ದಿಲ್ಲಿ ಗಡಿಗಳಲ್ಲಿ ರೈತರ ಐತಿಹಾಸಿಕ ಹೋರಾಟ 10ತಿಂಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ 10 ಗಂಟೆಗಳ ಬಂದ್ ಕರೆಗೆ ದೇಶಾದ್ಯಂತ ಸ್ಪಂದಿಸುತ್ತಿರುವ ರೈತರು ಮತ್ತು ಇತರ ಜನವಿಭಾಗಗಳು ಪ್ರತಿಭಟನೆಗಳು, ಮತಪ್ರದರ್ಶನಗಳು, ಹೆದ್ದಾರಿ ತಡೆ , ರೈಲು ತಡೆಗಳನ್ನು ನಡಸುತ್ತಿರುವ ಸುದ್ದಿಗಳು ಸಮಾರಾಗಿ ಎಲ್ಲ ರಾಜ್ಯಗಳಿಂದ ಬರುತ್ತಿವೆ. ಅಂಬುಲೆನ್ಸ್ ಗಳು ಇತ್ಯಾದಿ ತುರ್ತು ಸೇವೆಗಳನ್ನು ಮಾತ್ರ ತಡೆಯುತ್ತಿಲ್ಲ ಎಂದು ರೈತರ ಸಂಘಟನೆಗಳು ಹೇಳಿವೆ.
ಪಂಜಾಬ್ ಮತ್ತು ಹರ್ಯಾಣದಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಲಿಂಕ್ ರೋಡ್ ಗಳು ಮತ್ತು ರೈಲ್ವೆ ಹಳಿಗಳಲ್ಲಿ ಬೆಳಿಗ್ಯಯಿಂದಲೇ ರೈತರು ಜಮಾಯಿಸಿ ತಡೆ ಹಾಕಿದ್ದಾರೆ.
ಪಂಜಾಬಿನಲ್ಲಿ 350ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆಗಳು ಆರಮಭವಾದ್ದರಿಂದ 14 ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ. ಹರ್ಯಾಣದ ಒಂದೇ ಜಿಲ್ಲೆಯಲ್ಲಿ 25 ಕಡೆಗಳಲ್ಲಿ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತಡೆ ಬಿದ್ದಿದೆ.
ಇದು ರೈತರು ರದ್ದು ಮಾಡಬೇಕೆಂದು ಆಗ್ರಹಿಸುತ್ತಿರುವ ಮೂರು ಕೃಷಿ ಕಾಯ್ದೆಗಳ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಸಹಿ ಹಾಕಿ ಒಂದು ವರ್ಷವಾಗುತ್ತಿರುವ ಸಂದರ್ಭ ಕೂಡ. ಸೆಪ್ಟೆಬರ್ 27, 2020ರಂದು ಅವರು ಸಹಿ ಇವು ಕಾಯ್ದೆಗಳಾದವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಮಧ್ಯಪ್ರದೇಶದಲ್ಲಿರುವ ಕೇಂದ್ರ ಕೃಷಿ ಮಂತ್ರಿಗಳ ಚುನಾವಣಾ ಕ್ಷೇತ್ರ ಹರ್ದಾದಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳೂ ಬಂದಾಗಿವೆ.
ದಿಲ್ಲಿ ಗಡಿಗಳಲ್ಲಿ ಮುಂಜಾನೆಯಿಂದಲೇ, 10 ತಿಂಗಳಿಂದ ರೈತರು ಜಮಾಯಿಸಿರುವ ದಿಲ್ಲಿಯ ಗಡಿಗಳಲ್ಲಿ, ಸಿಂಘು, ಟಿಕ್ರಿ ಮತ್ತು ಗಾಝೀಪುರದಲ್ಲಿ ಜನಸಂದಣಿ ಸೇರಲಾರಂಭಿಸಿತ್ತು. ದಿಲ್ಲಿ ಪೋಲೀಸರು ತಮ್ಮ ‘ಬಿಗಿ ಭದ್ರತೆ’ಯ ಕ್ರಮಗಳಿಂದಾಗಿ ಜನಗಳು ಮೆಟ್ರೋ ನಿಲ್ದಾಣಗಳು ಮುಚ್ಚಿದವು. ಕೆಂಪು ಕೋಟೆಯ ಸುತ್ತಮುತ್ತ ರಸ್ತೆಗಳನ್ನು ಮುಚ್ಚಲಾಗಿದೆ.
ಉತ್ತರಪ್ರದೇಶದಲ್ಲಿ ಗಾಜಿಯಾಬಾದ್ ಪೋಲಿಸರೇ ದುಲ್ಲಿಗೆ ತಲುಪು ಹೆದ್ದಾರಿಯನ್ನು ಮುಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳದ ಎಲ್‍ಡಿಎಫ್ ಸರಕಾರವಲ್ಲದೆ, ಪಂಜಾಬ್, ಆಂಧ್ರಪ್ರದೇಶ ಮತ್ತು ತಮಿಳುನಾಡು ಸರಕಾರಗಳು ರೈತರ ಈ ದೇಶವ್ಯಾಪಿ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿವೆ.
ಬಿಜೆಪಿಯೇತರ ಪಕ್ಷಗಳಲ್ಲಿ ಹೆಚ್ಚಿನವು ಈ ಕಾರ್ಯಾಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದು ಕೇರಳದ ರಾಜಧಾನಿ ತಿರುವನಂತಪುದಲ್ಲಿ ಸಂಪೂರ್ಣ ಬಂದ್ ನಡೆದಿದೆ ಎಂದು ವರದಿಯಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆಯನ್ನು ಬೆಂಬಲಿಸಿ ಸಾರಿಗೆ ನೌಕರರ ಸಂಘ ಸೇರಿದಂತೆ ರಾಜ್ಯದ ಹಲವಾರು ಕಾರ್ಮಿಕ ಸಂಘಟನೆಗಳು ಹರತಾಳಕ್ಕೆ ಬೆಂಬಲ ನೀಡಿರುವುದರಿಂದ ಸಾರಿಗೆ ಸೇರಿದಂತೆ ಹೆಚ್ಚಿನ ಚಟುವಟಿಕೆಗಳು ಸ್ಥಬ್ಧಗೊಂಡಿವೆ.
ಕೇರಳದ ಬಿಜೆಪಿ ಮುಖಂಡರೊಬ್ಬರು ಈ ಹರತಾಳ ‘ಜನ-ವಿರೋಧಿ’ ಎಂದು ತಮ್ಮ ಕೇಂದ್ರ ಮುಖಂಡರನ್ನು ಅನುಸರಿಸಿ ವರ್ಣಿಸಿದರೂ, ತಮ್ಮ ಪಕ್ಷಕ್ಕೆ ಸೇರಿದ ಕಾರ್ಮಿಕ ಸಂಘಟನೆಗೆ ಸಂಯೋಜನೆಗೊಂಡಿರುವ ಸಂಘಗಳು ಭಾರತ್ ಬಂದ್ ಬೆಂಬಲಿಸದಿದ್ದರೂ, ಅದನ್ನು ಬಹಿರಂಗವಾಗಿ ವಿರೋಧಿಸುತ್ತಿಲ್ಲ ಎಂದಿರುವುದಾಗಿ ವರದಿಯಾಗಿದೆ.
ತೆಲಂಗಾಣದಲ್ಲಿ ಎಡಪಕ್ಷಗಳು, ತೆಲುಗುದೇಶಂ ಮತ್ತು ಕಾಂಗ್ರೆಸ್ ಪಕ್ಷ ವಿವಿಧೆಡೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿವೆ.
ಒಡಿಶಾದಲ್ಲೂ ರಾಜಧಾನಿ ಭುವನೇಶ್ವರದಲ್ಲಿ ಮಾರುಕಟ್ಟೆಗಳಲ್ಲಿ ಕೆಲಸ ನಡೆಯುತ್ತಿಲ್ಲ, ಸಾರಿಗೆ ಸ್ಥಬ್ಧಗೊಂಡಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಳಿಗ್ಯೆ 6ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂಚಾರವನ್ನು ನಿಲ್ಲಿಸಿದೆ. ಹಲವೆಡೆಗಳಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪಿಕೆಟಿಂಗ್ ನಡೆಸಿ ಬೆಂಬಲ ಸೂಚಿಸಿವೆ. ಕೋವಿಡ್ ನಂತರ ಇತ್ತೀಚೆಗಷ್ಟೇ ಪುನರಾರಂಭಗೊಂಡ ಶಾಲೆ-ಕಾಲೇಜುಗಳು ಮುಚ್ಚಿವೆ.
ಚೆನ್ನೈನಲ್ಲಿ ರೈತ ಸಂಘಟನೆಗಳು ಮತ್ತು ಎಡಪಕ್ಷಗಳು ಮತಪ್ರದರ್ಶನ ನಡೆಸಿವೆ. ವಿಸಿಕೆ ಪಕ್ಷದ ಮುಖ್ಯಸ್ಥರು ಮತ್ತು ಡಿಎಂಕೆ ನೇತೃತ್ವದ ಕಾರ್ಮಿಕ ಸಂಘಟನೆಗಳು ಮತಪ್ರದರ್ಶನಗಳಲ್ಲಿ ಭಾಗವಹಿಸಸುತ್ತಿವೆ.
ಕಾವೇರಿ ಮುಖಜ ಭೂಮಿಯ ಪ್ರದೇಶದಲ್ಲಿ ಅಂಗಡಿ ಮತ್ತಿತರ ಸಂಸ್ಥೆಗಳು ಮುಚ್ಚಿವೆ.
ಮಹಾರಾಷ್ಟ್ರದಲ್ಲಿ 19 ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ. ಎಐಕೆಎಸ್ ಪ್ರಭಾವವಿರುವ ನಂದುರ್ಬಾರ್ ಜಿಲ್ಲೆಯ ತಲೋದ ತಾಲೂಕಿನಲ್ಲಿ ಅಂಗಡಿ ಮಾಲಕರು ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು.