ಭಾರೀ ಏರಿಕೆ ಕಂಡ ಟೊಮ್ಯಾಟೊ ದರ; ಬರೋಬ್ಬರಿ ಒಂದು ಕೆಜಿಗೆ ರೂ.60

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಟೊಮ್ಯಾಟೊ ದರ ಏರಿಕೆ ಕಂಡಿದೆ. ಮೇ 3ರಂದು ರಂಜಾನ್ ಹಬ್ಬವಿದ್ದು ಟೊಮ್ಯಾಟೊ ದರ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಗಗನಕ್ಕೇರಿದ ಟೊಮ್ಯಾಟೊ ದರ, ಗ್ರಾಹಕರಿಗೆ ಶಾಕ್ ನೀಡಿದೆ.

ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಟೊಮ್ಯಾಟೊಗೆ 60 ರೂ ಇದೆ. ಉತ್ತಮ ಗುಣಮಟ್ಟದ ಟೊಮ್ಯಾಟೊ ಬೆಲೆ 70ರವರೆಗೆ ಮಾರಾಟವಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಕೆ.ಜಿ ಟೊಮ್ಯಾಟೊ ದರ 10 ರಿಂದ 12ರೂ. ಇತ್ತು. ಒಂದು ವಾರದಿಂದ ನಿರಂತರವಾಗಿ ಟೊಮ್ಯಾಟೊ ಬೆಲೆ ಏರಿಕೆ ಕಾಣುತ್ತಿದ್ದು ಏರಿಕೆ ಹಿನ್ನೆಲೆ ಗ್ರಾಹಕರು ಕಂಗಾಲಾಗಿದ್ದಾರೆ.

ಇದನ್ನು ಓದಿ: ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದ ಪರಿಣಾಮವಾಗಿ ಈ ಹಿಂದೆ ಕೆ.ಜಿ ಟೊಮ್ಯಾಟೊ ಬೆಲೆ 100ರೂ. ಗಡಿ ದಾಟಿತ್ತು. ಸದ್ಯ ಬೇಸಿಗೆ ಹಿನ್ನೆಲೆ ರೈತರಿಗೆ ನೀರಿನ ಅಭಾವ ಎದುರಾಗಿದ್ದು ಟೊಮ್ಯಾಟೊ ಬೆಳೆಗೆ ಹಿಂದೇಟು ಬಿದ್ದಿದೆ. ಇದರ ಪರಿಣಾಮ ಟೊಮ್ಯಾಟೊ ಬೆಳೆದವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಮಾರುಕಟ್ಟೆಗೆ ಟೊಮ್ಯಾಟೊ ಕಡಿಮೆ ಪ್ರಮಾಣದಲ್ಲಿ ಸರಬರಾಜು ಆಗುತ್ತಿವೆ.

ಬರೋಬ್ಬರಿ 50 ರಿಂದ 60 ರೂ. ಗೆ ಟೊಮ್ಯಾಟೊ ಮಾರಾಟವಾಗುತ್ತಿರುವುದರಿಂದ ಹೊಸ ಇಳುವರಿ ಬರಲು 3 ರಿಂದ 4 ತಿಂಗಳು ಕಾಲಾವದಿ ಬೇಕು. ಅಲ್ಲಿಯವರೆಗೆ ಟೊಮ್ಯಾಟೊ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.  ಕನಿಷ್ಠ ಇನ್ನು 3 ತಿಂಗಳು ಟೊಮ್ಯಾಟೊ ದರ ಇಳಿಯುವ ಲಕ್ಷಣ ಇಲ್ಲ.

ಕೋಲಾರದಿಂದ ಬರುವ 14 ಕೆ.ಜಿ ಬಾಕ್ಸ್ ಟೊಮ್ಯಾಟೊಗೆ 600 ರಿಂದ 800 ರೂ ಇದೆ. ಮೈಸೂರು ಭಾಗದಿಂದ ಬರುವ 22 ಕೆ.ಜಿ ಬಾಕ್ಸ್ ಟೊಮ್ಯಾಟೊ 900 ರಿಂದ 1,100ರೂ. ಇದೆ. ಮತ್ತೊಂದು ಕಡೆ ದುಡ್ಡು ಕೊಟ್ಟರೂ ಹೆಚ್ಚು ಗುಣಮಟ್ಟದ ಟೊಮ್ಯಾಟೊ ಸಿಗೋದು ಕಷ್ಟವಾಗಿದೆ. ಟೊಮ್ಯಾಟೊ ಬೆಲೆ ಜೊತೆಗೆ ಇತರೆ ತರಕಾರಿ ದರದಲ್ಲೂ ಏರಿಕೆ ಕಂಡು ಬರುತ್ತಿದೆ.

Donate Janashakthi Media

Leave a Reply

Your email address will not be published. Required fields are marked *