ಲಖಿಸರೈ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭೆಯ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಮಧ್ಯೆ ಉಪಮುಖ್ಯಮಂತ್ರಿ ಮತ್ತು ಲಖಿಸರೈನ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಸಿನ್ಹಾ ಅವರ ಕಾರಿನ ಮೇಲೆ ಖೋರಿಯಾರಿ ಗ್ರಾಮದಲ್ಲಿ ಗುಂಪೊಂದು ಚಪ್ಪಲಿ, ಕಲ್ಲು ಮತ್ತು ಸಗಣಿ ಎಸೆದು ದಾಳಿ ನಡೆಸಿದೆ. ಬಿಹಾರ
ವಿಜಯ್ ಕುಮಾರ್ ಸಿನ್ಹಾ ಭೂಮಿಹಾರ್ ನಾಯಕ ಮತ್ತು ಮೂರು ಬಾರಿ ಶಾಸಕರಾಗಿದ್ದಾರೆ. ಅವರು ಈ ಬಾರಿಯೂ ತಮ್ಮ ತವರು ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವ ಕಾರಣ, ಖೋರಿಯಾರಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು. ಇದನ್ನು ತಡೆಯಲು ಅವರ ಕಾರಿನ ಮೇಲೆ ಕಲ್ಲು ಸಗಣಿ ಎಸೆದು, ಮುರ್ದಾಬಾದ್ ಎಂದು ಘೋಷಣೆ ಕೂಗಿ ಭಾರಿ ಪ್ರತಿಭಟನೆ ನಡೆಸಿದರು. ಆರ್‌ಜೆಡಿ ಪಕ್ಷದವರು ಈ ಕೃತ್ಯ ಎಸಗಿದ್ದಾರೆ ಎಂದು ಡಿಸಿಎಂ ಸಿನ್ಹಾ ಆರೋಪಿಸಿದ್ದಾರೆ. ಬಿಹಾರ
ಇದನ್ನೂ ಓದಿ : ಬಿಹಾರ| 6 ವರ್ಷಗಳ ಹಿಂದೆ ₹4 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಕುಸಿತ
ಎನ್ಡಿಎ ಅಧಿಕಾರಕ್ಕೆ ಬಂದ ನಂತರ ವಿಪಕ್ಷಗಳ ಎದೆ ಮೇಲೆ ಬುಲ್ಡೋಜರ್ ಹರಿಯಲಿದೆ ಎಂದು ವಿಜಯ್ ಕುಮಾರ್ ಸಿನ್ಹಾ ಕಿಡಿಕಾರಿದರು. ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಗಲಭೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರನ್ನಾದರೂ ಮತ ಚಲಾಯಿಸದಂತೆ ತಡೆದಿದ್ದರೆ, ಅಲ್ಲಿ ಸರತಿ ಸಾಲು ಇರುತ್ತಿರಲಿಲ್ಲ. ಮತಗಟ್ಟೆ ಏಜೆಂಟ್‌ಗೆ ಯಾವುದೇ ಬೆದರಿಕೆ ಹಾಕಿಲ್ಲ. ನಾನು ಇಲ್ಲಿಯೇ ಬೆಂಗಾವಲಾಗಿ ಕಾಯುತ್ತಿದ್ದೇನೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಜಯ್ ಕುಮಾರ್ ಅವರು ಹೇಳಿದರು. ಬಿಹಾರ
ಹಿರಿಯ ಪೊಲೀಸ್ ಅಧಿಕಾರಿಯ ಈ ಹೇಳಿಕೆಗೆ ಉಪ ಮುಖ್ಯಮಂತ್ರಿ ಕಿಡಿಕಾರಿದ್ದಾರೆʻಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ದಡ್ಡ ಮತ್ತು ದುರ್ಬಲ ಪೊಲೀಸ್ʼ ಎಂದು ಟೀಕೆ ಮಾಡಿದ್ದಾರೆ. ಬಿಹಾರ
ಇದನ್ನೂ ನೋಡಿ : ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025 ಬಿಹಾರ
ಬಿಹಾರ
