ನವದೆಹಲಿ: ರಾಜ್ಯಸಭೆಯ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ 2026ರ ಮಾರ್ಚ್ 16 ರಂದು ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸಗಢ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಈ 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಫೆಬ್ರವರಿ 18ರಂದು ಪ್ರಕಟಿಸಿದೆ. ರಾಜ್ಯಸಭೆ
2026 ಮಾರ್ಚ್ 16ರಂದು ಬೆಳಿಗ್ಗೆ 9:00 ರಿಂದ ಸಂಜೆ 4:00ರವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಅದೇ ದಿನ ಸಂಜೆ 5 ಗಂಟೆಗೆ ನಿಗದಿಯಾಗಿದೆ. 10 ರಾಜ್ಯಗಳಿಂದ ಆಯ್ಕೆಯಾದ ಪರಿಷತ್‌ನ 37 ಸದಸ್ಯರ ಅಧಿಕಾರಾವಧಿ 2026ರ ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳಲಿರುವುದರಿಂದ ಈ ಚುನಾವಣೆ ನಡೆಯಲಿದೆ.
ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಹಾಗೂ ಪ್ರಕ್ರಿಯೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ವೀಕ್ಷಕರನ್ನು ನೇಮಿಸಲಾಗುತ್ತದೆ ಎಂದೂ ಆಯೋಗ ಹೇಳಿದೆ.
ಇದನ್ನೂ ಓದಿ: ಜಾತಿ, ದಬ್ಬಾಳಿಕೆ ಮತ್ತು ಪ್ರತಿರೋಧ: ಮನಮುಟ್ಟುವ ‘ಸಂಬಳಿಗೋಲು’
ವೇಳಾಪಟ್ಟಿ
- ಚುನಾವಣೆ ಅಧಿಸೂಚನೆ: 2026 ಫೆಬ್ರುವರಿ 26
- ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: 05 ಮಾರ್ಚ್ 2026
- ನಾಮಪತ್ರಗಳ ಪರಿಶೀಲನೆ: 06 ಮಾರ್ಚ್ 2026
- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: 09 ಮಾರ್ಚ್ 2026
- ಮತದಾನದ ದಿನಾಂಕ: 16 ಮಾರ್ಚ್ 2026
- ಮತದಾನದ ಸಮಯ ಬೆಳಿಗ್ಗೆ: 09 ರಿಂದ ಸಂಜೆ 04ರವರೆಗೆ
- ಮತ ಎಣಿಕೆ ದಿನಾಂಕ, ಸಮಯ: 16 ಮಾರ್ಚ್, 2026 ಸಂಜೆ 5 ಗಂಟೆಗೆ
ಇದನ್ನೂ ನೋಡಿ: ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media
