‘ತುರ್ತು’ ಪರಿಸ್ಥಿತಿಯಲ್ಲಿ ಬಿಡೆನ್-ಕಮಲಾ ಚಾರಿತ್ರಿಕ ಪದಗ್ರಹಣ ಇಂದು

ಟ್ರಂಪ್ ಬೆಂಬಲಿಗ ಉಗ್ರ ಬಲಪಂಥೀಯ ಗುಂಪುಗಳು ಇಂದು ಸಹ ಸಶಸ್ತ್ರ ದಾಳಿ ಮತ್ತು ದಂಗೆಗೆ ಪ್ರಯತ್ನ ನಡೆಸಲು ಯೋಜಿಸಿದ್ದಾರೆ ಎಂಬ ಬೇಹುಗಾರಿಕೆ ವರದಿ ಆಧಾರದ ಮೇಲೆ 25 ಸಾವಿರ ”‘ನೇಶನಲ್ ಗಾರ್ಡ್ಸ್” ಸೈನಿಕರನ್ನು ಸಜ್ಜುಗೊಳಿಸಲಾಗಿದೆ.  ಇದು ಇರಾಕ್, ಅಫ್ಘಾನಿಸ್ತಾನ ಮತ್ತು ಸಿರಿಯಾ ಗಳಲ್ಲಿ ಸಜ್ಜುಗೊಳಿಸಲಾದ ಒಟ್ಟು ಅಮೆರಿಕನ್ ಸೈನಿಕರಿಗಿಂತ ಹೆ‍ಚ್ಚು ! ಅವರನ್ನು ಸಜ್ಜುಗೊಳಿಸುವ ಮೊದಲು ಅವರ ಹಿನ್ನೆಲೆಯನ್ನು ಮೂರು ಬಾರಿ ಪರಿಶೀಲಿಸಲಾಗಿದೆಯಂತೆ.

ಇಂದು (ಜನವರಿ 20) ಮಧ್ಯಾಹ್ನ 12 (ವಾಶಿಂಗ್ಟನ್ ಸಮಯ ಮತ್ತು ಭಾರತದ 10.30 ರಾತ್ರಿ) ಗಂಟೆಗೆ ಜೋ ಬಿಡೆನ್ ಮತ್ತು ಕಮಲಾ ಹ್ಯಾರೀಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ವಾಶಿಂಗ್ಟನ್ ನಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಹೇರಲಾಗಿದ್ದು ಈ ಪದಗ್ರಹಣ ಗಂಭೀರವಾದ ವಿಶಿಷ್ಟ ಪರಿಸ್ಥಿತಿಯಲ್ಲಿ ನಡೆಯುತ್ತಿದೆ.  ‘ನ ಭೂತೋ ನ ಭವಿಷ್ಯತಿ’ ಎನ್ನಬಹುದಾದ  ಹಲವು ‘ಪ್ರಥಮ’ಗಳನ್ನು ಹೊಂದಿರುವ ಮತ್ತು ಹಲವು ಕಾರಣಗಳಿಗೆ ಚಾರಿತ್ರಿಕ ಪದಗ್ರಹಣ ಆಗಲಿದೆ.

ಜನವರಿ 6ರಂದು ಟ್ರಂಪ್ ಬೆಂಬಲಿಗರ ಸಶಸ್ತ್ರ ದಾಳಿ ಮತ್ತು ದಂಗೆಯನ್ನು ಕಂಡ ಕ್ಯಾಪಿಟೊಲ್ (ಯು.ಎಸ್ ಪಾರ್ಲಿಮೆಂಟ್ ಭವನ) ಮುಂದೆ ನಡೆಯುವ ಬಹಿರಂಗ ಸಭೆಗೆ ಆ ಕಾರಣಕ್ಕಾಗಿ ಎಚ್ಚರಿಕೆ ವಹಿಸಲಾಗಿದೆ. ಟ್ರಂಪ್ ಬೆಂಬಲಿಗ ಉಗ್ರ ಬಲಪಂಥೀಯ ಗುಂಪುಗಳು ಇಂದು ಸಹ ಸಶಸ್ತ್ರ ದಾಳಿ ಮತ್ತು ದಂಗೆಗೆ ಪ್ರಯತ್ನ ನಡೆಸಲು ಯೋಜಿಸಿದ್ದಾರೆ ಎಂಬ ಬೇಹುಗಾರಿಕೆ ವರದಿ ಆಧಾರದ ಮೇಲೆ 25 ಸಾವಿರ ”‘ನೇಶನಲ್ ಗಾರ್ಡ್ಸ್” ಸೈನಿಕರನ್ನು ಸಜ್ಜುಗೊಳಿಸಲಾಗಿದೆ.  ಇದು ಇರಾಕ್, ಅಫ್ಘಾನಿಸ್ತಾನ ಮತ್ತು ಸಿರಿಯಾ ಗಳಲ್ಲಿ ಸಜ್ಜುಗೊಳಿಸಲಾದ ಒಟ್ಟು ಅಮೆರಿಕನ್ ಸೈನಿಕರಿಗಿಂತ ಹೆ‍ಚ್ಚು ! ಅವರನ್ನು ಸಜ್ಜುಗೊಳಿಸುವ ಮೊದಲು ಅವರ ಹಿನ್ನೆಲೆಯನ್ನು ಮೂರು ಬಾರಿ ಪರಿಶೀಲಿಸಲಾಗಿದೆಯಂತೆ. ಯಾಕೆಂದರೆ ಜನವರಿ 6ರ ದಂಗೆಯಲ್ಲಿ ಹಾಲಿ ಮತ್ತು ಮಾಜಿ ಭದ್ರತಾ ಮತ್ತು ಪೋಲಿಸ್ ಪಡೆಯ ಹಲವರು ಭಾಗವಹಿಸಿದ್ದಾರೆ ಮತ್ತು ಕ್ಯಾಪಿಟೊಲ್ ಪೋಲಿಸ್ ಪಡೆಯ ಹಲವರು ದಂಗೆಕೋರರ ಜೊತೆ ಶಾಮೀಲಾಗಿದ್ದರು ಎಂಬ ಮಾಹಿತಿ ಜನವರಿ 6ರ ದಂಗೆಯ ಕುರಿತು ನಡೆಯುತ್ತಿರುವ ತನಿಖೆಗಳಿಂದ ಬಯಲಾಗಿದೆಯಂತೆ.  ವಾಶಿಂಗ್ಟನ್ನಿನ ಕ್ಯಾಪಿಟೊಲ್ ಪ್ರದೇಶ ಇರಾಕಿನ ರಾಜಧಾನಿ ಬಾಗ್ದಾದ್ ನ ಅತಿ ಭದ್ರತಾ ಕ್ಷೇತ್ರವಾದ ‘ಗ್ರೀನ್ ಝೋನ್’ ನಂತೆ ಕಾಣಿಸುತ್ತಿದೆ ಎಂದು ವರದಿಗಾರರು ಹೇಳಿದ್ದಾರೆ. ದೇಶದಾದ್ಯಂತ ಪ್ರಾಂತೀಯ ರಾಜಧಾನಿಗಳಲ್ಲಿರುವ ಪ್ರಾಂತೀಯ ಕ್ಯಾಪಿಟೊಲ್ ಭವನಗಳ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಇಧೇ ರೀತಿ ”‘ನೇಶನಲ್ ಗಾರ್ಡ್ಸ್” ಸೈನಿಕರನ್ನು ಸಜ್ಜುಗೊಳಿಸಲಾಗಿದೆ.  ಅಧ್ಯಕ್ಷೀಯ ಪದಗ್ರಹಣಕ್ಕೆ ಇಂತಹ ಪಡೆಗಳ ಸಜ್ಜುಗೊಳಿಸುವಿಕೆ ಇದೇ ಮೊದಲು ಎನ್ನಲಾಗಿದೆ.

ಜನವರಿ 6ರ ದಂಗೆಯ ಮತ್ತು ಎಂದೂ ಕಂಡರಿಯದ ದೇಶವ್ಯಾಪಿ ಕೊವಿದ್-19 ಸಾವು-ನೋವುಗಳ ಕರಾಳ ನೆರಳು ಅಧ್ಯಕ್ಷೀಯ ಪದಗ್ರಹಣ ಸಮಾರಂಭದ ಮೇಲಾಗಿದೆ.  ಸಮಾರಂಭದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ದೈಹಿಕ ಅಂತರ ಕಾಪಾಡಲು ಮತ್ತು ಭದ್ರತಾ ದೃಷ್ಟಿಯಿಂದ ಸೀಮಿತಗೊಳಿಸಲಾಗಿದೆ.  ಅಧ್ಯಕ್ಷೀಯ ಪದಗ್ರಹಣಕ್ಕೆ ಸಂಬಂಧಿಸಿದ ಹಲವು ‘ಪ್ರಥಮ’ಗಳಲ್ಲಿ ಪ್ರಮುಖವಾದ್ದು ಹೊರಹೋಗುತ್ತಿರುವ ಅಧ್ಯಕ್ಷ ಟ್ರಂಪ್ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಧು ಘೋಷಿಸಿರುವುದು. ಆ ಮೂಲಕ ಟ್ರಂಪ್ ಹೊರಹೋಗುತ್ತಿರುವ ಅಧ್ಯಕ್ಷರು ಹೊಸ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಹರಸುವ 150 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿದಿದ್ದಾರೆ.  ಆದರೆ ಉಪಾಧ್ಯಕ್ಷ  ಪೆನ್ಸ್ ಹಾಗೂ ಬದುಕಿರುವ ಎಲ್ಲ ಮಾಜಿ ಅಧ್ಯಕ್ಷರುಗಳು ಭಾಗವಹಿಸುತ್ತಿದ್ದಾರೆ.

ಅಧ್ಯಕ್ಷ ಟ್ರಂಪ್ ಎರಡು ಬಾರಿ ಮಹಾಭಿಯೋಗಕ್ಕೆ (ಇಂಪೀಚ್ ಮೆಂಟ್) ಒಳಗಾಗುತ್ತಿರುವ ಮೊದಲ ಅಧ್ಯಕ್ಷರಾದ ‘ವಿಕ್ರಮ’ ಸಾಧಿಸಿದ್ದಾರೆ!  ಜನವರಿ 6ರ ದಂಗೆಗೆ ನೇರವಾಗಿ ಪ್ರಚೋದಿಸಿದ್ದಾರೆ ಎಂದು ಆಪಾದಿಸುವ ಮಹಾಭಿಯೋಗಕ್ಕೆ ಯು.ಎಸ್. ಕೆಳಸದನ (ಜನ ಪ್ರತಿನಿಧಿ ಸಭೆ) ಅನುಮೋದನೆ ನೀಡಿದ್ದು, ಮೇಲ್ಸದನವಾದ ಸೆನೆಟ್ ನಲ್ಲಿ ಅದಕ್ಕೆ ಮೂರನೇ ಎರಡು ಬಹುಮತ ಬಂದರೆ (ಆ ಸಾಧ್ಯತೆ ಇದೆ ಎನ್ನಲಾಗಿದೆ) ಮುಂದೆ ಅಧ್ಯಕ್ಷ ಅಥವಾ ಯಾವುದೇ ಚುನಾಯಿತ ರಾಜಕೀಯ ಹುದ್ದೆಗೆ ಆಯ್ಕೆಯಾಗುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಹೊರಹೋಗುವ ಅಧ್ಯಕ್ಷರು ಹೊಸ ಅಧ್ಯಕ್ಷರನ್ನು ಅಧಿಕಾರ ಹಸ್ತಾಂತರದ ಮೊದಲು ಪತ್ನಿ(ಅಥವಾ ಪತಿ) ಸಮೇತ ಆಹ್ವಾನಿಸುವ ಸಾಂಪ್ರದಾಯಿಕ ಶಿಷ್ಟಾಚಾರವನ್ನು ಮುರಿದಿದ್ದಾರೆ. ಅಧಿಕಾರದ ಹಸ್ತಾಂತರದ ನಂತರ ಶ್ವೇತಭವನಕ್ಕೆ ಹೊಸ ಅಧ್ಯಕ್ಷರಿರ ಕುಟುಂಬವನ್ನು ಔಪಚಾರಿಕವಾಗಿ ಸ್ವಾಗತಿಸುವ ಸಾಂಪ್ರದಾಯಿಕ ಶಿಷ್ಟಾಚಾರವನ್ನು ಸಹ ಮುರಿಯುವ ಸಂಭವವೇ ಹೆಚ್ಚು. ಅಧಿಕಾರ ಹಸ್ತಾಂತರದ ಪ್ರಕ್ರಿಯೆಯ ಭಾಗವಾಗಿ ಸಹ ಅವರು ಚುನಾಯಿತ ಅಧ್ಯಕ್ಷ ಬಿಡೆನ್ ಅವರನ್ನು ಭೇಟಿಯಾಗಿಲ್ಲ. ಬಿಡೆನ್ ಚುನಾಯಿತ ಅಧ್ಯಕ್ಷ ಎಂದು ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಅವರನ್ನು ಟ್ರಂಪ್ ಅಭಿನಂದಿಸಿಯೂ ಇಲ್ಲ. ಪರೋಕ್ಷವಾಗಿಯಷ್ಟೇ ಬಿಡೆನ್ ಚುನಾಯಿತ ಅಧ್ಯಕ್ಷ ಎಂದು ಒಪ್ಪಿಕೊಂಡಿದ್ದಾರೆ. ಯು.ಎಸ್ ಚುನಾಯಿತ ಸದನಗಳ ಜಂಟಿ ಸಭೆಯಲ್ಲಿ ಚುನಾವಣಾ ಫಲಿತಾಂಶವನ್ನು ಔಪಚಾರಿಕವಾಗಿ ಅನುಮೊಧಿಸುವ ಕೊನೆಯ ಹಂತದ ವರೆಗೆ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿ ಕಾನೂನು-ಸಂವಿಧಾನ ಬದ್ಧವಾದ ಮತ್ತು ಕಾನೂನು-ಸಂವಿಧಾನ ಬಾಹಿರವಾದ ಎಲ್ಲ  ಸಾಧ್ಯ ಕ್ರಮಗಳನ್ನು ಒಬ್ಬ ಅಧ್ಯಕ್ಷರು ಕೈಗೊಂಡಿರುವುದು ಸಹ ಇದೇ ಮೊದಲು.

 

ಜಗತ್ತಿಗೆ ‘ಪ್ರಜಾಪ್ರಭುತ್ವ’ ಮತ್ತು ‘ಮಾನವ ಹಕ್ಕು’ಗಳ ಪಾಠ ಹೇಳುತ್ತಾ, ತನ್ನ ಮೂಗಿಗೆ ನೇರಕ್ಕಿರದ ಸರಕಾರಗಳ (ಯಗೊಸ್ಲಾವಿಯ, ಇರಾಕ್, ಲಿಬಿಯಾ, ಬೊಲವಿಯ ಇತ್ಯಾದಿ) “ಬಲಾತ್ಕಾರದ ಆಡಳಿತ ಬದಲಾವಣೆ”ಯನ್ನು ಮಾಡುತ್ತಿದ್ದುದರ ಕಟು ಔಷಧಿಯ ರುಚಿ ಅದಕ್ಕೆ ಗೊತ್ತಾಗುತ್ತಿದೆ ಎಂದು ಮೂರನೆಯ ಜಗತ್ತಿನಲ್ಲಿ ಮೂದಲಿಕೆಗೆ  ತುತ್ತಾಗಿದೆ.

ಬಿಡೆನ್ ಆಂತರಿಕವಾಗಿಯೂ ಅಂತರ್ರಾಷ್ಟ್ರೀಯವಾಗಿಯೂ ಗಂಭೀರ ಪರಿಸ್ಥಿತಿಯಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಜನವರಿ 6ರ ದಂಗೆ ಮೂಲಕ “ಬಲಾತ್ಕಾರದ ಆಡಳಿತ ಬದಲಾವಣೆ”ಯ ಪ್ರಯತ್ನ ದೇಶ ಎಷ್ಟು ಒಡೆದ ಮನೆಯಾಗಿದೆ ಎಂದು ಮುಖಕ್ಕೆ ರಾಚುವಂತೆ ತಿಳಿಸಿದೆ. ಅಮೆರಿಕದ ‘ಅತ್ಯಂತ ಹಳೆಯ ಪ್ರಜಾಪ್ರಭುತ್ವ ವ್ಯವಸ್ಥೆ’ ಎಂಬ ಹೆಗ್ಗಳಿಕೆ ಆಂತರಿಕವಾಗಿಯೂ ಅಂತರ್ರಾಷ್ಟ್ರೀಯವಾಗಿಯೂ ಮಣ್ಣುಪಾಲಾಗಿದೆ.’ ಇದು ಯಾವತ್ತೂ ನಿಜವಾಗಿರಲಿಲ್ಲ ಎಂಬುದು ಬೇರೆಯ ಮಾತು. ಆದರೆ ಈಗ ಅದು ಇನ್ನೊಂದು ಮೂರನೆಯ ಜಗತ್ತಿನ ‘ಬನಾನಾ ರಿಪಬ್ಲಿಕ್’ ನಂತೆ ಅಷ್ಟೇ ಎಂಬುದು ಜಗಜ್ಜಾಹೀರಾಗಿದೆ. ಜಗತ್ತಿಗೆ ‘ಪ್ರಜಾಪ್ರಭುತ್ವ’ ಮತ್ತು ‘ಮಾನವ ಹಕ್ಕು’ಗಳ ಪಾಠ ಹೇಳುತ್ತಾ, ತನ್ನ ಮೂಗಿಗೆ ನೇರಕ್ಕಿರದ ಸರಕಾರಗಳ (ಯಗೊಸ್ಲಾವಿಯ, ಇರಾಕ್, ಲಿಬಿಯಾ, ಬೊಲವಿಯ ಇತ್ಯಾದಿ) “ಬಲಾತ್ಕಾರದ ಆಡಳಿತ ಬದಲಾವಣೆ”ಯನ್ನು ಮಾಡುತ್ತಿದ್ದುದರ ಕಟು ಔಷಧಿಯ ರುಚಿ ಅದಕ್ಕೆ ಗೊತ್ತಾಗುತ್ತಿದೆ ಎಂದು ಮೂರನೆಯ ಜಗತ್ತಿನಲ್ಲಿ ಮೂದಲಿಕೆಗೆ  ತುತ್ತಾಗಿದೆ.  ಅಮೆರಿಕದ “ಜಾಗತಿಕ ಅಧಿನಾಯಕತ್ವ’ ಸಹ ಧೂಳಿಪಟವಾಗಿದೆ. ಅದರ ಪ್ರತೀಕಗಳಾಗಿದ್ದ ನಾಟೋ ಮುಂತಾದ ಸಂಸ್ಥೆಗಳು ದುರ್ಬಲವಾಗಿವೆ. ನಿಕಟ ಸಹವರ್ತಿಗಳಾಗಿದ್ದ ಕೆನಡಾ, ಯುರೋ ಕೂಟ, ಆಸಿಯನ್ ಗಳು ದೂರ ಸರಿದಿವೆ. ಇವೆಲ್ಲವನ್ನು ಸರಿ ಪಡಿಸಿ ಟ್ರಂಪ್ ಮಾಡಿದ ವಿನಾಶ ಕೃತ್ಯಗಳನ್ನು ಸರಿಪಡಿಸಬೇಕಾದ ಸವಾಲು ಬಿಡೆನ್ ಮುಂದಿದೆ. ಟ್ರಂಪ್ ನಿರ್ಲಕ್ಷದಿಂದ ವಿಕೊಫಕ್ಕೆ ಹೋಗಿರುವ ಕೊವಿಡ್ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಆಂತರಿಕವಾಗಿಯೂ ಅಂತರ್ರಾಷ್ಟ್ರೀಯವಾಗಿಯೂ ಟ್ರಂಪ್ ತೆಗೆದುಕೊಂಡ 17 ವಿನಾಶಕಾರಿ ನಿರ್ಣಯಗಳನ್ನು ಮೊದಲ ದಿನವೇ ಬಿಡೆನ್ ಹಿಂತೆಗೆದುಕೊಳ್ಳುತ್ತಾರೆ ಎಂಬುದು ಸುದ್ದಿಯಲ್ಲಿದೆ.

ಈ ನಡುವೆ ಅಧ್ಯಕ್ಷ ಟ್ರಂಪ್ ತಮ್ಮ ಬೆಂಬಲಿಗರು ಮತ್ತು ಬೇಕಾಬಿಟ್ಟಿಯಾಗಿ ದೇಶೀಯ ಮತ್ತು ಅಂತರ್ರಾಷ್ಟ್ರೀಯವಾಗಿ ಹೀನ ಅಪರಾಧಗಳನ್ನು ಎಸಗಿದವರಿಗೆ ಕ್ಷಮಾದಾನ ಕೊಡುವುದರಲ್ಲಿ ‘ಬ್ಯುಸಿ’ಯಾಗಿದ್ದಾರೆ. ಕೊನೆಯ ದಿನ ಜನವರಿ 6 ದಂಗೆಯಲ್ಲಿ ಭಾಗವಹಿಸಿದ ಬೆಂಬಲಿಗ ಸೆನೆಟರುಗಳು, ಪ್ರತಿನಿಧಿಗಳು, ಭ್ರಷ್ಟಾಚಾರ ಮತ್ತಿತರ ಅಪರಾಧಗಳ ಆಪಾದನೆ ಎದುರಿಸುತ್ತಿರುವ ತನ್ನ ಕುಟುಂಬದ ಸದಸ್ಯರು ಮತ್ತು ಕಂಪನಿಯ ಅಧಿಕಾರಿಗಳಿಗೆ ಕ್ಷಮದಾನ ಕೊಡಬೇಕೆ ಬೇಡವೇ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಕಳೆದ ೊಂದು ವಾರದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ, ಹೇಳಿಕೆ ನೀಡದಿರುವುದು ಸಹ ಎರಡನೆಯ ಮಹಾಭಿಯೋಗದ ಭಯದಿಂದಾಗಿಯಷ್ಟೇ ಎಂದು ಹೇಳಲಾಗಿದೆ.

Donate Janashakthi Media

Leave a Reply

Your email address will not be published. Required fields are marked *