- ಮಂಡ್ಯದಲ್ಲಿ ದಾರಕಾರ ಮಳೆ
- ಕೊಚ್ಚಿ ಹೋದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ
- ಪ್ರಗತಿಯಲ್ಲಿದ್ದ ಹೆದ್ದಾರಿಯ ಕಾಮಗಾರಿ
ಮಂಡ್ಯ: ಮಂಡ್ಯದಲ್ಲಿ ಸುರಿದ ಬಾರಿ ಮಳೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿದೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಡ್ಡಲಾಗಿ ನಿರ್ಮಿಸಿದ್ದ ಮಂಡ್ಯದ ಇಂಡುವಾಳು ಬಳಿ ಸೇತುವೆ ಕೊಚ್ಚಿಹೋಗಿದೆ.
ಆದರೆ ದಿನವಿಡಿ ಸುರಿದ ಬಾರಿ ಮಳೆಯಿಂದಾಗಿ, ಮಂಡ್ಯದ ಇಂಡುವಾಳು ಬಳಿ ಹೆದ್ದಾರಿ ಕೊಚ್ಚಿ ಹೋಗಿದೆ. ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬಂದ ಕಾರಣ ಸೇತುವೆಯ ಪೈಪ್‍ಗಳು ಕೊಚ್ಚಿ ಬಂದಿವೆ. ಹೆದ್ದಾರಿಯ ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣ ನೀರಿನ ಕೊರೆತಕ್ಕೆ ಕೊಚ್ಚಿಹೋಗಿದೆ. ಈ ಪರಿಣಾಮ ಬೆಂಗಳೂರಿನಿಂದ ಮೈಸೂರಿನ ಕಡೆಗೆ ತೆರಳುವ ವಾಹನ ಸವಾರು ಟ್ರಾಫಿಕ್ ಜಾಮ್‍ನಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮಳೆ ಹೆಚ್ಚಾದರೆ, ಮತ್ತೆ ಬರುವ ನೀರಿನ ರಭಸಕ್ಕೆ ಹೆದ್ದಾರಿ ಇನ್ನಷ್ಟು ಕುಸಿಯುವ ಸಾಧ್ಯತೆ ಇರುವುದು ಕಂಡುಬಂದಿದೆ.
ಈ ಮಧ್ಯೆ ಮಂಡ್ಯದ ಬೀಡಿ ಕಾಲನಿ ಸಂಪೂರ್ಣ ಜಲಾವೃತಗೊಂಡಿದ್ದು, 1000 ಕ್ಕೂ ಹೆಚ್ಚು ಮನೆಗಳಿರುವ ಕಾಲೋನಿ ರಾತ್ರಿಯಿಡೀ ನೀರಿನಿಂದ ಜಲಾವೃತಗೊಂಡಿದೆ. ಊಟ, ನಿದ್ದೆ ಇಲ್ಲದೇ ಕಂಗಾಲದ ಮಕ್ಕಳು, ವೃದ್ಧರು ಸಂಕಷ್ಟದಲ್ಲಿದ್ದಾರೆ. ಸದ್ಯ ಜನಪ್ರತಿನಿಧಿಗಳ ನೆರವಿಗೆ ಇಲ್ಲಿನ ಜನರು ಕಾಯುತ್ತಿದ್ದಾರೆ.