ಉಡುಪಿ: ರಾಜ್ಯ ಸರಕಾರವು ಕಾರ್ಮಿಕರ ಇಎಸ್ಐ ಹಣದ ಪಾಲನ್ನು ಮಣಿಪಾಲ ಆಸ್ಪತ್ರೆಗೆ ನೀಡದೇ ಬಾಕಿ ಇಟ್ಟುಕೊಂಡು ಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.
ಮಣಿಪಾಲ ಆಸ್ಪತ್ರೆಯ ಹೇಳಿಕೆ ಪ್ರಕಾರ ಈಗಾಗಲೇ ಚಿಕಿತ್ಸೆ ಪಡೆದ ಕಾರ್ಮಿಕರ 10 ಕೋಟಿ ಹಣ ಬಾಕಿ ಇರಿಸಿಕೊಂಡಿದೆ ಎಂಬುವುದು ಆಘಾತಕಾರಿಯಾಗಿದೆ.ಕಾರ್ಮಿಕರು ಕರೋನ ಸಂಕಷ್ಟದಲ್ಲಿರುವ ವೇಳೆಯಲ್ಲಿ ಸರಕಾರದ ನಡೆ ಕಾರ್ಮಿಕ ವಿರೋಧಿಯಾಗಿದೆ. ನಮ್ಮ ಹಲವಾರು ಕಾರ್ಮಿಕರು ಈಗಾಗಲೇ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತಂಕದಲ್ಲಿದ್ದಾರೆ.ಆದ್ದರಿಂದ ಜನಪ್ರತಿನಿಧಿಗಳು,ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು.ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದ್ದಾರೆ.