಸಿತ್ತು.

ಇದನ್ನು ಓದಿ : ಕೇರಳದ ಸಾಕ್ಷರರ ಮುಂದೆ ಬಿಜೆಪಿ ಆಟ ನಡೆಯಲಿಲ್ಲ – ಬಿಜೆಪಿ ಶಾಸಕ !

ಪ್ರತಿಪಕ್ಷಗಳು ಮತ್ತು ಕೇಂದ್ರದ ಏಜೆನ್ಸಿಗಳು ಇಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದೆ. ಜಾರಿ ನಿರ್ದೇಶನಾಲಯ ಸೇರಿದಂತೆ ಅನೇಕ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದೆ ಎಂದ ಅವರು, ಪ್ರತಿಪಕ್ಷಗಳ ವಿರುದ್ಧ ಅನೇಕ ಅನೇಕ ಆರೋಪಗಳಿವೆ. ಬಿಜೆಪಿ ಮತ್ತು ಪ್ರತಿಪಕ್ಷದ ನಾಯಕರೇ ಒಂದಾಗಿ ಆರೋಪಗಳನ್ನು ಮಾಡುತ್ತಿದ್ದಾರೆ.

ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿನ 140 ವಿಧಾನಸಭಾ ಕ್ಷೇತ್ರಗಳಿಗೆ ಮತದಾನವಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *