ಧರ್ಮಾದಂ: ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎಡರಂಗದ ಸ್ಪರ್ಧಿಸಿದ್ದ ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಪಿಣರಾಯಿ ವಿಜಯನ್ ಧರ್ಮಾದಂ ವಿಧಾನಸಭಾ ಕ್ಷೇತ್ರದಲ್ಲಿ ಬಹುದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದ ಧರ್ಮಾದಂ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರವಾದ ಪೈಪೋಟಿ ಇದ್ದದ್ದು ಸಿಪಿಐ(ಎಂ)ನಿಂದ ಸ್ಪರ್ಧಿಸಿದ ಪಿಣರಾಯಿ ವಿಜಯನ್ ಹಾಗೂ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಸಿ.ರಘುನಾಥನ್ ಅವರ ಮಧ್ಯೆ. ಜಿದ್ದಾಜಿದ್ದಿನ ಕಣದಲ್ಲಿ ಪಿಣರಾಯಿ ವಿಜಯನ್ ಅವರು 50,000 ಹೆಚ್ಚಿನ ಮತಗಳ ಅಂತರದಲ್ಲಿ ಗೆಲವು ಸಾಧಸಿದ್ದಾರೆ.
ಮತವಿವರ ಹೀಗಿದೆ
- ಪಿಣರಾಯಿ ವಿಜಯನ್ – 95522 (ಶೇ.59.61) – ಸಿಪಿಐ(ಎಂ)
- ಸಿ.ರಘುನಾಥನ್ – 45399 (ಶೇ.28.33) – ಕಾಂಗ್ರೆಸ್
- ಸಿ.ಕೆ.ಪದ್ಮನಾಭನ್ – 14623 (ಶೇ.9.13) – ಬಿಜೆಪಿ
ರಾಜ್ಯದಲ್ಲಿ ನಡೆದ 140 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ 97 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿ ಸತತ ಎರಡನೇ ಬಾರಿಗೆ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ಅಧಿಕಾರ ಹಿಡಿದಿದೆ.