ಪಾಟ್ನಾ: ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಎಂದು ಆರೋಪಿಸಿ ಹಿರಿಯ ಪೊಲೀಸ್ ಅಧಿಕಾರಿ ಗೌರವ್ ಮಂಗ್ಲಾ ಐದು ಮಂದಿ ಠಾಣಾ ಸಿಬ್ಬಂದಿಗಳನ್ನು ಲಾಕಪ್ನಲ್ಲಿ ಹಾಕಿ ಶಿಕ್ಷೆ ನೀಡಿರುವ ಘಟನೆ ನಡೆದಿದೆ.
ಈ ಘಟನೆಯು ಬಿಹಾರದ ನಾವಾಡ ಪಟ್ಟಣದಲ್ಲಿ ನಡೆದಿದ್ದು, ಪೊಲೀಸ್ ಅಧಿಕಾರಿಯ ಕಾರ್ಯವೈಖರಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಇದೊಂದು ವಿಷಾದಕರ ಬೆಳವಣಿಗೆ ಬಿಹಾರದ ಪೊಲೀಸ್ ಸಿಬ್ಬಂದಿಗಳ ಸಂಘ ಹೇಳಿಕೊಂಡಿದ್ದು ಅಲ್ಲದೆ ಈ ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ಮನವಿ ಮಾಡಿದೆ.
ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್ರೇಖಾ ಸಿಂಗ್, ಎಎಸ್ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಉರೌನ್ ಈ ಐವರು ಜೈಲಿನಲ್ಲಿರುವ ಸಿಬ್ಬಂದಿಗಳು.
ಪೊಲೀಸ್ ಸಿಬ್ಬಂದಿ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಯು ಅವರನ್ನು ಲಾಕಪ್ಗೆ ದೂಡಿ, ಬೀಗ ಜಡಿದಿದ್ದಾರೆ. ಪೊಲೀಸರು ಲಾಕಪ್ನಲ್ಲಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಸಾವಿರಾರು ಮಂದಿ ಆಕ್ಷೇಪಿಸಿದ್ದಾರೆ.
ಬಿಹಾರದ ಪೊಲೀಸ್ ಸಿಬ್ಬಂದಿಯ ಸಂಘ ‘ಬಿಹಾರ ಪೊಲೀಸ್ ಒಕ್ಕೂಟ’ ಈ ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ಎಸ್ಪಿ ಗೌರವ್ ಮಂಗ್ಲಾ ಅವರ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಯಬೇಕಿದೆ ಎಂದು ಆಗ್ರಹಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಎಸ್ಪಿ ಗೌರವ್ ಮಂಗ್ಲಾ ಕೆಲವು ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಅದಕ್ಕಾಗಿ ಅವರನ್ನು ಜೈಲಿಗೆ ಹಾಕಿದ್ದೆ ಮಾಧ್ಯಮಗಳು ಅದನ್ನು ದೊಡ್ಡ ಅಪರಾಧವೆಂಬಂತೆ ಬಿಂಬಿಸುತ್ತಿವೆ ಎಂದು ಹೇಳಿದ್ದಾರೆ. ಅಲ್ಲದೆ ಠಾಣಾ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಸಿಂಗ್ ಎಸ್ಪಿ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
Manava hakku ullangane agide sp avarige punishment madalebeku