ಪ್ರಭುತ್ವ ಯಂತ್ರ ಮತ್ತು ಅಪಾರ ಹಣ ಬಳಸಿ ಜನತೆಯ ಪ್ರಶ್ನೆಗಳನ್ನು ಮುಳುಗಿಸಿಬಿಡಲಾಗಿದೆ-ಬಿಹಾರ ಚುನಾವಣಾ ಫಲಿತಾಂಶಗಳ ಬಗ್ಗೆ ಸಿಪಿಐ(ಎಂ)

ನವದೆಹಲಿ : ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಡಿಎ ಗೆಲುವು ಮಹಾಘಟಬಂಧನ್‌ಗೆ ಒಂದು ಹಿನ್ನಡೆಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಆಳುವ ಕೂಟವು ಇಡೀ ಪ್ರಭುತ್ವ ಯಂತ್ರವನ್ನು ಬಳಸಿಕೊಂಡಿತು, ವಿವಿಧ ಕೈಚಳಕಗಳಲ್ಲಿ ತೊಡಗಿಕೊಂಡಿತು ಮತ್ತು ಅಪಾರ ಪ್ರಮಾಣದ ಹಣವನ್ನು ನಿಯೋಜಿಸಿತು. ಪ್ರಧಾನ ಮಂತ್ರಿಗಳು ಮತ್ತು ಗೃಹ ಮಂತ್ರಿಗಳೂ ಸೇರಿದಂತೆ ಅದರ ನಾಯಕರ ಧ್ರುವೀಕರಣಗೊಳಿಸುವ ಕೋಮುವಾದಿ ಮತ್ತು ಜಾತಿವಾದಿ ಅಬ್ಬರಗಳ ಪ್ರಯೋಜನ ಅದಕ್ಕೆ ದಕ್ಕಿತು. ಇದನ್ನು ಆಜ್ಞಾನುವರ್ತಿ ಕಾರ್ಪೊರೇಟ್‍ ಮಾಧ್ಯಮಗಳು ಮತ್ತಷ್ಟು ಹಿಗ್ಗಿಸಿ ಮಹಾಘಟಬಂಧನ್ ಎತ್ತಿದ ಜನತೆಯ ಪ್ರಶ್ನೆಗಳು ಅದರಲ್ಲಿ ಮುಳುಗಿ ಹೋದವು.
ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಇನ್ನೂ ಹೆಚ್ಚಿನ ಒಗ್ಗಟ್ಟಿನ ಪ್ರಯತ್ನವನ್ನು ಮಾಡಬೇಕು ಎಂದು ಬಿಹಾರ ಚುನಾವಣೆಗಳು ತೋರಿಸುತ್ತವೆ ಎಂದಿರುವ ಸಿಪಿಐ(ಎಂ) ಈ ಫಲಿತಾಂಶಗಳ ಹಿಂದಿರುವ ಇತರ ಅಂಶಗಳನ್ನು ವಿವರವಾಗಿ ಪರೀಕ್ಷಿಸುವುದಾಗಿ ಹೇಳಿದೆ.

ಸಿಪಿಐ(ಎಂ) ಅಭ್ಯರ್ಥಿಗಳಿಗೆ ಮತ್ತು ಇತರ ಪ್ರತಿಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕಿರುವ ಬಿಹಾರದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತ, ಸಿಪಿಐ(ಎಂ) ಪೊಲಿಟ್ ಬ್ಯುರೊ ದಮನಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಟಗಳಿಗೆ ನೇತೃತ್ವ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಜನರಿಗೆ ಭರವಸೆ ನೀಡುವುದಾಗಿ ಹೇಳಿದೆ.

ಬಿಹಾರದಲ್ಲಿ ಸಿಪಿಐ(ಎಂ) ಒಂದು ಸ್ಥಾನದಲ್ಲಿ ಗೆದ್ದಿದೆ. ಭಿನ್ಹುತ್ಪರ ಕ್ಷೇತ್ರದಿಂದ ಅಜಯ್ ಕುಮಾರ್ 10381 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅದು ಎರಡು ಸ್ಥಾನದಲ್ಲಿ ಗೆದ್ದಿತ್ತು.

Donate Janashakthi Media

Leave a Reply

Your email address will not be published. Required fields are marked *