ಪಾಟ್ನಾ: ಬಿಹಾರ ರಾಜ್ಯದ ಸರಣ್ ಜಿಲ್ಲೆಯ ಛಾಪ್ರಾದಲ್ಲಿ ಕಳ್ಳಭಟ್ಟಿ ದುರಂತದಿಂದ 73 ಜನರ ಸಾವಿಗೆ ಕಾರಣವಾದ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಲಾಗಿದೆ. ಆರೋಪಿಯನ್ನು ಸರಣ್ ಜಿಲ್ಲೆಯ ದೋಯಿಲಾ ಗ್ರಾಮದ ನಿವಾಸಿ ರಾಮ್ ಬಾಬು ಮಹತೋ ಎಂದು ಗುರುತಿಸಲಾಗಿದೆ.
ಬಿಹಾರದಲ್ಲಿ ಮದ್ಯ ನಿಷೇಧವಿರುವ ಕಾರಣ ಆರೋಪಿಗಳು ಹೆಚ್ಚಿನ ಹಣ ಸಂಪಾದನೆಗೆ ಸಂಚು ರೂಪಿಸಿ, ಹಣದ ಆಸೆಗಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ರಾಮ್ ಬಾಬು ಮಹತೋ ಭಾಗಿಯಾಗಿದ್ದನು.
ಇದನ್ನು ಓದಿ: ಕಳ್ಳಾಭಟ್ಟಿ ದುರಂತ: ಬಿಹಾರದಲ್ಲಿ 70ಕ್ಕೇರಿದ ಸಾವಿನ ಸಂಖ್ಯೆ-ಆರೋಪಿಯೊಬ್ಬನ ಬಂಧನ
ಆರೋಪಿಯು ದೆಹಲಿಯಲ್ಲಿ ಅಡಗಿರುವ ಶಂಕೆಯ ಮೇರೆಗೆ ಅಪರಾಧ ವಿಭಾಗ ಅಂತರ್ ರಾಜ್ಯ ತಂಡದ ವಿಭಾಗ ಮಾಹಿತಿ ನೀಡಿದ ರವಾನಿಸಿದ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ಕಮಿಷನರ್ ರವೀಂದ್ರ ಸಿಂಗ್ ಯಾದವ್ ಕಾರ್ಯಾಚರಣೆ ನಡೆಸಿದರು.
ತಾಂತ್ರಿಕ ಕಣ್ಗಾವಲು ಮತ್ತು ನಿರ್ದಿಷ್ಟ ಒಳಹರಿವಿನ ಆಧಾರದ ಮೇಲೆ ಬಿಹಾರ ಕಳ್ಳಭಟ್ಟಿ ದುರಂತ ಪ್ರಕರಣದ ಪ್ರಮುಖ ಮುಖ್ಯ ಆರೋಪಿಯನ್ನು ದ್ವಾರಕಾದಲ್ಲಿ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪಿಯ ಬಂಧನದ ಬಗ್ಗೆ ಮುಂದಿನ ಕ್ರಮಕ್ಕಾಗಿ ಬಿಹಾರ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಯಾದವ್ ಹೇಳಿದ್ದಾರೆ.
ಇದನ್ನು ಓದಿ: ಯುಪಿಯಲ್ಲಿ 4 ವರ್ಷಗಳಲ್ಲಿ ಕಳ್ಳಭಟ್ಟಿ ಸೇವನೆಯಿಂದ 400 ಸಾವು: ಕಾಂಗ್ರೆಸ್ ಆರೋಪ