ಅಪಹರಣ ಆರೋಪ ತಳ್ಳಿಹಾಕಿದ ಭವಾನಿ ರೇವಣ್ಣ

ಬೆಂಗಳೂರು: ಹೈಕೋರ್ಟ್‌ ನೀಡಿದ್ದ ಖಡಕ್‌ ಸೂಚನೆಯ ಮೇರೆಗೆ ನಿನ್ನೆ ಎಸ್‌ಐಟಿ ತನಿಖೆಗೆ ಹಾಜರಾಗಿದ್ದ ಹೊಳೆನರಸೀಪುರ ಮನೆಗೆಲಸದ ಮಹಿಳೆಯ ಅಪಹರಣ ಪ್ರಕರಣದ ಆರೋಪಿ ಭವಾನಿ ರೇವಣ್ಣ, ಎಸ್‌ಐಟಿಗೆ ಮುಂದೆ ಈ ಆರೋಪವನ್ನು ತಳ್ಳಿಹಾಕಿರುವ ಬಗ್ಗೆ ವರದಿಯಾಗಿದೆ.

ಇಷ್ಟು ದಿನ ಎಸ್‌ಐಟಿ ತನಿಖೆಗೆ ಸಹಕರಿಸದೇ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ನಿನ್ನೆ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದು, ನಾನು ಕಿಡ್ನಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆನ್ನಲಾಗಿದೆ. ಎಸ್‌ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಿಡ್ನಾಪ್ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಇದನ್ನೂ ಓದಿ: ಗುಜರಿ ಅಂಗಡಿ ಮಾಲೀಕ ಮತ್ತು ಕಾರ್ಮಿಕನ ಎಡವಟ್ಟು: ವಿಷಾನಿಲ ಹರಡಿಕೆ

ಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದವರು. ನಾನು ಕಿಡ್ನಾಪ್ ಮಾಡಿಸಿಲ್ಲ, ಎಲ್ಲವೂ ಷಡ್ಯಂತ್ರ ಎಂದು ಭವಾನಿ ರೇವಣ್ಣ ಅವರು ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆಂದು ಗೊತ್ತಾಗಿದೆ.

ಈ ವೇಳೆ ಇಬ್ಬರು ಆರೋಪಿಗಳ ನಡುವಿನ ಆಡಿಯೋ ಸಂಭಾಷಣೆ ಇಟ್ಟು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸತೀಶ್ ಬಾಬಣ್ಣ ಹಾಗೂ ರಾಜಗೋಪಾಲ್ ನಡುವಿನ ಆಡಿಯೋ ಸಂಭಾಷಣೆ ಇಟ್ಟು ವಿಚಾರಣೆ ಮಾಡಿದ್ದು ನಾನು ಯಾರನ್ನೂ ಕರೆದುಕೊಂಡು ಬರಲು ಹೇಳಿಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಭವಾನಿ ರೇವಣ್ಣ ಅವರು ವಿಚಾರಣೆ ವೇಳೆ ತಿಳಿಸಿದ್ದಾರೆ. ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು ಇಂದು ಮತ್ತೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಮೈಸೂರಿನ ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಹೆಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಹಲವು ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.

ಇದನ್ನೂ ನೋಡಿ: ಚುನಾವಣಾ ಫಲಿತಾಂಶ : ಬಿಜೆಪಿಯ ಗರ್ವಭಂಗವೇ? ಕಾಂಗ್ರೆಸ್ ಗೆ ಶಾಪ ವಿಮೋಚನೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *