ಕೋವಿಡ್‌ ಲಸಿಕೆ : ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದ ಅಂಗನವಾಡಿ ಕಾರ್ಯಕರ್ತೆಯರು

ಕೋವಿಡ್ ಲಸಿಕೆ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಂದ ಭಯಭೀತರಾಗಿರುವ ಗ್ರಾಮೀಣ ಭಾಗದ ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಎಲ್ಲೆಡೆ ನಡೆಯುತ್ತಿದೆ. ಕೋವಿಡ್‌ ನಿಂದ ರಕ್ಷಣೆ ಪಡೆಯಬೇಕಾದರೆ ಲಸಿಕೆ ಮುಖ್ಯ ಎಂದು ತಜ್ಞರು ಹೇಳುತ್ತಲೆ ಇದ್ದಾರೆ. ಅದರೆ ಜಾಗೃತಿಯ ಕೊರತೆಯ ಕಾರಣದಿಂದ ಲಸಿಕೆ ಹಾಕಿಸಿಕೊಳ್ಳವತ್ತ ಗ್ರಾಮೀಣ ಭಾಗದ ಜನ ಮುಖ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೋವಿಡ್‌ ವಾರಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕಿಯರು ಜಾಗೃತಿ ಮೂಡಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ನಿಜವಾದ ವಾರಿಯರ್‌ ಗಳಾಗಿದ್ದಾರೆ.

ಹೌದು ತುಮಕೂರು ಜಿಲ್ಲೆಯ ತುರುವೇಕೆರೆ ಶಿಶು ಅಭಿವೃದ್ಧಿ ಯೋಜನೆಯ  ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಶೀಲ್ಡ್ ಹಾಗು ಕೋ ವ್ಯಾಕ್ಸಿನ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ಕಿರುನಾಟಕವನ್ನಾಡಿದ್ದು ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ.  ದಿನಂಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಕೋವಿಡ್‌ ಸರ್ವೆ ಮಾಡುವಾಗ ಸಾಕಷ್ಟು ಜನ ವಿರೋಧ ಮಾಡ್ತಾ ಇದ್ರೂ,  ಇವರಿಗೆ ಜಾಗೃತಿ ಮೂಡಿಸುವುದು ಹೇಗೆ? ಯಾವ ರೀತಿ ಇವರಿಗೆ ತಿಳುವಳಿಕೆ ಕೊಡಬೇಕು ಎಂದು ಯೋಚಿಸುತ್ತಿದ್ದಾಗ ಅವರಿಗೆ ಥಟ್ಟನೆ ಹೊಳದದ್ದು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸೋಣ ಎಂದು,  ಬೀದಿ ನಾಟಕಕ್ಕಾಗಿ ತಯಾರಿ ನಡೆಸಿದರು, ನಾಟಕವನ್ನು ಪ್ರದರ್ಶಿಸಿಸಲು ಆರಂಭಿಸಿದರು, ಬೀದಿಬೀದಿಗಳಲ್ಲೂ, ಮನೆಗಳ ಮುಂದೆ ದಿನನಿತ್ಯ ಬೀದಿನಾಟಕ ಪ್ರದರ್ಶಿಸಿದರು. ಹಳ್ಳಿಯ ಜನ ಇವರ ಕಾರ್ಯಕ್ಕೆ ಕೊನೆಗೆ ತಲೆಬಾಗಿ ಲಸಿಕೆ ಹಾಕಿಸಿ ಕೊಳ್ಳಲು ಆರಂಭಿಸಿದರು. ಅರೇ, ಒಂದು ಬೀದಿ ನಾಟಕದ ಹಿಂದೆ ಇಷ್ಟೊಂದು ಶಕ್ತಿ ಇದೆಯಾ? ಆ ನಾಟಕದಲ್ಲಿ ಅಂತದ್ದು ಏನಿದೆ?  ನಾಟಕ ನೋಡಿದರೆ ನಿಮಗೆ ಗೊತ್ತಾಗುತ್ತದೆ  (ಅದರ ವಿಡಿಯೋ ಲಿಂಕ್‌ ಕೆಳಗಡೆ ಇದೆ)

ಇದನ್ನೂ ಓದಿ : ಉದ್ಯೋಗ ಖಾತ್ರಿ ಮೂಲಕ ಕೆರೆ ಹೂಳೆತ್ತಿ ಜಲಪಾತ ಸೃಷ್ಟಿಸಿದ ಅತ್ತಾಜೆ ಗ್ರಾಮಸ್ಥರು

ಅಂಗನವಾಡಿ ಅಕ್ಕಂದಿರ ಕೋವಿಡ್‌ ವಿರುದ್ಧ ಜಾಗೃತಿಗೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಈ ಜಾಗೃತಿ ನಾಟಕವನ್ನು ರಚಿಸಿದವರು ವಿಜ್ಞಾನ ಶಿಕ್ಷಕರಾದ  ಡಿ.ಎಂ.ಸೋಮೇಶ್ವರಾಧ್ಯ, ಅಂಗನವಾಡಿ ಕಾರ್ಯಕರ್ತೆ ಡಿ.ಎಂ ತೀರ್ಥ ಹಳ್ಳಿ ನಾಟಕವನ್ನು ನಿರ್ದೇಶಿಸುವ ಜೊತೆ ಅಭಿನಯವನ್ನು ಮಾಡಿದ್ದಾರೆ. ಅಂಗನವಾಡಿಯ ಇತರ ಕಾರ್ಯಕರ್ತೆಯರಾದ ಬಿಪಿ ರಂಜಿತ, ಡಿ.ಸಿ ರಾಧಾ, ಹುಲಿಕಲ್‌ ಕೆಂಪಮ್ಮ, ಜ್ಯೋತಿ ಸುಂಕಲಪುರ ಜಾಗೃತಿ ನಾಟಕಕ್ಕೆ ಸಾಥ್‌ ನೀಡಿದವರು. ಇವರ ಪ್ರಯತ್ನಕ್ಕೆ ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿಗಳು, ಶಿಶು ಅಬಿವೃದ್ಧಿ ಇಲಾಖೆಯ ಇತರ ಅಧಿಕಾರಿಗಳು ಪ್ರೋತ್ಸಾಹವನ್ನು ನೀಡಿದ್ದಾರೆ. ಇವರ ಈ ಪ್ರಯತ್ನಕ್ಕೆ ಲಸಿಕೆಯನ್ನು ಹಾಕಿಸಿಕೊಂಡ ಗ್ರಾಮಸ್ಥರು ಇವರ ಕಾರ್ಯವನ್ನು ಶ್ಲಾಗಿಸುತ್ತಿದ್ದಾರೆ.

ಒಂದು ಜಾಗೃತಿ ನಾಟಕ ಎಷ್ಟೊಂದು ಬದಲಾವಣೆ ತರುತ್ತೆ ಅಂಥಾ, ಸರಕಾರ ಲಸಿಕೆ ಹಾಕಿಸಿಕೊಳ್ಳು ಎಂದು ಹೇಳಿ ಕೈ ಕಟ್ಟಿ ಕುಳಿತಿದೆ. ಲಸಿಕೆ ಕುರಿತಾಗಿ ಎದ್ದೆರಿವ ಪ್ರಶ್ನೆಗಳು, ಅನುಮನಾಗಳನ್ನು ನಿವಅರಿಸುವುದು ಸರಕಾರದ ಕರ್ತವ್ಯ ಆದರೆ ಸರಕಾರ ಆ ರೀತಿಯ ಕೆಲಸಕ್ಕೆ ಮುಂದಾಗಲೇ ಇಲ್ಲ. ನಮ್ಮ ಅಂಗನವಾಡಿ ಅಕ್ಕಂದರು ನಿಜವಾದ ಕೋವಿಡ್‌ ವಾರಿಯರ್‌ ಗಳು ಎಂಬುದನ್ನು ಸಾಬೀತು ಮಾಡಿದ್ದಾರೆ. ಸರಕಾರ ಮಾಡಬೇಕಿದ್ದ ಕೆಲಸವನ್ನು ಇವರು ಮಾಡಿದ್ದಾರೆ. ಇವರ ಪ್ರಯತ್ನಕ್ಕೆ ನಾವೆಲ್ಲ ಬೆನ್ನು ತಟ್ಟಲೇ ಬೇಕಿದೆ.  ಕೋವಿಡ್‌ ವಿರುದ್ಧ ಹೋರಾಟ ನಡೆಸುವುದಕ್ಕೆ ಲಸಿಕೆ ಮುಖ್ಯ ಎಂಬುದನ್ನು ಎಲ್ಲರಿಗೂ ಅರ್ಥ ಮಾಡಿಸಿದ ಅಂಗನವಾಡಿ ಅಕ್ಕಂದಿರಗೆ ಸಲಾಂ ಹೇಳಬೇಕಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು  ಲಿಂಕ್ ಕ್ಲಿಕ್ ಮಾಡಿ

 

Donate Janashakthi Media

Leave a Reply

Your email address will not be published. Required fields are marked *