ಜಗತ್ತಿನಾದ್ಯಂತ ಕೆಲ ಕಾಲ ಡೌನ್ ಆದ ಟ್ವಿಟ್ಟರ್ ..!

ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವೀಟರ್‌ (Twitter) ಜಗತ್ತಿನಾದ್ಯಂತ ಕೆಲ ಕಾಲ ಸ್ಥಗಿತಗೊಂಡು ಬಳಿಕ ಸಹಜ ಸ್ಥಿತಿಗೆ ಮರಳಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಟ್ವೀಟರ್‌ನಲ್ಲಿ ದೋಷ ಕಂಡುಬಂದಿತ್ತು.

ಟ್ವೀಟರ್‌ ಸರ್ವರ್‌ನಲ್ಲಿ ವ್ಯತ್ಯಯ ಉಂಟಾಗಿ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಒಂದು ಗಂಟೆಗಳ ಕಾಲ ಟ್ವೀಟರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ವೆಬ್‌ಸೈಟ್‌ ಮತ್ತು ವಿವಿಧ ಸೇವೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಡೌನ್‌ ಡಿಟೆಕ್ಟರ್‌ (Down Detector) ಆನ್‌ಲೈನ್‌ ವೇದಿಕೆಯಲ್ಲಿ ಸುಮಾರು 48,000 ದೂರುಗಳು ದಾಖಲಾಗಿದ್ದು, ಟ್ವೀಟ್‌ (Tweet) ಮಾಡಲು ಮತ್ತು ರಿಟ್ವೀಟ್‌ (Retweet) ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದರು.

ಈ ಬೆನ್ನಲ್ಲೇ ಟ್ವೀಟರ್‌ ಸಂಸ್ಥೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ಟೈಮ್‌ಲೈನ್‌ಗಳನ್ನು ಲೋಡ್‌ ಮಾಡುವುದನ್ನು ಮತ್ತು ಟ್ವೀಟ್‌ ಪೋಸ್ಟ್‌ ಮಾಡುವುದನ್ನು ತಡೆಯುವ ತಾಂತ್ರಿಕ ದೋಷವನ್ನು ಸರಿಪಡಿಸಿದ್ದೇವೆ. ಈಗ ಟ್ವೀಟರ್‌ ಸಹಜ ಸ್ಥಿತಿಗೆ ಮರಳಿದೆ. ಅಡಚಣೆಗಾಗಿ ಕ್ಷಮಿಸಿ!’ ಎಂದು ಟ್ವೀಟ್‌ ಮಾಡಿತ್ತು.

Donate Janashakthi Media

Leave a Reply

Your email address will not be published. Required fields are marked *