ಬೆಂಗಳೂರು: ಮತ್ತೊಮ್ಮೆ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿ, ಮತ್ತೊಂದೆಡೆ ಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಮಗನ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಡಿಜೆಪಿ
ಈ ಸಂದರ್ಭದಲ್ಲಿ ಶ್ರೀಕಿ 5.5 ಕೋಟಿ ಮೌಲ್ಯದ 150 ಬಿಟ್ ಕಾಯಿನ್ ಗಳ ವ್ಯವಹಾರ ನಡೆಸಿದ್ದ. ಈ ವ್ಯವಹಾರವನ್ನು ಕೋಲ್ಕತ್ತಾದ ರಾಬಿನ್ ಖಂಡೇವಾಲ ಎಂಬಾತನ ಮೂಲಕ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಇದನ್ನು ಓದಿ : ಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ಶೇ. 62.84 ರಷ್ಟು ಮತದಾನ
ಡಿಜಿಪಿ ದರ್ಜೆಯ ಅಧಿಕಾರಿಯ ಮಗ ರಿಷಬ್ ಎಂಬಾತನ ವಿಚಾರಣೆಯನ್ನು ಎಸ್ ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ. 2016ರಿಂದ 2021ವರೆಗೆ ನಡೆದ ವ್ಯವಹಾರದ ಬಗ್ಗೆ ವಿಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನು ನೋಡಿ : ಮೋದಿ ಅದಾನಿ ದೋಸ್ತಿ ಖತಂ, ಕಾಂಗ್ರೆಸ್ ಹಾಡಿ ಹೊಗಳಿದ ಚಕ್ರವರ್ತಿ ಸೂಲಿಬೆಲೆ Janashakthi Media