ಬಿಹಾರದ ಮತದಾರರಿಗೆ ಪುಕ್ಕಟೆ ಕೊರೊನ ಚುಚ್ಚುಮದ್ದು!

ಹೌದು, ಇದು ಇನ್ನೊಂದು ಮೋದಿ-ಷಾ ಮಾಸ್ಟರ್‍ ಸ್ಟ್ರೋಕಂತೆ! ಬಿಜೆಪಿ ತನ್ನ ಬಿಹಾರ ವಿಧಾನಸಭಾ ‘ಸಂಕಲ್ಪ ಪತ್ರ’ದಲ್ಲಿ ಮತದಾರರಿಗೆ ಪುಕ್ಕಟೆಯಾಗಿ ಕೊವಿಡ್ ಚುಚ್ಚು ಮದ್ದನ್ನು ಕೊಡುವ ಆಶ್ವಾಸನೆ ನೀಡಿದೆ.

ಆದರೆ ಇದಕ್ಕೆಷ್ಟು ಸಮಯ ಕಾಯಬೇಕು?

“ಇನ್ನೆಷ್ಟು ದೂರ ಮ್ಯಾಡಮ್ ಜಿ”

“ಮತದಾನದ ವರೆಗಷ್ಟೇ”

ಕೃಪೆ : ರೆಮಿಕ್ಸ್ ಕಾಮಿಕ್ಸ್

***

ಬಿಹಾರದ ಜನಸಾಮಾನ್ಯರಿಗೆ ಪ್ರಯೋಜನ ಯಾವಾಗ ಸಿಗುತ್ತೋ,

ಬಿಜೆಪಿಗಂತೂ ಇದು ಚುನಾವಣಾ ಪ್ರಚಾರದಲ್ಲಿ ತಕ್ಷಣವೇ ಶಕ್ತಿ ತುಂಬುವ  ಚುಚ್ಚು ಮದ್ದು ಎಂಬ ಭರವಸೆ?

ಕೃಪೆ: ಸುಭಾನಿ, ಡೆಕ್ಕನ್‍ ಕ್ರಾನಿಕಲ್

***

ಪ್ರಾಥಮಿಕ ಆರೋಗ್ಯ ವ್ಯವಸ್ಥೆಯೇ ಮುರಿದು ಬಿದ್ದಿರುವಾಗ…!

“ಇದು ಬಿಹಾರವನ್ನು ನಕಾಶೆಗೆ ತರಲಿದೆ!”

ಕೃಪೆ: ಸಜಿತ್‍ ಕುಮಾರ್‍, ಡೆಕ್ಕನ್‍ ಹೆರಾಲ್ಡ್

***

ಈ ಚುಚ್ಚುಮದ್ದಿನಿಂದ ಕೆಲಸ ಆಗದಿದ್ದರೆ ಏನು ಮಾಡುವುದು ಎಂಬ ಭಯ  ಈ ವ್ಯಂಗ್ಯಚಿತ್ರಕಾರರಿಗೆ ಬಿಜೆಪಿ ಮಂದಿಯ ಮುಖದಲ್ಲಿ  ಕಾಣುತ್ತಿದೆ. ಆಗ “ಲಾಕ್‍ ಡೌನ್‍ ಅವಧಿಯಲ್ಲಿ ವಸೂಲಿ ಮಾಡಿದ ಶ್ರಮಿಕ ರೈಲು ಟಿಕೆಟನ್ನು ಬಡ್ಡಿ ಸಹಿತ ರಿಫಂಡ್‍ ಮಾಡುವ ವಚನದಿಂದಂತೂ ತಪ್ಪಿಸಿಕೊಳ್ಳಬೇಕು”!

ಕೃಪೆ: ಶೇಖರ್‍ ಗುರೇರ, ಕಾರ್ಟೂನಿಸ್ಟ್ ಕ್ಲಬ್‍ ಆಫ್‍ ಇಂಡಿಯ

***

ಇದು ಚುನಾವಣಾ ಮಾದರಿ ನೀತಿ ಸಂಹಿತೆಯ, ಚುನಾವಣಾ ಆಯೋಗದ ಮಾರ್ಗದರ್ಶನ ಸೂತ್ರಗಳ ಉಲ್ಲಂಘನೆಯಲ್ಲವೇ ಎಂದು ದೇಶಾದ್ಯಂತ ಹಲವರು ಹುಬ್ಬೇರಿಸಿದ್ದಾರೆ.

ಇಲ್ಲ, ಇದು ಒಂದು ಸಾರ್ವಜನಿಕ ಧೋರಣೆಯ ಪ್ರಕಟಣೆ, ಯಾವುದೇ ರಾಜಕೀಯ ಪಕ್ಷ ಇಂತಹ ಪ್ರಕಟಣೆ ನೀಡಬಹುದು, ಎಂದು ಆಯೋಗದ ಮೂಲಗಳು ಅಭಿಪ್ರಾಯ ಪಟ್ಟಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ. ‘ಆರೋಗ್ಯ  ಒಂದು ರಾಜ್ಯಪಟ್ಟಿಯಲ್ಲಿರುವ ವಿಷಯ’ ಎಂದು ಕೇಂದ್ರ ಹಣಕಾಸು ಮಂತ್ರಿಗಳು ಬಿಹಾರದ ಜನತೆಗೆ ಬಿಜೆಪಿಯ ಚುನಾವಣಾ ಆಶ್ವಾಸನೆಯನ್ನು ಸಮರ್ಥಿಸಿಕೊಳ್ಳುತ್ತ ಸೇರಿಸಿದ್ದಾರೆ.

ಅದರಿಂದ ಏಳುವ ಪ್ರಶ್ನೆ: ಬಿಹಾರದ ಜನತೆಗಾಯ್ತು, ಭಾರತದ ಉಳಿದವರಿಗೆ… ?

“ನಿನಗೇನು ಬೇಕಪ್ಪಾ?”    “ಚುನಾವಣೆ!”

ಕೃಪೆ: ಅಲೋಕ್‍ ನಿರಂತರ್/ ಫೇಸ್‍ಬುಕ್

ಬಿಜೆಪಿ ಮತದಾರರ ಬುದ್ಧಿಮತ್ತೆಯನ್ನು ಗೇಲಿ ಮಾಡುತ್ತಿದೆಯೇ? ಇದು ಈ ವ್ಯಂಗ್ಯಚಿತ್ರಕಾರರಲ್ಲಿ ಎದ್ದಿರುವ ಸಂದೇಹ.

1977ರಲ್ಲಿ ಜನತೆ ಪುಕ್ಕಟೆ ಚುಚ್ಚುಮದ್ದು ಇಲ್ಲದೆಯೇ ಒಂದು ಇನ್ನಷ್ಟು ಮಾರಣಾಂತಿಕ ವೈರಸ್ಸನ್ನು ಮತದಾನದ ಮೂಲಕ ಓಡಿಸಿದ್ದಾರೆ ತಾನೇ?

ಕೃಪೆ: ಆರ್‍.ಪ್ರಸಾದ್, ಇಕನಾಮಿಕ್‍ ಟೈಮ್ಸ್

ಇದು ಧೋರಣೆಯ ಪ್ರಕಟಣೆಯೋ, ಚುನಾವಣಾ ಆಮಿಷವೋ- ಅಕ್ಟೋಬರ್‍ 28ರಿಂದ ಬಿಹಾರದ ಮತದಾರರು ನಿರ್ಧರಿಸಲಿದ್ದಾರೆ.

ಈ ನಡುವೆ ಅಕ್ಟೋಬರ್‍ 28ರಿಂದ ಬಿಹಾರದ ಮತಗಟ್ಟೆಗಳಲ್ಲಿನ ದೃಶ್ಯ ಹೇಗಿರಬಹುದು?

“ಇಲ್ಲ!  ಇಲ್ಲ! ಇಂಕ್‍ ಮಾರ್ಕ್‍ ಬೆರಳ ಮೇಲೆ  ಮಾತ್ರ!”

ಕೃಪೆ: ಸತೀಶ ಆಚಾರ್ಯ / ಫೇಸ್‍ಬುಕ್

ಅಲ್ಲಿಗೆ ಇಂಕ್‍ ಮಾರ್ಕ್ ಅಲ್ಲ ಸ್ವಾಮಿ, ಚುಚ್ಚು ಮದ್ದು!

ಇದನ್ನು ಓದಲು ಲಿಂಕ್ ಒತ್ತಿ :ಎರಡು ‘ಸಾಧನೆಗಳು! ಬಿಲಿಯಾಧಿಪತಿಗಳು vs ಹಸಿವಿನ ಸೂಚ್ಯಂಕ

ಎರಡು ‘ಸಾಧನೆಗಳು! ಬಿಲಿಯಾಧಿಪತಿಗಳು vs ಹಸಿವಿನ ಸೂಚ್ಯಂಕ

 

 

 

 

 

Donate Janashakthi Media

Leave a Reply

Your email address will not be published. Required fields are marked *