ಬೆಂಗಳೂರು: ಭಾರೀ ಚರ್ಚೆಗೆ ಒಳಗಾಗಿರುವ ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿ, ಈ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್ನಲ್ಲಿ ಶ್ರೀಕೃಷ್ಣ ಬಂಧನವಾಗಿದೆ ಎಂದು ತಿಳಿದುಬಂದಿದೆ.
ಶ್ರೀಕೃಷ್ಣ ವಾಸ್ತವ್ಯ ಹೂಡಿದ್ದ ಕಳೆದ ಎರಡೂವರೆ ತಿಂಗಳಿಂದ ಶ್ರೀಕಿ ರಾಯಲ್ ಆರ್ಚಿಡ್ ಹೋಟೆಲ್ನಲ್ಲಿ ವ್ಯಕ್ತಿಯಿಂದ ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ವಿಷ್ಣು ಭಟ್ ಎಂಬಾತ ಆರೋಪಿ ಶ್ರೀಕೃಷ್ಣ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂದು ಹೇಳಲಾಗಿದ್ದು, ಈ ಬಗ್ಗೆ ಹೋಟೆಲ್ ಸಿಬ್ಬಂದಿ ಭೀಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಶ್ರೀಕೃಷ್ಣ, ಗಲಾಟೆ ಮಾಡಿದ್ದ ವಿಷ್ಣು ಭಟ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಜೀವನ್ ಭೀಮಾನಗರ ಠಾಣೆಯಲ್ಲಿ ಆರೋಪಿ ಶ್ರೀಕೃಷ್ಣ ವಿಚಾರಣೆ ನಡೆಸಲಾಗುತ್ತಿದೆ.
ಬಿಟ್ ಕಾಯಿನ್ ವಿಚಾರದಲ್ಲಿ ಬೇಕಾಗಿದ್ದ ಆರೋಪಿ ಶ್ರೀಕೃಷ್ಣ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಈತ ಎಲ್ಲಿದ್ದಾನೆ ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದೀಗ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ.
ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದ. ಹಣ ವಿನಿಮಯ ಏಜೆನ್ಸಿಗಳು ಮತ್ತು ಗೇಮಿಂಗ್ ಜಾಲತಾಣಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ದೋಚುತ್ತಿದ್ದ ಎಂಬ ಆರೋಪದ ಮೇಲೆ ಹ್ಯಾಕರ್ ಶ್ರೀಕೃಷ್ಣನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿದ್ದರು.
ಇದನ್ನು ಓದಿ: ದೀಪಾವಳಿ ಮುಗಿದ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
‘ನೆದರ್ಲೆಂಡ್ಸ್‌ನಲ್ಲಿ ಬಿ.ಎಸ್ಸಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಶ್ರೀಕೃಷ್ಣ, ಸ್ಥಳೀಯ ಸ್ನೇಹಿತರ ಜೊತೆ ಹೆಚ್ಚು ಓಡಾಡುತ್ತಿದ್ದ. ಆತನಿಗೆ ಸುನೀಶ್ ಹೆಗ್ಡೆ, ಹೇಮಂತ್ ಮದ್ದಪ್ಪ ಹಾಗೂ ಇತರರ ಪರಿಚಯವಾಗಿತ್ತು. ಅವರ ಜೊತೆ ಸೇರಿಕೊಂಡು ರಾಜ್ಯ ಸರ್ಕಾರದ ಇ–ಸಂಗ್ರಹಣಾ ಪೋರ್ಟಲ್ ಜಾಲತಾಣವನ್ನು ಹ್ಯಾಕ್ ಮಾಡಿದ್ದನು.
ಶ್ರೀಕೃಷ್ಣ ಅಲಿಯಾಸ್ ಶ್ರೀಕೃಷ್ಣ ದೋಚುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್‌ಗಳನ್ನು(ಬಿಟಿಸಿ), ‘ರಾಬಿನ್ ಆನ್‌ಲೈನ್ ಸರ್ವೀಸಸ್’ ಕಂಪನಿಯ ಸಂಸ್ಥಾಪಕ ರಾಬಿನ್ ಖಂಡೆಲ್‌ವಾಲಾ ಮಾರಿಕೊಡುತ್ತಿದ್ದ ಅಂಶ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ.
ಶ್ರೀಕೃಷ್ಣ ಕೇಂದ್ರ ಸರ್ಕಾರದ ಜನ್ ಧನ್ ಖಾತೆ ಸೇರಿದಂತೆ ಕೇಂದ್ರ ಸರ್ಕಾರದ ಇ-ಪೇಮೆಂಟ್ ಜಾಲತಾಣಗಳನ್ನು ಕೂಡ ಹ್ಯಾಕ್ ಮಾಡಿ ಭಾರೀ ಮೊತ್ತದ ಹಣವನ್ನು ದೋಚಿದ್ದಾನೆ. ರಾಜ್ಯ ಸರ್ಕಾರದ ಜಾಲತಾಣವನ್ನೇ ಹ್ಯಾಕ್ ಮಾಡಿ ₹ 46 ಕೋಟಿ ದೋಚಿದ್ದನೆಂಬ ಎಂಬ ಅಂಶ ಕೂಡ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ನಮೂದಾಗಿದೆ.
ಶ್ರೀಕೃಷ್ಣನ ಬಂಧನದ ನಂತರ ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಶ್ರೀಕೃಷ್ಣ ನಡೆಸಿದ ಹತ್ತಾರು ಸಾವಿರ ಕೋಟಿ ಬಿಟ್ ಕಾಯಿನ್ ಹ್ಯಾಕಿಂಗ್ ದಂಧೆಯ ಪೈಕಿ, ಆ ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಒಂದೇ ಒಂದು ರೂಪಾಯಿ ಮೊತ್ತದಷ್ಟನ್ನೂ ವಶಪಡಿಸಿಕೊಳ್ಳಲು ಆಗಿಲ್ಲ ಎಂಬುದನ್ನು ಸ್ವತಃ ಸಿಸಿಬಿಯ ಮೂಲಗಳೇ ಒಪ್ಪಿಕೊಂಡಿವೆ.
ಇದನ್ನು ಓದಿ: ತೀವ್ರ ಹಸಿವಿನ ನಡುವೆಯೂ ತುಳುಕುವ ಎಫ್‌ಸಿಐ ಗೋದಾಮುಗಳು ಮತ್ತು ಎಥೆನಾಲ್ ಉತ್ಪಾದನೆಗೆ ಉತ್ತೇಜನೆ
ಈ ನಡುವೆ ಪೊಲೀಸರು ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಹಿಂದೆ ಹೇಳಿಕೆಯನ್ನು ನೀಡಿದ್ದರು.
ಕೆಲವೇ ದಿನಗಳ ಹಿಂದೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ‘ಬಿಟ್ ಕಾಯಿನ್ ಪ್ರಕರಣದಲ್ಲಿ ರಾಜಕೀಯ ನಾಯಕರೂ ಶಾಮೀಲಾಗಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದವರು ಭಾಗಿಯಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಿರಂಗಪಡಿಸಲಿ. ಸತ್ಯ ಜನರಿಗೆ ಗೊತ್ತಾಗಲಿ’ ಎಂದು ಆಗ್ರಹಿಸಿದರು.
‘ನಾನು ತನಿಖಾ ಸಂಸ್ಥೆಗೆ ಸಾಕ್ಷಿ ಕೊಡುವುದಾದರೆ ತನಿಖೆ ಏಕೆ ಬೇಕು? ಕಾನೂನುಬಾಹಿರ ಕೃತ್ಯ ನಡೆಯದೇ ಇದ್ದರೆ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿಯವರು ಜಾರಿ ನಿರ್ದೇಶನಾಲಯಕ್ಕೆ ವಹಿಸಿದ್ದು ಏಕೆ? ತನಿಖೆ ನಡೆಯುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.