ಬಿಹಾರ ರಾಜಕೀಯ ಬಿಕ್ಕಟ್ಟು : ಬದಲಾಗಲಿದೆಯಾ ಬಿಹಾರದ ರಾಜಕೀಯ ಚಿತ್ರಣ! ಮುರಿದು ಬೀಳುವುದೇ ಬಿಜೆಪಿ-ಜೆಡಿಯು ಮೈತ್ರಿ ?

  • ಮುರಿದು ಬೀಳುವುದೇ ಬಿಜೆಪಿ-ಜೆಡಿಯು ಮೈತ್ರಿ ?
  • ಬದಲಾಗುತ್ತಿದೆ ಬಿಹಾರ ರಾಜಕೀಯ ಚಿತ್ರಣ
  • ಬಿಜೆಪಿ-ಜೆಡಿಯು ಮಧ್ಯೆ ಏನದು ತಕರಾರು

ಬಿಹಾರ : ಬಿಹಾರದ ರಾಜಕೀಯಕ್ಕೆ ಮುಂದಿನ 48 ಗಂಟೆಗಳು ಬಹಳ ಮುಖ್ಯ ಎಂದೇ ಹೇಳಲಾಗುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಮಹಾಮೈತ್ರಿಕೂಟದ ಜೊತೆ ಸೇರಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.  ರಾಜ್ಯದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಮುರಿದು ಬೀಳಬಹುದು ಎಂದೆ ಹೇಳಲಾಗುತ್ತಿದೆ. ಈಗಾಗಲೇ ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ದೊಡ್ಡ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ಕರೆದಿವೆ.

ಬಿಹಾರದಲ್ಲಿ ಜೆಡಿ(ಯು) ಪಕ್ಷಕ್ಕೆ ಆರ್‌.ಸಿ.ಪಿ. ಸಿಂಗ್‌ ರಾಜೀನಾಮೆ ಸಲ್ಲಿಸಿದ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಾಗಿವೆ. ಸದ್ಯ ಜೆಡಿ(ಯು) ಕೇಂದ್ರ ಸಚಿವ ಸಂಪುಟದಿಂದ ಹೊರಗಿದೆ. ಆರ್‌.ಸಿ.ಪಿ. ಸಿಂಗ್ ರಾಜೀನಾಮೆ ನೀಡಿದ ನಂತರ ಯಾವುದೇ ಪ್ರಾತಿನಿಧ್ಯವಿಲ್ಲದೆ ಉಳಿದಿರುವ ಕೇಂದ್ರ ಸಚಿವ ಸಂಪುಟವನ್ನು ಸೇರುವುದಿಲ್ಲ ಜೆಡಿ(ಯು) ಪಕ್ಷವು ಭಾನುವಾರ ಸ್ಪಷ್ಟಪಡಿಸಿತ್ತು.  ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುತ್ತಿಲ್ಲ ಎಂದು ಬಿಹಾರ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಿತ್ರಪಕ್ಷಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಜೆಡಿಯು ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.

ಬಿಹಾರ ರಾಜಕೀಯ ಪಕ್ಷಗಳ ಬಲಾಬಲ ಹೀಗಿದೆ..

ಬಿಜೆಪಿ ಶಾಸಕರು 44

ಜೆಡಿಯು 45

ಆರ್​ಜೆಡಿ 79

ಕಾಂಗ್ರೆಸ್ 19

ಇತರೆ 21

ಬಿಹಾರದ ಜೆಡಿಯು ಮತ್ತು ಬಿಜೆಪಿ ಹಾಗೂ ಇತರ ಸಣ್ಣ ಪಕ್ಷಗಳ ನಡುವೆ ಬಿರುಕು ವಿಸ್ತಾರವಾಗಿದ್ದು, ಪಾಟ್ನಾದಲ್ಲಿ ಜೆಡಿಯು ಶಾಸಕರು ಆಗಸ್ಟ್ 8ರ ಸೋಮವಾರದಂದು ಪ್ರತ್ಯೇಕ ಸಮಾಲೋಚನಾ ಸಭೆ ನಡೆಸಿದ್ದಾರೆ. ಇದೇ ವೇಳೆ ಎನ್ ಡಿಎ ಮೈತ್ರಿ ಸರಕಾರದ ಇನ್ನೊಂದು ಅಂಗ ಪಕ್ಷವಾದ ಜಾತ್ಯತೀತ ಹಿಂದೂಸ್ತಾನ್ ಅವಾಮ್ ಮೋರ್ಚಾದ ಶಾಸಕರು ಸಹ ಪ್ರತ್ಯೇಕ ಸಮಾಲೋಚನಾ ಸಭೆಯನ್ನು ಇಂದೇ ನಡೆಸಿದ್ದಾರೆ.

ಆಗಸ್ಟ್ 9ರ ಮಂಗಳವಾರ ಜೆಡಿಯುನ 45 ಶಾಸಕರೂ ಮುಖ್ಯಮಂತ್ರಿ ನಿತೀಶ್ ನಿವಾಸದಲ್ಲಿ ಸೇರಲು ತೀರ್ಮಾನಿಸಿದ್ದಾರೆ. ಮಂಗಳವಾರ ಆರ್ ಜೆಡಿ- ರಾಷ್ಟ್ರೀಯ ಜನತಾ ದಳದ ನಾಯಕರಾದ ತೇಜಸ್ವಿ ಯಾದವ್ ಸಹ ತಮ್ಮ ಶಾಸಕರ ಸಭೆ ಕರೆದಿದ್ದು. ಆ ಪಕ್ಷದ 79 ಶಾಸಕರು ಅದರಲ್ಲಿ ಹಾಜರಿರುವರು. ಹಲವರು ಇಂದೇ ಪಾಟ್ನಾ ಸೇರಿದ್ದಾರೆ. ಜೆಡಿಯು ಮತ್ತು ಆರ್‌ಜೆಡಿಗಳು ಮತ್ತೆ ಮೈತ್ರಿಗೆ ಬರುವ ಸೂಚನೆಗಳು ಇರುವುದಾಗಿ ಹೇಳಲಾಗಿದೆ. ಮುಖ್ಯಮಂತ್ರಿ ನಿತೀಶ್ ಅವರ ಇಫ್ತಾರ್ ಪಾರ್ಟಿಯಲ್ಲಿ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಭಾಗವಹಿಸಿದ ಬಳಿಕ ಎರಡೂ ಪಕ್ಷಗಳಾಗಲಿ, ನಾಯಕರಾಗಲಿ ಪರಸ್ಪರ ಟೀಕಿಸಿಕೊಂಡಿಲ್ಲ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಸೇರಿಕೊಂಡು ಈ ಹಿಂದೆ ಸರ್ಕಾರ ರಚನೆ ಮಾಡಿದ್ದರು. ಆದರೆ, ಶಿವಸೇನೆಯ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂದೆ ಬಿಜೆಪಿ ಜೊತೆಗೆ ಸರ್ಕಾರ ರಚನೆ ಮಾಡಿದ್ದಾರೆ. ಇದೀಗ ಬಿಹಾರದಲ್ಲೂ ಜೆಡಿಯು+ಬಿಜೆಪಿ ಪಕ್ಷಗಳು ಆಡಳಿತ ನಡೆಸುತ್ತಿದ್ದು, ನಿತೀಶ್ ಕುಮಾರ್ ಬಿಜೆಪಿ ಜೊತೆಗಿನ ಮೈತ್ರಿ ಕಳೆದುಕೊಂಡು ಜೆಡಿಯು, ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.

Donate Janashakthi Media

Leave a Reply

Your email address will not be published. Required fields are marked *